Site icon Vistara News

Hampi Temple : ಉರುಳಿಬಿತ್ತು ಹಂಪಿಯ ಲಕ್ಷ್ಮೀ ದೇವಾಲಯದ ಗೋಪುರದ ಕಲಶ

Temple

#image_title

ವಿಜಯನಗರ: ಹ‌ಂಪಿಯ ಮಾಲ್ಯವಂತ ರಘುನಾಥ ದೇವಾಲಯದ ಆವರಣದಲ್ಲಿರುವ ಲಕ್ಷ್ಮೀ ದೇವಾಲಯದ ಗೋಪುರದ ಕಲಶ (Hampi Temple) ಉರುಳಿಬಿದ್ದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿರುವ ಪುರಾತನ ಸ್ಮಾರಕ, ದೇವಾಲಯಗಳ ಸಂರಕ್ಷಣೆ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳ ನಡುವೆ ಈ ಘಟನೆ ನಡೆದಿದ್ದು, ಜನರನ್ನು ಕೆರಳಿಸಿದೆ.

ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಹಲವು ಇಲಾಖೆಗಳಿವೆ, ಸೆಕ್ಯೂರಿಟಿ ಏಜೆನ್ಸಿಗಳಿವೆ. ಆದರೂ ಅಗಾಗ ಸ್ಮಾರಕಗಳಿಗೆ ಧಕ್ಕೆಯಾಗುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸ್ಮಾರಕಗಳ ಸಂರಕ್ಷಣೆಗೆ ಹಂಪಿ ಭಾಗದ ಸ್ಥಳೀಯರು ಒತ್ತಾಯಿಸಿದ್ದಾರೆ.

ಸ್ಮಾರಕಗಳಲ್ಲಿ ಹೆಚ್ಚುತ್ತಿದೆ ಮೋಜುಮಸ್ತಿ

ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳಲ್ಲಿ ಪ್ರವಾಸಿಗರು ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತ ಪರಿಸ್ಥಿತಿ ಇದೆ.

ಕೆಲವು ದಿನಗಳ ಹಿಂದೆ ವಿದೇಶೀಯರು ಸ್ಮಾರಕಗಳಲ್ಲಿ ಮೋಜು ಮಸ್ತಿ ಮಾಡಿದ ದೃಶ್ಯಗಳು ವೈರಲ್‌ ಆಗಿವೆ. ಇವರು ಸ್ಮಾರಕಗಳ ಮೇಲೆ ಏರಿ ಹಾಡು ಕುಣಿತ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

ವಿದೇಶಿಯರ ಮೋಜುಮಸ್ತಿ

ಸ್ಮಾರಕಗಳ ಸಂರಕ್ಷಣೆಗೆ ಹಂಪಿ ಉಳಿವಿಗೆ ನಾನಾ ಇಲಾಖೆಗಳು ಕೆಲಸ ಮಾಡುತ್ತಿವೆಯಾದರೂ ಇಂಥ ಕೃತ್ಯಗಳನ್ನು ತಡೆಯುವವರು ಯಾರು ಇಲ್ಲ ಎಂಬಂತಾಗಿದೆ. ಕೆಲವು ಕಡೆ ಸ್ಮಾರಕಗಳನ್ನು ಉರುಳಿಸಿರುವ ಉದಾಹರಣೆಗಳಿವೆ. ಹಿಂದಿನಿಂದಲೂ ಸ್ಮಾರಕಗಳನ್ನು ಉರುಳಿಸಿರೋ ಉದಾಹರಣೆಗಳೂ ಇವೆ.

ಇದನ್ನೂ ಓದಿ : Chetan Kumar: ಸ್ಟಾರ್‌ಗಳು ಸ್ಮಾರಕಗಳಿಗೆ ಸಾರ್ವಜನಿಕರ ಜಾಗ, ಹಣ ಬಳಸಬಾರದು: ನಟ ಚೇತನ್‌

Exit mobile version