ಅಫಜಲಪುರ: ತಾಲೂಕು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನ್ಯಾಯವಾದಿ ಎಸ್.ಎಸ್. ಪಾಟೀಲ್ ಅವಿರೋಧವಾಗಿ (Kalaburagi News) ಆಯ್ಕೆಯಾದರು.
ಪಟ್ಟಣದ ವಕೀಲರ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಉಮೇದುವಾರರಾಗಿ ಎಸ್.ಎಸ್ ಪಾಟೀಲರನ್ನು ಹೊರತುಪಡಿಸಿ ಉಳಿದ ಯಾವುದೇ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಮಾಡದೆ ಇರುವುದರಿಂದ ಎಸ್.ಎಸ್. ಪಾಟೀಲ್ ಅವರನ್ನು ತಾಲೂಕಿನ ವಕೀಲರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಶಂಕರರಾವ ಜಿ. ಹುಲ್ಲೂರ ಘೋಷಿಸಿದರು ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿ ದತ್ತು ಪೂಜಾರಿ ಕಾರ್ಯ ನಿರ್ವಹಿಸಿದರು.
ಇದನ್ನೂ ಓದಿ: Vijayanagara News: ವಿಫಲ ಕೊಳವೆಬಾವಿ ಮುಚ್ಚಲು ಕ್ರಮವಹಿಸಿ: ಡಿಸಿ ಎಂ.ಎಸ್. ದಿವಾಕರ್
ನೂತನವಾಗಿ ಆಯ್ಕೆಯಾದ ಎಸ್.ಎಸ್. ಪಾಟೀಲ್ ಮಾತನಾಡಿ, ಸಂಘದ ಎಲ್ಲ ಹಿರಿಯ ವಕೀಲರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಸಂಘದ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಹೀಗಾಗಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.
ನಿಕಟಪೂರ್ವ ಅಧ್ಯಕ್ಷ ಎಂ.ಎಲ್. ಪಟೇಲ್ ಬಳೂಂಡಗಿ ಮಾತನಾಡಿದರು.
ಇದನ್ನೂ ಓದಿ: Job Alert: ಅಂಗನವಾಡಿಯಲ್ಲಿದೆ 513 ಹುದ್ದೆ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ; ಏ. 19 ಕೊನೆಯ ದಿನ
ಈ ಸಂದರ್ಭದಲ್ಲಿ ವಕೀಲರಾದ ಶರದ್ ಪೂಜಾರಿ, ಬಿ.ಎಸ್. ಧಾನಮ್ಮಗುಡಿ, ಎಫ್.ಎಂ. ಇನಾಮದಾರ್, ಕೆ.ಜಿ ಪೂಜಾರಿ, ಡಿ.ಡಿ ದೇಶಪಾಂಡೆ, ಎಸ್.ಜೆ ಗುತ್ತೇದಾರ್, ವಾಸಿಮ್ ಜಾಗೀರದಾರ್, ಸುಧೀರ ಹತ್ತಿ, ಸಿ.ಎಸ್ ಹಿರೇಮಠ, ಅರ್ಜುನ ಕೆರೂರ, ಮಂಜುನಾಥ ಕೊಳ್ಳಿ, ಎಂ.ಎಸ್ ಪಾಟೀಲ್, ರಾಜೇಂದ್ರ ಸರದಾರ, ಅನಿತಾ ದೊಡ್ಮನಿ, ಮಹಿಬೂಬಿ ಪಟೇಲ್, ಸುಪ್ರಿಯಾ ಅಂಕಲಗಿ, ಪದ್ಮರಾಜ ಪೂಜಾರಿ, ಪ್ರಶಾಂತ ಪಾಟೀಲ, ಎಸ್.ಟಿ ರಾಠೋಡ, ಸಿದ್ಧರಾಮ ಇಸ್ಪೂರ, ಅನೀಲ ಜಮಾದಾರ, ಮಂಜುನಾಥ ಧರಿಗೊಂಡ, ರೇವಣಸಿದ್ಧ ಹೊಳ್ಳಿಕೇರಿ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.