ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರವು ವೀರ ಸಾವರ್ಕರ್ ಫೋಟೊ (Savarkar Photo Row) ಹಾಕಿರುವುದಕ್ಕೆ ರಾಜ್ಯದ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ದೇಶದ ಘನತೆಗಾಗಿ ಜೀವಾರ್ಪಣೆ ಮಾಡಿದ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಅವರ ಫೋಟೊ ಏಕೆ ಹಾಕಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಹಿತಿಗಳಾದ ಡಾ.ಕೆ.ಮರುಳಸಿದ್ಧಪ್ಪ, ಡಾ.ಜಿ ರಾಮಕೃಷ್ಣ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ವಿಜಯಾ, ಬಾ.ಕಾಳೇಗೌಡ ನಾಗವಾರ, ಕೆ.ಎಸ್ ವಿಮಲಾ, ಶ್ರೀಪಾದ ಭಟ್, ಡಾ. ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ ಹಾಗೂ ರುದ್ರಪ್ಪ ಹನಗವಾಡಿ ಅವರು ಪ್ರಕಟಣೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಫೋಟೊ ಕೂಡ ಇಲ್ಲ. ತರಾತುರಿಯಲ್ಲಿ, ರಹಸ್ಯವಾಗಿ ಸಮಾರಂಭ ಆಯೋಜಿಸುವ ಬದಲು ನಾಲ್ಕು ಜನರ ಜತೆ ಸಮಾಲೋಚನೆ ನಡೆಸಬೇಕು. ಮುಖ್ಯಮಂತ್ರಿ ಅವರು ಪ್ರತಿಪಕ್ಷದ ನಾಯಕರೊಂದಿಗೂ ಚರ್ಚಿಸಿಲ್ಲ. ಇದು ಪ್ರಜಾಪ್ರಭುತ್ವದ ನಡೆಯೇ? ಯಾವುದು ಸಂಭ್ರಮದ ವಿಚಾರವಾಗಬೇಕಿತ್ತೋ, ಅದೇ ಮುಚ್ಚುಮರೆಯ ಪ್ರಕರಣವಾಗಬೇಕಿತ್ತೇ? ಇನ್ನಾದರೂ ಆಗಿರುವ ತಪ್ಪಿನ ಕುರಿತು ನಿರ್ವಿಕಾರ ಚಿತ್ತದಿಂದ ಆಲೋಚಿಸಿ ಸರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Savarkar Photo | ಮುಂದಿನ ದಿನಗಳಲ್ಲಿ ಶಾಲೆಗಳಲ್ಲೂ ಸಾವರ್ಕರ್ ಫೋಟೊ ಹಾಕಲು ಚಿಂತನೆ ಇದೆ ಎಂದ ಸುನಿಲ್ ಕುಮಾರ್