Site icon Vistara News

Kalaburagi News: ಉತ್ತಮ ಸಂಸ್ಕಾರ, ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಗುರುನಂಜೇಶ್ವರ ಸ್ವಾಮೀಜಿ

Amarashri award for veera mahanta Shivacharya swamiji at chincholi

ಕಲಬುರಗಿ: ಪಾಲಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ‌ ಸಂಸ್ಕಾರ ಮತ್ತು ಶಿಕ್ಷಣ (Education) ನೀಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಭರತನೂರಿನ ವಿರಕ್ತ ಮಠದ ಗುರುನಂಜೇಶ್ವರ ಸ್ವಾಮೀಜಿ ತಿಳಿಸಿದರು.

ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ಅಮರೇಶ್ವರ ಹಿರೇಮಠದಲ್ಲಿ ಮಂಗಳವಾರ ಶ್ರೀ ಶಾಂತಲಿಂಗ ಶಿವಯೋಗಿಗಳ 47 ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ಅಮರೇಶ್ವರ ಹಿರೇಮಠವು ಧರ್ಮ ಕಾರ್ಯ ,ಉತ್ತಮ‌ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಉತ್ತಮ ಕಾರ್ಯ ಮಾಡುತ್ತಿದೆ, ಸಾಧಕರಿಗೆ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಗಣ್ಯರಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಗುರುವಿನ ಪರಂಪರೆಯನ್ನು ಶ್ರೀಮಠವು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Uttara Kannada News: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕಿದೆ ಎಂಬ ಬ್ಯಾನರ್‌ ಪ್ರದರ್ಶಿಸಿದ ವಿದ್ಯಾರ್ಥಿಗಳು

ಚಿಣಮಗೇರಾದ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರು ಅಮರಶ್ರೀ ಪ್ರಶಸ್ತಿ ಸ್ವೀಕರಿಸಿ, ಆಶೀರ್ವಚನ ನೀಡಿದರು.

ಈ ವೇಳೆ ವಿಸ್ತಾರ ನ್ಯೂಸ್‌ ಯಾದಗಿರಿ ಜಿಲ್ಲಾ ವರದಿಗಾರ ನಾಗಪ್ಪ ಮಾಲಿಪಾಟೀಲ್‌ ಅವರಿಗೆ ಶಾಂತಲಿಂಗ ಶಿವಯೋಗಿ ಸೇವಾರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ವಿಸ್ತಾರ ನ್ಯೂಸ್‌ ಯಾದಗಿರಿ ಜಿಲ್ಲಾ ವರದಿಗಾರ ನಾಗಪ್ಪ ಮಾಲಿಪಾಟೀಲ್‌ ಅವರಿಗೆ ಶಾಂತಲಿಂಗ ಶಿವಯೋಗಿ ಸೇವಾರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಳಾದ ಹಿರೇಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಣಮಗಿಯ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಲೇಪೇಟನ ತೆಂಗಿನಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಹೆಡಗಾದ ಷಡಕ್ಷರಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಅಮರೇಶ್ವರ ಹಿರೇಮಠದ ಶಂಭುಲಿಂಗಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಇದನ್ನೂ ಓದಿ: GST Collection: ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

ಈ ಸಂದರ್ಭದಲ್ಲಿ ಪಿಎಸ್‌ಐ ಶಿವಾನಂದ ಎಚ್.ತಿಪ್ಪಾ ಕೊರಡಂಪಳ್ಳಿ, ಶರಣು ಕೊರಡಂಪಳ್ಳಿ , ಜಯಶ್ರೀ ಸಜ್ಜನ್‌ಶೆಟ್ಟಿ, ಸಿದ್ಧಪ್ಪಗೌಡ ಪೊಲೀಸ್‌ ಪಾಟೀಲ್‌, ಕಾಳಪ್ಪಗೌಡ ಪೊಲೀಸ್‌ ಪಾಟೀಲ್‌, ಬಸವರಾಜ್‌ ಸಜ್ಜನ್‌ಶೆಟ್ಟಿ, ವಿಜಯಕುಮಾರ್‌ ಮಾಲಿಪಾಟೀಲ್‌, ಮಲ್ಲಿಕಾರ್ಜುನ ಮಾಲಿಪಾಟೀಲ್‌, ಸಿದ್ದಾರೆಡ್ಡಿ ಬಟಗೆರಿ ಸೇರಿದಂತೆ ಅನೇಕರು ಇದ್ದರು.

Exit mobile version