Site icon Vistara News

Kalika Habba: ಕಲಿಕಾ ಹಬ್ಬದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಎಂದ ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ

Kalika Habba sirsi

#image_title

ಶಿರಸಿ: “ಕಲಿಕಾ ಹಬ್ಬದಂತಹ (Learning Festival) ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

ನಿಲೇಕಣಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿ, “ಇಂತಹ‌ ವಿಶಿಷ್ಟ ಕಲಿಕಾ ಹಬ್ಬ ನಮ್ಮ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಪ್ರಾರಂಭವಾಗಿರುವುದು ಸಂತಸದ ಸಂಗತಿಯಾಗಿದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿರುವುದು ವಿಶೇಷವಾಗಿದೆ” ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ಮಾತನಾಡಿ, “ಕಳೆದ ಎರಡು ವರ್ಷಗಳಲ್ಲಿ ಆದ ಕಲಿಕಾ ಕೊರತೆಯನ್ನು ನೀಗಿಸಲು ಈ ಕಲಿಕಾ ಹಬ್ಬ ಸಹಾಯವಾಗುತ್ತಿದೆ. ಇಡೀ ರಾಜ್ಯದಲ್ಲಿ ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಹುಟ್ಟು ಹಾಕಿದ ಶಿರಸಿ ಶೈಕ್ಷಣಿಕ ಜಿಲ್ಲೆಯಾಗಿದೆ. ಬಹಳಷ್ಟು ಕ್ಲಸ್ಟರ್ ಗಳಲ್ಲಿ ಕಲಿಕಾ ಹಬ್ಬವನ್ನು ಬಹಳ ಸುಂದರವಾಗಿ ಮಾಡಿದ್ದಾರೆ. ಒಟ್ಟು ೩೦೦ ಮಕ್ಕಳನ್ನು ಒಳಗೊಂಡು ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ ಕಲಿಕಾ ಹಬ್ಬ ಗಳು ರಾಜ್ಯದಲ್ಲೇ ಹೆಸರು ಮಾಡುತ್ತಿದೆ” ಎಂದರು.

ಇದನ್ನೂ ಓದಿ: Viral Video: ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್

ಈ ಸಂದರ್ಭದಲ್ಲಿ ಶಿರಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ಹೆಗಡೆ, ನಗರಸಭೆ ಸದಸ್ಯ ಯಶವಂತ ಮರಾಠೆ, ಅಜೇಯ್ ನಾಯ್ಕ, ನಾರಾಯಣ ದೈಮನಿ, ಎಸ್ ಜಿ ಹೆಗಡೆ, ಪರಶುರಾಮ, ಎಂ ನಾಗರಾಜ್, ಕಲ್ಪನಾ, ಪ್ರಕಾಶ ತಾರೇಮುಕ್ಕಿ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: Viral News: ಬಹಳ ವಿಶೇಷವಾಗಿತ್ತು ಕರೀನಾ ಮಗನ ಬರ್ತ್ ಡೇ ಕೇಕ್; ಇಲ್ಲಿದೆ ನೋಡಿ ವಿಶೇಷ ಫೋಟೋ

ಜಿಲ್ಲಾ ಮಟ್ಟದ ಕಲಿಕಾ ಹಬ್ಬದ ಪ್ರಯುಕ್ತ ಮಾರಿಕಾಂಬಾ ದೇವಸ್ಥಾನದಿಂದ ನಿಲೇಕಣಿ ಪ್ರೌಢಶಾಲೆಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಚೆಂಡೆ ವಾದನ, ಬೇಡರ ವೇಷ , ಯಕ್ಷಗಾನ ಸೇರಿ ಹಲವು ಸ್ಥಳೀಯ ಕಲೆಗಳು ಮೆರುಗು ನೀಡಿತು.

ಇದನ್ನೂ ಓದಿ: IND VS AUS: ಭಾರತ-ಆಸೀಸ್​ ನಡುವಿನ ಟೆಸ್ಟ್ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ

Exit mobile version