Site icon Vistara News

Kannada Book | ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಅವಧಿ ವಿಸ್ತರಣೆ; ಕೊಳ್ಳೋಕೆ ಇನ್ನೆಷ್ಟು ದಿನ ಅವಕಾಶ?

Kasapa Awards Kannada Sahitya Parishat to present datti awards for the year 2021 on March 12

ಬೆಂಗಳೂರು: ೬೭ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ವಿಶೇಷ ಪುಸ್ತಕಗಳ (Kannada Book) ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಡಿಸೆಂಬರ್ ೧೦ರವರೆಗೆ ಮುಂದುವರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ತಿಳಿಸಿದ್ದಾರೆ.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಆವರಣದಲ್ಲಿ ಡಿಸೆಂಬರ್ ೧೦ ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಆರಂಭಿಸಲಾಗಿದೆ. ಕಚೇರಿ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಶೇ.೧೦ರಿಂದ ಶೇ.೭೫ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಇತಿಹಾಸದಲ್ಲಿ ತೀರಾ ಅಪರೂಪವೆನಿಸಿದ ಪುಸ್ತಕಗಳ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿದ್ದು, ಪರಿಷತ್ತು ಪ್ರಕಟಿಸಿರುವ ಎಲ್ಲ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಾಗಿವೆ. ಕನ್ನಡ ರತ್ನಕೋಶ ಮತ್ತು ಸಂಕ್ಷಿಪ್ತ ಕನ್ನಡ ನಿಘಂಟು, ಸಂಕ್ಷಿಪ್ತ ಕನ್ನಡ-ಇಂಗ್ಲಿಷ್ ನಿಘಂಟು, ಬೃಹತ್ ಕನ್ನಡ-ಕನ್ನಡ ನಿಘಂಟು, ಪರೀಕ್ಷೆ ಪುಸ್ತಕಗಳು, ಗದ್ಯಾನುವಾದ, ಶತಮಾನೋತ್ಸವ ಮಾಲಿಕೆ ಪುಸ್ತಕಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಎಲ್ಲ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಜೀವನ ಚರಿತ್ರೆಗಳು, ಪಿಎಚ್‌.ಡಿ ಪುಸ್ತಕಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಿಕೆ ಸಂಚಿಕೆಗಳು ಹಾಗೂ ಇತರೆ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Kannada Flag | ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲಿನ ಹಲ್ಲೆ ಖಂಡನೀಯ: ಎಚ್‌ಡಿಕೆ ಸರಣಿ ಟ್ವೀಟ್‌ ಮಾಡಿ ಕಿಡಿ

Exit mobile version