ಯಲ್ಲಾಪುರ: ಶೂನ್ಯ ದಾಖಲಾತಿ ಹೊಂದಿದ್ದ ಹಿನ್ನಲೆಯಲ್ಲಿ ಸರ್ಕಾರ ಮುಚ್ಚುವ ತೀರ್ಮಾನ ಮಾಡಿದ್ದ ತಾಲೂಕಿನ ಕಳಚೆಯ ಸರ್ಕಾರಿ ಪ್ರೌಢಶಾಲೆಯನ್ನು (Kalache Government High School) ಶಾಸಕ ಶಿವರಾಮ ಹೆಬ್ಬಾರ್ (MLA Shivaram Hebbar) ಅವರ ಪ್ರಯತ್ನದ ಫಲವಾಗಿ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪ ಗ್ರಾಮದ (Hunashettikoppa village) ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸುವಂತೆ (Shifted) ಸರ್ಕಾರ ಆದೇಶ ಹೊರಡಿಸಿದೆ.
ಶೂನ್ಯ ದಾಖಲಾತಿಯನ್ನು ಹೊಂದಿರುವ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸುವುದರಿಂದ ಈ ಭಾಗದ ಕರಡೊಳ್ಳಿ, ಕಳಸೂರು, ಹುಲಗೋಡ, ಬಸಳೆಬೈಲ್ ಹಾಗೂ ಖಂಡ್ರಾನಕೊಪ್ಪ ಸೇರಿದಂತೆ ಹಲವಾರು ಭಾಗದ ವಿದ್ಯಾರ್ಥಿಗಳಿಗೆ ತಮ್ಮೂರಿನಲ್ಲಿಯೆ ಉತ್ತಮ ಗುಣಮಟ್ಟದ ಪ್ರೌಢ ಶಿಕ್ಷಣವನ್ನು ಪಡೆಯುವುದಕ್ಕೆ ಅನುಕೂಲವಾಗಲಿದೆ.
ಇದನ್ನೂ ಓದಿ: Uttara Kannada News: ಬ್ಯಾಗ್ ಕಸಿದು ಪರಾರಿಯಾಗಿದ್ದ ಆರೋಪಿಯ ಬಂಧನ
ಹುಣಶೆಟ್ಟಿಕೊಪ್ಪ ಗ್ರಾಮದಲ್ಲಿ ಪ್ರೌಢಶಾಲೆಯನ್ನು ಮಂಜೂರುಗೊಳಿಸುವ ದೃಷ್ಟಿಯಿಂದ ಶಾಸಕರು ತಾವು ಸಚಿವರಾದ ಅವಧಿಯಲ್ಲಿ ಇಂಡೋ – ಮಿಮ್ ಕಂಪನಿಯ ಸಿ.ಎಸ್.ಆರ್ ಅಡಿಯಲ್ಲಿ 4 ತರಗತಿಯ ಕೊಠಡಿಯನ್ನು ಮಂಜೂರುಗೊಳಿಸಿದ್ದರು. ಕೊಠಡಿಯ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಇನ್ನು ಕೆಲವು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: Asia Cup: ಏಷ್ಯಾಕಪ್‌ಗೆ ತಂಡದ ಪಟ್ಟಿ ಫೈನಲ್; ಸಂಜು ಸ್ಯಾಮ್ಸನ್ ಔಟ್
ಶಾಸಕ ಶಿವರಾಮ ಹೆಬ್ಬಾರ್ ಅವರು ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪ ಗ್ರಾಮಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ, ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಈ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.