ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳು ಬರುತ್ತಿವೆ. ಕೆಲವು ಸಿನಿಮಾಗಳು ಟೈಟಲ್‌ನಿಂದ ಗಮನ ಸೆಳೆಯೋಕೆ ಶುರುಮಾಡಿವೆ. ಸಿನಿಮಾ ಕಂಟೆಂಟ್ ಕೂಡ ಗಮನ ಸೆಳೆಯುತ್ತವೆ. ಇಂತಹ ಸಿನಿಮಾಗಳಲ್ಲಿ ‘ಕುಬುಸ ‘ ಕೂಡ ಒಂದು (Kannada New Movie). ಬೆಂಗಳೂರಿನ ವಸಂತನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ‘ಕುಬುಸ’ ಚಿತ್ರದ ಟ್ರೈಲರ್ ಅನಾವರಣ ಮಾಡಿ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವೇದಿಕೆಯ ಮೇಲೆ ಕೇಂದ್ರ ಬಿಂದುವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಡಾ. ಮಂಜಮ್ಮ ಜೋಗತಿ, ಹೊಸಪೇಟೆಯ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಸಮಾಜ ಸೇವಕ ಸಿದ್ದಾರ್ಥ್ ಸಿಂಗ್ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಒಬ್ಬ ಮಹಿಳೆ ನಿರ್ಮಾಪಕರಾಗಿ ಉತ್ತಮ ಚಲನಚಿತ್ರವನ್ನು ಕಷ್ಟಪಟ್ಟು ನಿರ್ಮಿಸಿದ್ದಾರೆ. ನಾನು ಯಾವತ್ತಿಗೂ ಕಲಾವಿದರಿಗೆ ಬೆಂಬಲವಾಗಿ ಇರುತ್ತೇನೆ ಎಂದು ತಿಳಿಸಿದ ಅವರು, ಈ ಚಲನಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ: SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?
ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಪ್ ಸಂಸ್ಥಾಪಕ ಆಟೋರಾಜ್, ಡ್ಯಾನ್ಸ್ ಹರಿಪ್ರಸಾದ್, ಕೃಷ್ಣ ರಿತ್ತಿ, ಯೂಸುಫ್, ಇಮ್ತಿಯಾಜ್, ರಾಜು ಉಪ್ಪರ್, ನಂದೀಶ, ಇತರರು ಉಪಸ್ಥಿತರಿದ್ದರು.
ಟ್ರೈಲರ್ ರಿಲೀಸ್ ಬಳಿಕ ಚಿತ್ರದ ನಾಯಕ ನಟರಾಜ್ ಎಸ್. ಭಟ್ ಮಾತನಾಡಿ, ಇಂತಹ ಚಲನಚಿತ್ರ ನಿರ್ಮಾಣ ಮಾಡಲು ವಿ. ಶೋಭಾ ಆದಿ ನಾರಾಯಣ ಅವರಂತಹ ಒಳ್ಳೆಯ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಈ ರೀತಿ ಚಿತ್ರಗಳು ಗೆಲ್ಲಬೇಕು ಈ ಸಿನಿಮಾ ಗೆದ್ದಾಗ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ .ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಸಹಕಾರ ಕುಬುಸ ಸಿನಿಮಾ ಮೇಲೆ ಇರಲಿ ಎಂದರು.
ನಿರ್ದೇಶಕ ರಘುರಾಮ ಚರಣ್ ಮಾತನಾಡಿ, ಪುಟ್ಟ ಕನಸು ದೊಡ್ಡದಾಗುತ್ತಾ ಬಂತು, ಅದು ಈಗ ಸಿನಿಮಾ ರೂಪತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ. ಕಥೆ ಬರೆಯುವಾಗ ಏನು ವಿಜ್ವಲ್ ಬಂತು ಅದನ್ನು ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದಲ್ಲಿ ಬರುವ ಕಥೆ ಇದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ ಎಂದು ಮಾಹಿತಿ ನೀಡಿದರು.
ವಿ. ಶೋಭಾ ಆದಿನಾರಾಯಣ ಮಾತನಾಡಿ, ಕುಬುಸ ಚಲನಚಿತ್ರ ಹಳ್ಳಿ ಸೊಗಡಿನ ಚಿತ್ರಕಥೆಯಾಗಿದ್ದು ಈ ಚಿತ್ರದಲ್ಲಿ ನನಗೆ ತುಂಬಾ ಅನುಭವವಾಗಿದ್ದು, ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಇದೇ ತಿಂಗಳು ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?
ಜನಪ್ರಿಯ ಲೇಖಕ ಕುಂ.ವೀರಭದ್ರಪ್ಪ ಅವರ ಕಥೆ ಆಧಾರಿಸಿದ ಸಿನಿಮಾ ‘ಕುಬುಸ’ ಸಿನಿಮಾದ ಮೂಲ ಕತೆಯಲ್ಲಿ ಬಳ್ಳಾರಿಯ ಭಾಷಾ ಸೊಗಡನ್ನು ಕಾಣಬಹುದು. ಇದು ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ,ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿವೆ . ಪ್ರದೀಪ್ ಚಂದ್ರ ಅವರ ಸಂಗೀತ ಸಂಯೋಜನೆ ಚಿತ್ರಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮ ಎ. ಕ್ಯಾಮರಾ, ಶಿವಮೂರ್ತಿ ದೋಣಿಮಲೆ ಸಹ ನಿರ್ದೇಶನ ಚಿತ್ರಕ್ಕಿದೆ. ಕುಬುಸ ಸಿನಿಮಾ ವಿ. ಶೋಭಾ ಆದಿನಾರಾಯಣ ಅವರ ಚೊಚ್ಚಲ ನಿರ್ಮಾಣದ ಚಲನಚಿತ್ರವಾಗಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ಕುಬುಸ ಚಿತ್ರವನ್ನು ನಿರ್ಮಿಸಿದ್ದಾರೆ.