Site icon Vistara News

Kannada Rajyotsava | ನ.1ರಂದು ಕನ್ನಡ ಗೆಳೆಯರ ಬಳಗ-37 ಸಂಭ್ರಮ; ಖ್ಯಾತ ಕವಿಗಳ ಪ್ರತಿಮೆಗಳಿಗೆ ಮಾಲಾರ್ಪಣೆ

Kannada Rajyotsava

ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್‌ ಸ್ಕೂಲ್ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನೆಲೆಯಲ್ಲಿ ನವೆಂಬರ್‌ 1ರಂದು ‘ಕನ್ನಡ ಗೆಳೆಯರ ಬಳಗ-37 ಸಂಭ್ರಮ’ ಕನ್ನಡ ಚಿಂತನ ಸಭೆ ಹಾಗೂ ಖ್ಯಾತ ಕವಿಗಳಾದ ತೀ.ನಂ.ಶ್ರೀಕಂಠಯ್ಯ, ಕುವೆಂಪು, ಬಿ.ಎಂ.ಶ್ರೀಕಂಠಯ್ಯ, ಎಚ್.ನರಸಿಂಹಯ್ಯ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಗೆಳೆಯರ ಬಳಗ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

ಕನ್ನಡ ಗೆಳೆಯರ ಬಳಗವು 1995ರಿಂದ ನಿರಂತರವಾಗಿ ಪ್ರತಿ ವರ್ಷ ರಾಜ್ಯೋತ್ಸವದಂದು ಕುವೆಂಪು, ಬಿ.ಎಂ.ಶ್ರೀ. ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನ ಸಭೆಯನ್ನು ನಡೆಸಿಕೊಂಡು ಬಂದಿದೆ. ಹೀಗಾಗಿ ಈ ಬಾರಿಯೂ ಕನ್ನಡ ರಾಜ್ಯೋತ್ಸವ ದಿನದಂದು ತೀ.ನಂ.ಶ್ರೀ ಪ್ರತಿಮೆಗೆ ಡಾ. ಶಾರದ ನಾಗಭೂಷಣ, ಕುವೆಂಪು ಪ್ರತಿಮೆಗೆ ಭಾರ್ಗವಿ ಹೇಮಂತ್, ಬಿ.ಎಂ.ಶ್ರೀ. ಪ್ರತಿಮೆಗೆ ಹ.ನ. ವಸಂತಕುಮಾರಿ, ಎಚ್.ಎನ್. ಪ್ರತಿಮೆಗೆ ಎಸ್. ಮಂಜುಳಾಂಬ ಮಾಲಾರ್ಪಣೆ ಮಾಡಲಿದ್ದಾರೆ.

ನಂತರ ಬೆಳಗ್ಗೆ 8 ಗಂಟೆಗೆ ಬಸವನಗುಡಿ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆ ಎದುರು ‘ಕನ್ನಡ ಗೆಳೆಯರ ಬಳಗ-37 ಸಂಭ್ರಮ’ ಕನ್ನಡ ಚಿಂತನ ಸಭೆ ನಡೆಯಲಿದೆ. ಸಭೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ.ತೀ.ಶ್ರೀ ನಾಗಭೂಷಣ, ಬಳಗದ ಸ್ಥಾಪಕ ಸದಸ್ಯ ಹಿರಿಯ ಕನ್ನಡ ಪರಿಚಾರಕ ಎನ್. ದೇವಿಕುಮಾರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಖ್ಯಾತ ಸಂಶೋಧಕಿ ಡಾ. ಸ್ಮಿತಾರೆಡ್ಡಿ ಅವರು ಕನ್ನಡ ಚಿಂತನೆ ನಡೆಸಲಿದ್ದು, ಹಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

Exit mobile version