Site icon Vistara News

Karnataka Budget 2023: ಟೈರ್‌-2 ನಗರಗಳಲ್ಲಿ ಮಿನಿ ಥಿಯೇಟರ್‌ ಸ್ಥಾಪನೆಗೆ ಪ್ರೋತ್ಸಾಹ; ಟ್ಯಾಕ್ಸಿ, ಆಟೋ ನಿಲ್ದಾಣಗಳಿಗೆ ಶಂಕರ್‌ ನಾಗ್‌ ಹೆಸರು

theatres

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದ Tier-2 ನಗರಗಳಲ್ಲಿ ಮಿನಿ ಥಿಯೇಟರ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲು ಸಿಎಂ ಬೊಮ್ಮಾಯಿ ಸರ್ಕಾರ ಬಜೆಟ್‌ನಲ್ಲಿ (Karnataka Budget 2023) ಘೋಷಣೆ ಮಾಡಿದ್ದಾರೆ.

ಪ್ರಮುಖ ನಗರದಲ್ಲಿ ಪರಭಾಷೆಯ ಚಿತ್ರಗಳ ಹಾವಳಿಯಿಂದಾಗಿ ಕನ್ನಡ ಚಿತ್ರಗಳಿಗೆ ಥಿಯೇಟರ್‌ ಸಿಗದೆ ಪರದಾಡುವಂತಾಗಿದೆ. ಹೀಗಾಗಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಮೂಲಕ ಚಿತ್ರರಂಗದ ಉತ್ತೇಜನಕ್ಕೆ ಬೊಮ್ಮಾಯಿ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Karnataka Budget 2023 : ನಿಮ್ಮಲ್ಲಿ ಕಿಸಾನ್‌ ಕಾರ್ಡ್‌ ಇದ್ಯಾ?; ಸಿಗುತ್ತೆ 10,000 ರೂ. ಹೆಚ್ಚುವರಿ ಸಬ್ಸಿಡಿ, ಬಡ್ಡಿರಹಿತ ಸಾಲ ಪ್ರಮಾಣ ಹೆಚ್ಚಳ

ಆಟೋ ರಾಜ ಶಂಕರ್‌ ನಾಗ್‌ ಹೆಸರಲ್ಲಿ ಟ್ಯಾಕ್ಸಿ-ಆಟೋ ನಿಲ್ದಾಣ ನಿರ್ಮಾಣ

ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟ, ದಿವಂಗತ ಆಟೋ ರಾಜ ಶಂಕರ್‌ ನಾಗ್‌ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದೆಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

Exit mobile version