ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಿರಿಯ ನಟಿ ಲೀಲಾವತಿ ಅವರಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಲಾಗಿತ್ತು. ಆದರೆ ವಯೋಸಹಜ ಕಾಯಿಲೆಯಿಂದ ಅವರು ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ. ಹೀಗಾಗಿ ಬುಧವಾರ 50ಕ್ಕೂ ಕಲಾವಿದರು ಲೀಲಾವತಿ ಅವರ ಮನೆಗೆ ತೆರಳಿ ಸನ್ಮಾನಿಸಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ನಟಿ ಲೀಲಾವತಿ ಅವರ ತೋಟದ ಮನೆಗೆ ಕನ್ನಡ ಕಲಾಬಳಗ ಭೇಟಿ ನೀಡಿತ್ತು. ಈ ವೇಳೆ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ ಮಾಡಿ ಹಿರಿಯ ಚೇತನವನ್ನು ಕಲಾವಿದರು ಗೌರವಿಸಿದ್ದಾರೆ.
ಇದನ್ನೂ ಓದಿ | Actor Rishi: ವೆಬ್ ಸಿರೀಸ್ ಪ್ರಪಂಚಕ್ಕೆ ʻಕವಲುದಾರಿʼ ಖ್ಯಾತಿಯ ರಿಷಿ ಎಂಟ್ರಿ! ಸ್ಟ್ರೀಮಿಂಗ್ ಯಾವಾಗ?
ಇದೇ ವೇಳೆ ನಟ, ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕಲಾವಿದರನ್ನು ಬರಮಾಡಿಕೊಂಡು, ಅವರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಇದಕ್ಕೂ ಮುನ್ನಾ ಲೀಲಾವತಿ ಅವರ ಸಿನಿಮಾಗಳ ಹಾಡುಗಳನ್ನು ಹಾಡಿ ನೃತ್ಯ ಮಾಡುವ ಕಲಾವಿದರು ಸಂಭ್ರಮಿಸಿದರು.
ಹಿರಿಯ ನಟರಾದ ಶ್ರೀಧರ್, ದೊಡ್ಡಣ್ಣ, ಸುಂದರ್ ರಾಜ್, ಜೈಜಗದೀಶ್, ಹಿರಿಯ ನಟ ಗಿರಿಜಾ ಲೋಕೇಶ್, ಪದ್ಮಾ ವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾ ಗಾಂಧಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಹಾಗೂ ಮಂಡಳಿ ಸದಸ್ಯರು ಸೇರಿ 50ಕ್ಕೂ ಹೆಚ್ಚು ಕಲಾವಿದರು ಇದ್ದರು.
ಇದನ್ನೂ ಓದಿ | Khushbu Sundar : ರವಿಚಂದ್ರನ್ ಜನುಮದಿನಕ್ಕೆ ನಟಿ ಖುಷ್ಬೂ ನೀಡಿದ ಸರ್‌ಪ್ರೈಸ್ ಹೇಗಿದೆ ನೋಡಿ!
ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | Kichcha Sudeepa: ಕಿಚ್ಚ ಸುದೀಪ್ ಜತೆ ತೆರೆ ಹಂಚಿಕೊಳ್ಳಲಿದ್ದಾರಾ ಗದರ್ -2 ನಟಿ?