ಕಲಬುರಗಿ: ಮಾರ್ಚ್ 12ರಿಂದ ಕಲಬುರಗಿಯಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ವರೆಗೆ ಸಂಚಾರ ಪ್ರಾರಂಭಿಸಲಿರುವ “ವಂದೇ ಭಾರತ್” ರೈಲಿನ (Vande Bharat train) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು (Kalaburagi News) ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ಕಲಬುರಗಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ವರೆಗೆ ವಾರದಲ್ಲಿ ಆರು ದಿನ ವಂದೇ ಭಾರತ್ ರೈಲು ಓಡಾಟ ನಡೆಸಲಿದ್ದು, ಮಾ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: Vistara News Polling Booth : ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್: ವಿನೂತನ ಪ್ರಯೋಗಕ್ಕೆ ಡಾ. ಮಂಜುನಾಥ್ ಚಾಲನೆ
ಕಲಬುರಗಿಯಿಂದ ಬೆಳಗ್ಗೆ 5 .15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೈಯಪ್ಪನಹಳ್ಳಿ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 2.40 ಕ್ಕೆ ಹೊರಟು ರಾತ್ರಿ 11:30ಕ್ಕೆ ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ. ಬೆಂಗಳೂರು ಬೈಯ್ಯಪ್ಪನಹಳ್ಳಿಯಿಂದ ಗುರುವಾರ ಹಾಗೂ ಕಲ್ಬುರ್ಗಿಯಿಂದ ಶುಕ್ರವಾರ ವಂದೇ ಭಾರತ್ ರೈಲು ಸಂಚಾರ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ
ಕಲಬುರಗಿಯಿಂದ ಬೆಳಗ್ಗೆ 5 .15ಕ್ಕೆ ಹೊರಟು ವಾಡಿಗೆ 5.40ಕ್ಕೆ, ರಾಯಚೂರಿಗೆ 06.53, ಮಂತ್ರಾಲಯಂ ರೋಡ್ 07.08, ಗುಂತಕಲ್ 08.25, ಅನಂತಪುರ 09.28, ಧರ್ಮಾವರಂ 10.50, ಯಲಹಂಕ 12.45 ಕ್ಕೆ, ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ 2 ಗಂಟೆಗೆ ತಲುಪಲಿದೆ.
ಬೈಯ್ಯಪ್ಪನಹಳ್ಳಿಯಿಂದ ಮಧ್ಯಾಹ್ನ 02.40ಕ್ಕೆ ಹೊರಟು ಯಲಹಂಕಕ್ಕೆ 03.08, ಧರ್ಮಾವರಂ ಸಾಯಂಕಾಲ 5:45, ಅನಂತಪುರ 05.58, ಗುಂತಕಲ್ 7.00, ಮಂತ್ರಾಲಯಂ ರೋಡ್ ರಾತ್ರಿ 08.15, ರಾಯಚೂರು 8:45, ವಾಡಿ 11.05 ಮತ್ತು ಕಲಬುರಗಿಗೆ ರಾತ್ರಿ 11:30ಕ್ಕೆ ತಲುಪಲಿದೆ.
ಇದನ್ನೂ ಓದಿ: Oscars 2024: ಯಾರಿಗೆ, ಯಾವ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ? ಕಂಪ್ಲೀಟ್ ಲಿಸ್ಟ್ ಇಲ್ಲಿದೆ!
ಕಲಬುರಗಿಯಲ್ಲಿ ಎರಡನೇ ಪಿಟ್ ಲೈನ್ ಪೂರ್ಣಗೊಂಡು ನಿರ್ವಹಣಾ ಸೌಲಭ್ಯ ಪ್ರಾರಂಭವಾದ ಬಳಿಕ ವಂದೇ ಭಾರತ್ ರೈಲು ಕಲಬುರಗಿಯಿಂದ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದವರೆಗೆ ಸಂಚಾರ ನಡೆಸಲಿದೆ ಮತ್ತು 45 ನಿಮಿಷ ಬೇಗ ತಲುಪಲಿದೆ.
ಮೊದಲು ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಬರಲು ಕನಿಷ್ಠ ಒಂದೂವರೆ ದಿವಸ ಆಗುತ್ತಿತ್ತು. ಆದರೆ ವಂದೇ ಭಾರತ್ ಶುರುವಾಗುವುದರಿಂದ 24 ಗಂಟೆಯೊಳಗೆ ನಾವು ಕಲಬುರಗಿಗೆ ತಲುಪಬಹುದು. ಬೆಳಗ್ಗೆ ವಂದೇ ಭಾರತ್ ರೈಲಿನಿಂದ ಬೆಂಗಳೂರಿಗೆ ತಲುಪಿ ಸಂಜೆ ಮತ್ತು ರಾತ್ರಿ ವೇಳೆ ಇರುವ ಕರ್ನಾಟಕ ಎಕ್ಸ್‌ಪ್ರೆಸ್ ಅಥವಾ ಹಾಸನ್-ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಿಂದ ಕಲಬುರಗಿಗೆ ಮರುದಿನ ಮರಳಿ ಬರಬಹುದಾಗಿದೆ.
ಇದನ್ನೂ ಓದಿ: WPL 2024: ಸೋಲಿನ ಆಘಾತದಲ್ಲಿದ್ದ ಆರ್ಸಿಬಿ ಆಟಗಾರ್ತಿಯರನ್ನು ಸಮಾಧಾನಿಸಿ ಕ್ರೀಡಾಸ್ಫೂರ್ತಿ ತೋರಿದ ಡೆಲ್ಲಿ ಕ್ಯಾಪಿಟಲ್ಸ್
ವಂದೇ ಭರತ್ ಶುರುವಾಗುವುದರಿಂದ ಈಗಿರುವ ಬಸವ ಎಕ್ಸ್‌ಪ್ರೆಸ್, ಸೋಲಾಪುರ್ ಹಾಸನ್ ಎಕ್ಸ್‌ಪ್ರೆಸ್ ಹಾಗೂ ಇತರೆ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.