ವಿಜಯನಗರ: ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದರೂ ತನ್ನ ಚಾರ್ಮ್ ಹಾಗೇ ಉಳಿಸಿಕೊಂಡಿದೆ. ಕಾಂತಾರದ ಕೊನೆಯ ದೃಶ್ಯವು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವನ್ನು ನೀಡುತ್ತಿದೆ. ಕಾಂತಾರ ಸಿನಿಮಾ (Kantara Movie) ವೀಕ್ಷಿಸುತ್ತಿರುವಾಗಲೇ ದೇವರು ಬಂದಂತೆ ಮಹಿಳೆಯೊಬ್ಬರು ವರ್ತಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಹೊಸಪೇಟೆಯ ಸರಸ್ವತಿ ಚಿತ್ರಮಂದಿರದಲ್ಲಿ ಕಾಂತಾರ ಚಿತ್ರವನ್ನು ನೋಡಲು ಮಹಿಳೆ ಬಂದಿದ್ದರು.
ಕ್ಲೈಮ್ಯಾಕ್ಸ್‌ನಲ್ಲಿ ನಟ ರಿಷಬ್ ಶೆಟ್ಟಿ ಮೈಮೇಲೆ ದೈವಾಗಮನ ಸನ್ನಿವೇಶ ಬರುತ್ತಿದ್ದಂತೆ, ಇತ್ತ ಮಹಿಳೆ ಸಿನಿಮಾ ನೋಡುವುದರಲ್ಲಿ ತಲೀನರಾಗಿದ್ದು, ಕೂತಲ್ಲೇ ಒಮ್ಮಲೇ ಕುಣಿಯಲು ಶುರು ಮಾಡಿದ್ದಾರೆ. ಮಹಿಳೆಯ ವಿಚಿತ್ರ ವರ್ತನೆಗೆ ಅಕ್ಕ ಪಕ್ಕದ ಪ್ರೇಕ್ಷಕರು ಬೆದರಿದ್ದಾರೆ. ಥಿಯೇಟರ್‌ನಲ್ಲಿದ್ದವರೆಲ್ಲರೂ ಆಕೆಯನ್ನು ಹಿಡಿದು ಸಮಾಧಾನಿಸುತ್ತಿದ್ದ ದೃಶ್ಯ ವೈರಲ್ ಆಗಿದೆ.
ಕೋಲಾರದಲ್ಲಿಯೂ ದೇವರು ಬಂದಂತೆ ವರ್ತಿಸಿದ ಮಹಿಳೆ
ಕೋಲಾರ ಸಮೀಪದಲ್ಲಿರುವ ರಂಗಮಹಲ್ ಥಿಯೇಟರ್‌ನಲ್ಲಿ ಕಾಂತಾರ ಚಿತ್ರವನ್ನು ನೋಡುತ್ತಿದ್ದ ಮಹಿಳೆ ಮೇಲೆ ದೇವರು ಬಂದಂತೆ ವರ್ತಿಸಿದ್ದರು. ಕೂಡಲೇ ಸಿನಿಮಾವನ್ನು ನಿಲ್ಲಿಸಿ, ಆಕೆ ಸುಧಾರಿಸಿಕೊಳ್ಳಲೆಂದು ನೀರು ಕೊಟ್ಟು, ಬಳಿಕ ಮಹಿಳೆಯನ್ನು ಥಿಯೇಟರ್‌ನಿಂದ ಹೊರ ಕಳಿಸಿದ್ದರು. ಆ ನಂತರ ಸಿನಿಮಾದ ಉಳಿದ ಚಿತ್ರವನ್ನು ಸಾರ್ವಜನಿಕರು ವೀಕ್ಷಿಸಿದರು.
ಇದನ್ನೂ ಓದಿ | ಉಸಿರು ನಿಲ್ಲಿಸಿದ ಮೇಲೆ ಇಬ್ಬರ ಜೀವ ಉಳಿಸಿದ 18 ತಿಂಗಳ ಮಗು; ದಿಕ್ಕೇ ತೋಚದ ಸಮಯದಲ್ಲೂ ಸಾರ್ಥಕ ಹೆಜ್ಜೆ ಇಟ್ಟ ಪಾಲಕರು