Site icon Vistara News

Wolf attack : ಕಲಬುರಗಿಯಲ್ಲಿ ತೋಳ ದಾಳಿ; ಓರ್ವನ ಸ್ಥಿತಿ ಗಂಭೀರ, 7 ಮಂದಿಗೆ ಗಾಯ

Wolf attacks 8 people in Chalagera village

ಕಲಬುರಗಿ: ಕಲಬುರಗಿಯ ಆಳಂದ ತಾಲೂಕಿನ ಚಲಗೇರ ಗ್ರಾಮದಲ್ಲಿ 8 ಜನರ ಮೇಲೆ ತೋಳ‌ವೊಂದು (Wolf attack) ದಾಳಿ ಮಾಡಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಗಾಯಗೊಂಡಿದ್ದಾರೆ.

ಶರಣಪ್ಪ ಗುರಣ್ಣ ಧಲ್ಲು ಎಂಬುವವರಿಗೆ ತೀವ್ರ ಗಾಯವಾಗಿದೆ. ಶರಣಪ್ಪ ಶಿವ ಗುಂಡ ಜಮಾದಾರ, ಶರಣಪ್ಪ ಜಟ್ಟೆಪ್ಪ ಜಮಾದಾರ ಹಾಗೂ ಅನಸುಬಾಯಿ ಮಾರುತಿ ಮುಗಳಿ, ನೀಲಪ್ಪ ಹಾಲೋಳ್ಳಿ, ಮಲ್ಲಪ್ಪ ದತ್ತಣ್ಣ ಜಮಾದಾರ ಮತ್ತು ಸುನೀಲ್ ಮುಲಗೆ, ಶರಣಪ್ಪ ಹಣಮಂತರಾವ ದಿಂಡುರೆ ಎಂಬುವವರ ಮೇಲೆ ತೋಳ ದಾಳಿ ಮಾಡಿದೆ.

ನಾಲ್ವರಿಗೆ ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಗಾಯಗೊಂಡವರಿಗೆ ಸೊಲ್ಲಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಶು ವೈದ್ಯರು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

ಇದನ್ನೂ ಓದಿ: Hasana News : ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹಾಸನಕ್ಕೆ ಮತ್ತೆ ಎಂಟ್ರಿ ಕೊಟ್ಟ ಬೀಟಮ್ಮ ಗ್ಯಾಂಗ್‌

ಹಾಸನದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಹಾಸನಕ್ಕೆ ಬೀಟಮ್ಮ ಹೆಸರಿನ ಆನೆಗಳ ಹಿಂಡು ಎಂಟ್ರಿ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದ ಬೀಟಮ್ಮ ಗ್ಯಾಂಗ್ ಈಗ ಹಾಸನಕ್ಕೆ ವಾಪಸ್‌ ಆಗಿದೆ.

ಬೇಲೂರು ತಾಲೂಕಿನ ಮಂಡಲಮನೆ, ಅಂಜನಹಳ್ಳಿ, ಕುಂಬಾರಹಳ್ಳಿ, ಹಳೇ ಗೆಂಡೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಗ್ರಾಮಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. 22 ಕಾಡಾನೆಗಳ ಹಿಂಡಿನಿಂದ ಕಾಫಿ, ಅಡಿಕೆ, ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆಯು ನೆಲಸಮವಾಗಿದೆ.

ಮನೆಯ ಬಳಿಯೇ ಕಾಡಾನೆಗಳ ಹಿಂಡು ಬರುತ್ತಿದ್ದು, ಆತಂಕದಲ್ಲೇ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಇತ್ತ ಜೀವ ಕೈಯಲ್ಲಿ ಹಿಡಿದು ಹೊಲ, ಗದ್ದೆ, ಕಾಫಿ ತೋಟಗಳಿಗೆ ತೆರಳುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version