ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ 2023-24ನೇ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ (Diploma in Epigraphy) ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 15ರವರೆಗೆ 50 ರೂಪಾಯಿ ದಂಡ ಶುಲ್ಕ ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು 25 ರೂ. ಶುಲ್ಕ ಪಾವತಿಸಿ, ನಗರದ ಕನ್ನಡ ಸಾಹಿತ್ಯ ಪರಿಷತ್ ಮಾರಾಟ ಮಳಿಗೆಯಲ್ಲಿ ಆಗಸ್ಟ್ 5ರಿಂದ ಪಡೆಯಬಹುದು. ಪರೀಕ್ಷಾ ಅರ್ಜಿಗಳನ್ನು ಕಸಾಪ ಅಂತರ್ಜಾಲ ತಾಣ ಮೂಲಕ ಪಡೆದುಕೊಳ್ಳಬಹುದು. ಅಂತರ್ಜಾಲ ತಾಣದಲ್ಲಿ ಅರ್ಜಿ ನಮೂನೆಯನ್ನು ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25 ರೂ. ಪ್ರತ್ಯೇಕವಾಗಿ ಪಾವತಿಸಬೇಕು.
ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು- 560018. ದೂರವಾಣಿ : 080 26612991, 26623584, 22423867 ಮೂಲಕ ಸಂಪರ್ಕಿಸಬಹುದು.
ಇದನ್ನೂ ಓದಿ | India Post GDS recruitment: 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಆ.23 ಕೊನೆ ದಿನ
9 ತಿಂಗಳ ಅವಧಿಯ ಕೋರ್ಸ್
“ಶಾಸನಶಾಸ್ತ್ರ ಡಿಪ್ಲೊಮಾ” ಅವಧಿಯು 9 ತಿಂಗಳಾಗಿದ್ದು, ವಾರಕ್ಕೆ 4 ದಿನ ತರಗತಿಗಳು ಇರುತ್ತವೆ (ಮಂಗಳವಾರದಿಂದ ಶುಕ್ರವಾರದವರೆಗೆ). ಎಲ್ಲಾ ತರಗತಿಗಳು ಸಂಜೆ 6 ರಿಂದ 7 ಗಂಟೆಯವರೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿಯೇ ನಡೆಯಲಿವೆ. ಶಾಸನಶಾಸ್ತ್ರದಲ್ಲಿ ಶಾಸನಗಳ ಲಿಪಿಗಳನ್ನು ಓದುವ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಸಂಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುತ್ತದೆ.