ಕಲಬುರಗಿ: ಶಿಕ್ಷಣಪ್ರೇಮಿ, ಮಾಜಿ ಎಂಎಲ್‌ಸಿ, ರಾಷ್ಟ್ರ ಏಕೀಕರಣ ಹೋರಾಟಗಾರ ಮಾರುತಿರಾವ್ ಡಿ. ಮಾಲೆ ಅವರು ನಿಧನರಾಗಿದ್ದಾರೆ. ಮೃತರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಬೀದರ್ ಜಿಲ್ಲೆಯ ಘಾಟಬೊರಾಳ್ ಗ್ರಾಮದ ನಿವಾಸಿ, 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿ ಅದರ ಫೌಂಡರ್ ಜೆನರಲ್ ಸೆಕ್ರೆಟರಿ ಆಗಿದ್ದ ಮಾರುತಿರಾವ್ ಮಾಲೆ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದರು.
ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣಕ್ಕೆ ವಿರೋಧಿಸಿ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ವಿರುದ್ಧ ಧೀರತನದಿಂದ ಹೋರಾಟ ನಡೆಸಿದ್ದರು. ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾರುತಿರಾವ್, ನಿನ್ನೆ ರಾತ್ರಿ ಕೊನೆಯುಸಿರು ಎಳೆದರು.
ಕಲಬುರಗಿ ಜಿಲ್ಲೆಯ ಹಾರುತಿ ಹಡಗಿಲ್ ಗ್ರಾಮದಲ್ಲಿ ಮಾರುತಿರಾವ್ ಮಾಲೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ. ಇಂದು 11 ಗಂಟೆಗೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಗೃಹಸಚಿವ ಜಿಪರಮೇಶ್ವರ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂ.ಫಾತಿಮಾ ಬೀವಿ ನಿಧನ