Site icon Vistara News

Karnataka Bandh : ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೇಗಿತ್ತು? ಇಲ್ಲಿದೆ ಫೋಟೊ ಝಲಕ್‌

Karnataka Bandh

ಬೆಂಗಳೂರು: ಕಾವೇರಿ ನದಿ (Cauvery Dispute) ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ಗೆ (Karnataka Bandh) ಉತ್ತಮ ಬೆಂಬಲ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ರಸ್ತೆ ತಡೆ ನಡೆಸಿ, ರಾಜಕೀಯ ನಾಯಕರ ಪ್ರತಿಕೃತಿ ದಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಿನ್ನ-ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶವನ್ನು ತೋರಿದ್ದಾರೆ. ಎಲ್ಲಿಲ್ಲಿ ಹೇಗಿತ್ತು ಪ್ರತಿಭಟನೆ ಸ್ವರೂಪ ಇಲ್ಲಿದೆ ನೋಡಿ ಚಿತ್ರಗಳು..

ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ಬಂದ ವಾಟಾಳ್‌ ನಾಗರಾಜ್‌
ಕರ್ನಾಟಕ ಬಂದ್‌ಗೆ ಸಾಥ್‌ ಕೊಟ್ಟ ಸ್ಯಾಂಡಲ್‌ವುಡ್‌ ಮಂದಿ
ತುಮಕೂರಲ್ಲಿ ತಮಿಳುನಾಡು ಸಿಎಂ ಅಣುಕು ಶವಯಾತ್ರೆ
ಕೋಲಾರದಲ್ಲಿ ಬೆಳಗಿನ ಜಾವವೇ ಬೀದಿಗಿಳಿದು ಪ್ರತಿಭಟಿಸಿದ ಕನ್ನಡಪರ ಸಂಘಟನೆಗಳು
ನಮಗೆ ನೀರಿಲ್ಲ ಎಂದು ಖಾಲಿ ಜಗ್ಗು- ಬಕೆಟ್ಟು ಹಿಡಿದು ಬಂದ ಕೊಪ್ಪಳ ಹೋರಾಟಗಾರರು
ಕಾವೇರಿಗಾಗಿ ಅತ್ತಿಬೆಲೆಯಲ್ಲಿ ರಸ್ತೆಗಿಳಿದ ಶಾಲಾ ಮಕ್ಕಳು
ಎಮ್ಮೆಯೊಂದಿಗೆ ರಸ್ತೆಗಿಳಿದು ಪ್ರತಿಭಟಿಸಿದ ವಿವಿಧ ಸಂಘಟನೆಗಳು
ಚಾಮರಾಜನಗರದಲ್ಲಿ ರಸ್ತೆ ಮಧ್ಯೆ ಕುಳಿತ ರೈತರು
ರಸ್ತೆಯಲ್ಲಿ ಅರೆ ಬೆತ್ತಲಾಗಿ ಮಲಗಿ ಪ್ರತಿಭಟಿಸಿದ ರೈತರು
ತಮಿಳುನಾಡು ಸಿಎಂ ಸ್ಟಾಲಿನ್‌ರ ವೈಕುಂಠ ಸಮಾರಾಧಾನೆ ಮಾಡಿ ಆಕ್ರೋಶ ಹೊರಹಾಕಿದರು
ಕೈಯಲ್ಲಿ ಎಳೆನೀರು ಹಿಡಿದು ಪ್ರತಿಭಟನೆ
ತಮಟೆ ಬಾರಿಸಿ ಖಾಲಿ ಮಡಿಕೆ ಹಿಡಿದು ಹೊರಟ ಹೋರಾಟಗಾರರು
ಕಾವೇರಿ ನಮ್ಮದು ಎಂದು ರಕ್ತದಲ್ಲಿ ಬರೆದು ಆಕ್ರೋಶ
ಚಿಕ್ಕಮಗಳೂರಲ್ಲಿ ಖಾಲಿ ಬಿಂದಿಗೆ ಇಟ್ಟು, ರಾಜ್ಯ ನಾಯಕರ ಫೋಟೊ ಹಿಡಿದು ಪ್ರತಿಭಟನೆ
ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸಕಲೇಶ್‌ಪುರದಲ್ಲಿ ಅಂಗಡಿ ಮುಂಗಟ್ಟು ಬಂದ್‌
ತಮಿಳುನಾಡು ಸಿಎಂ ಭಾವಚಿತ್ರಕ್ಕೆ ರಕ್ತದಲ್ಲಿ ಅರ್ಚನೆ ಮಾಡಿದ ಹೋರಾಟಗಾರರು
ತಮಿಳುನಾಡು ಗಾಡಿಯನ್ನು ಅಡ್ಡಗಟ್ಟಿದ ರೈತರು
ಬೀದಿಯಲ್ಲಿ ಕುಳಿತು ಆಕ್ರೋಶ
ಟೈರ್‌ ಸುಟ್ಟು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು
ರೈಲು ತಡೆದು ಪ್ರತಿಭಟಿಸಲು ಮುಂದಾದ ಪ್ರತಿಭಟನಾಕಾರರು
ಪ್ರಾರ್ಥನೆ ಮುಗಿಸಿ ಕಾವೇರಿ ನದಿ ನೀರಿಗಾಗಿ ರಸ್ತೆಗಿಳಿದು ಪ್ರತಿಭಟಿಸಿದ ಮುಸ್ಲಿಂ ಬಾಂಧವರು

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version