ಶಹಾಬಾದ್: ತಾಲೂಕಿನ ಸಹರಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ (Teachers Day) ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪತ್ರಕರ್ತ ಲೋಹಿತ್ ಕಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಕರಿಗೆ ಗೌರವ ಕೊಟ್ಟು ಅವರ ಮಾರ್ಗದರ್ಶನದಲ್ಲಿ ನಡೆದವರು ಜೀವನದಲ್ಲಿ ಉನ್ನತಿ ಹೊಂದುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್ ಎಫೆಕ್ಟ್ ಇದೆಯಾ?
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮರ್ಲಿಂಗ ಯಾದ್ಗೀರ್ ಮಾತನಾಡಿ, ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಗುರು ಎಂಬ ಶಕ್ತಿಯಿಂದ ಮಾತ್ರ ಜಗತ್ತು ನಡೆಯುತ್ತಿದೆ, ಶಾಲೆಯ ಕೊಣೆಗಳಲ್ಲಿ ದೇಶದ ಎಲ್ಲ ರೀತಿಯ ವ್ಯಕ್ತಿಗಳು ವಿಶೇಷ ತಜ್ಞರು ಸೃಷ್ಟಿಗೊಳ್ಳುತ್ತಾರೆ ಇದಕ್ಕೆ ಕಾರಣವೇ ಗುರುಗಳು ಎಂದು ಅವರು ಹೇಳಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಶಿಕ್ಷಕರನ್ನು ವಿದ್ಯಾರ್ಥಿ ಮತ್ತು ಪಾಲಕ ಪೋಷಕರಿಂದ ಗೌರವಿಸಿ, ಸನ್ಮಾನಿಸಿಲಾಯಿತು. ಶಾಲೆಯ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: Koppala News: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಮೈನಾಳಕರ, ರೋಷನಾ ಹರ್ಮನ್, ಕಾಂಚನಾ ಕಟ್ಟಿಮನಿ, ಸಬೀನಾ ಬೇಗಂ, ಸಾನಿಯಾ ಬಾನು, ಗೀತಾ ಹುಲಿ, ಪೂರ್ಣಿಮಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಉಪಸ್ಥಿತರಿದ್ದರು.