Site icon Vistara News

Kalaburagi News: ಭೀಮಾ ನದಿಗೆ ನೀರು ಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮನವಿ

memorandum to DCM D.K.Shivakumar to release water to Bhima river

ಕಲಬುರಗಿ: ಇಂಡಿ, ಚಡಚಣ ಮತ್ತು ಅಫಜಲಪುರ ತಾಲೂಕಿನ ಭೀಮಾ ನದಿಯ (Bhima River) ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಐಬಿಸಿ ಮೂಲಕ 1.5 ಟಿಎಂಸಿ ನೀರನ್ನು ಭೀಮಾನದಿಗೆ ಮತ್ತು ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.5 ಟಿಎಂಸಿ ನೀರನ್ನು ಹರಿಸುವ ಕುರಿತು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರು ಜಂಟಿಯಾಗಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ಮನವಿ (Kalaburagi News) ಸಲ್ಲಿಸಿದರು.

ಭೀಕರ ಬರಗಾಲ ಇರುವುದರಿಂದ ನದಿ, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಮೊದಲಾದ ಜಲಮೂಲಗಳು ಬತ್ತಿ ಹೋಗಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.

ಇದನ್ನೂ ಓದಿ: Raichur News: ಲಿಂಗಸಗೂರಿನಲ್ಲಿ ಮಾ. 29ರಿಂದ ರಾಜ್ಯಮಟ್ಟದ ಕಾನೂನು ಕಾರ್ಯಾಗಾರ

ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ನದಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಹಾಗೂ ಜನ-ಜಾನುವಾರುಗಳಿಗೆ ಐ.ಬಿ.ಸಿ. ಮುಖಾಂತರ ಸುಮಾರು ಪ್ರತಿದಿನ 150 ಕ್ಯೂಸೆಕ್‌ ಭೀಮಾ ನದಿಗೆ ಹರಿಸಬೇಕಿದೆ ಹಾಗೂ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಈ ಬಾರಿಯೂ ನೀರು ಹರಿಸಿಲ್ಲ.

ಇದರಿಂದ ಇಂಡಿ ಮತ್ತು ಚಡಚಣ ಪಟ್ಟಣ ಹಾಗೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಜಲಮೂಲವಾದ ಭೀಮಾ ನದಿಯಿಂದ ಸರಬರಾಜು ಮಾಡಬೇಕಿರುವುದರಿಂದ ಹಾಗೂ ಸಿಂದಗಿ, ಇಂಡಿ, ದೇವರಹಿಪ್ಪರಗಿ, ಅಲಮೇಲ ಪಟ್ಟಣಗಳಿಗೆ ಮತ್ತು 5 ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸುಮಾರು ಬಹು ಗ್ರಾಮ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಅತೀ ಅನಿವಾರ್ಯವಾಗಿದೆ.

ಇದನ್ನೂ ಓದಿ: Koppala News: ಅಮೇರಿಕಾದ ಎಂಜಿನಿಯರ್‌ನಿಂದ ಕಾರಟಗಿ ಸರ್ಕಾರಿ ಶಾಲೆಗೆ 1.5 ಲಕ್ಷ ರೂ. ಮೌಲ್ಯದ ಪುಸ್ತಕಗಳ ದೇಣಿಗೆ

ತಕ್ಷಣವೇ ಭೀಮಾನದಿಗೆ ಒಂದೂವರೆ ಟಿಎಂಸಿ ನೀರನ್ನು ಐಬಿಸಿ ಮೂಲಕ ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರಿನ ಸಲುವಾಗಿ ಬಿಡುಗಡೆಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Exit mobile version