ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯಿಂದ ೨೦೨೧ ಹಾಗೂ ೨೦೨೨ನೇ ವರ್ಷದ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿಯು ಪ್ರಶಸ್ತಿ ಘೋಷಿಸಿದೆ. ಬಯಲಾಟ ಗೌರವ ಪ್ರಶಸ್ತಿಯು ೫೦ ಸಾವಿರ ರೂ. ನಗದು ಹೊಂದಿದ್ದರೆ, ವಾರ್ಷಿಕ ಪ್ರಶಸ್ತಿ ೨೫ ಸಾವಿರ ರೂ. ನಗದು ಹೊಂದಿದೆ.
೨೦೨೧ನೇ ಸಾಲಿನ ಗೌರವ ಪ್ರಶಸ್ತಿ ಪಡೆದವರ ಪಟ್ಟಿ
ಅನುಸೂಯಾ ವಡ್ಡರ-ಶ್ರೀಕೃಷ್ಣ ಪಾರಿಜಾತ (ವಿಜಯಪುರ)
ನರಸಪ್ಪ ಶಿರಗುಪ್ಪಿ-ಬಯಲಾಟ (ಬೆಳಗಾವಿ)
ವೀರಪ್ಪ ಬಿಸರಳ್ಳಿ- ದೊಡ್ಡಾಟ (ಕೊಪ್ಪಳ)
ಎಸ್.ಎ.ಕೃಷ್ಣಯ್ಯ-ತೊಗಲು ಗೊಂಬೆಯಾಟ (ಉಡುಪಿ)
ಗೋವಿಂದಪ್ಪ ತಳವಾರ- ದೊಡ್ಡಾಟ (ಹಾವೇರಿ)
೨೦೨೧ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
ಸುಂದ್ರವ್ವ ಮೇತ್ರಿ – ಶ್ರೀಕೃಷ್ಣ ಪಾರಿಜಾತ (ಬಾಗಲಕೋಟೆ)
ಫಕ್ಕಿರಪ್ಪ ಗೌರಕ್ಕನವರ – ಬಯಲಾಟ (ಹಾವೇರಿ)
ಚಂದ್ರಶೇಖರ್ ಮೇಲಿನಮನಿ- ಶ್ರೀಕೃಷ್ಣ ಪಾರಿಜಾತ (ವಿಜಯಪುರ)
ದುಂಡಪ್ಪ ಗುಡ್ಲಾ – ಬಯಲಾಟ (ಕಲಬುರಗಿ)
ಚಂದ್ರಶೇಖರಯ್ಯ ಗುರಯ್ಯನವರ – ದೊಡ್ಡಾಟ (ಧಾರವಾಡ)
ಸುಶೀಲಾ ಮಾದರ – ಸಣ್ಣಾಟ (ಬೆಳಗಾವಿ)
ವೆಂಕೋಬ ಮುನಿಯಪ್ಪ – ದೊಡ್ಡಾಟ (ರಾಯಚೂರು)
ಎಸ್. ಚಂದ್ರಪ್ಪ – ದೊಡ್ಡಾಟ (ದಾವಣಗೆರೆ)
ಎಂ.ಆರ್.ವಿಜಯ -ಸೂತ್ರದ ಗೊಂಬೆಯಾಟ (ಬೆಂಗಳೂರು)
ದಾನಪ್ಪ ಹಡಪದ – ದೊಡ್ಡಾಟ (ಗದಗ)
೨೦೨೨ನೇ ಸಾಲಿನ ಗೌರವ ಪ್ರಶಸ್ತಿ ಪಡೆದವರ ಪಟ್ಟಿ
ಕೆ. ಮೌನಾಚಾರಿ- ಬಯಲಾಟ (ಬಳ್ಳಾರಿ)
ಸುರೇಂದ್ರ ಹುಲ್ಲಂಬಿ – ಸಣ್ಣಾಟ (ಧಾರವಾಡ)
ಮಲ್ಲೇಶಯ್ಯ ಶತಕಂಠ- ದೊಡ್ಡಾಟ (ತುಮಕೂರು)
ಚಂದ್ರಮ್ಮ – ತೊಗಲು ಗೊಂಬೆಯಾಟ (ಮಂಡ್ಯ)
ಅಶೋಕ ಸುತಾರ – ದೊಡ್ಡಾಟ (ಗದಗ)
೨೦೨೨ ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
ಮಲ್ಲಪ್ಪ ಗಣಿ- ಸಣ್ಣಾಟ (ಬಾಗಲಕೋಟೆ)
ಫಕ್ಕೀರೇಶ ಬಿಸೆಟ್ಟಿ- ದೊಡ್ಡಾಟ (ಹಾವೇರಿ)
ನಾಗರತ್ನಮ್ಮ- ಬಯಲಾಟ (ವಿಜಯನಗರ)
ಕೆಂಪಣ್ಣ ಚೌಗಲಾ- ಶ್ರೀಕೃಷ್ಣ ಪಾರಿಜಾತ (ಬೆಳಗಾವಿ)
ರಾಮಚಂದ್ರಪ್ಪ ಕಟ್ಟಿಮನಿ- ದೊಡ್ಡಾಟ (ಯಾದಗಿರಿ)
ಅಂಬುಜಮ್ಮ ಸುಂಕಣ್ಣ- ಬಯಲಾಟ (ಬಳ್ಳಾರಿ)
ಕೆ.ಪಿ. ಭೂತಯ್ಯ- ದೊಡ್ಡಾಟ ( ಚಿತ್ರದುರ್ಗ)
ಜಿ. ರಾಮಪ್ರಭು- ಬಯಲಾಟ (ದಾವಣಗೆರೆ)
ಬಿ.ರತ್ನಮ್ಮ ಸೋಗಿ- ದೊಡ್ಡಾಟ (ಶಿವಮೊಗ್ಗ)
ಫಕ್ಕಿರಪ್ಪ ನೆರ್ತಿ- ದೊಡ್ಡಾಟ( ಧಾರವಾಡ)
ಇದನ್ನೂ ಓದಿ | KMF | ಐಡಿಎಫ್ ವರ್ಲ್ಡ್ ಡೈರಿ ಶೃಂಗಸಭೆಯಲ್ಲಿ ಕೆಎಂಎಫ್‌ಗೆ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ