ಬೆಂಗಳೂರು: ಮಹಾರಾಷ್ಟ್ರ ರಾಮಟೇಕ್‌ನಲ್ಲಿರುವ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ವಿದುಷಿ ಡಾ.ಎಸ್.ಆರ್.ಲೀಲಾ ಅವರಿಗೆ ನೀಡಿ ಗೌರವಿಸಲಾಯಿತು.
ಮಹಾರಾಷ್ಟ್ರ ರಾಮಟೇಕ್‌ನಲ್ಲಿರುವ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯವು ತನ್ನ ಸ್ಥಾಪನಾ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿಯನ್ನು ಕೊಡಮಾಡುತ್ತಾ ಬರುತ್ತುದೆ. ಇದರ ನಿಮಿತ್ತ ಭಾನುವಾರ (ಸೆ.೧೮) ರಂದು ವಿವಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇಶಾದ್ಯಂತ ನಾಲ್ವರು ವಿದ್ವಾಂಸರಿಗೆ ಈ ಪ್ರಶಸ್ತಿ ನೀಡಿ ಗೌರಿಸಲಾಗುತ್ತದೆ. ಈ ಪೈಕಿ ಕರ್ನಾಟಕದಿಂದ ಡಾ.ಎಸ್.ಆರ್.ಲೀಲಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50,000 ರೂಪಾಯಿ ನಗದನ್ನು ಒಳಗೊಂಡಿದೆ.
ಇದನ್ನೂ ಓದಿ | ನೇತ್ರದಾನದ ಜಾಗೃತಿಯಿಂದ ಸೇವಾ ಮನೋಭಾವ, ಸಂಸ್ಕಾರ: ಸಕ್ಷಮ ಪ್ರಾಂತ ಅಧ್ಯಕ್ಷ ಡಾ. ಕೆ. ಎಲ್.ಸುಧೀರ್ ಪೈ