2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ (Karnataka Budget 2023 Live Updates) ಇಂದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಲದ ಕೊನೇ ಬಜೆಟ್ ಇದು. 2023ರ ಮೇ ತಿಂಗಳ ಒಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೊಮ್ಮಾಯಿ ಅವರು ಮಂಡಿಸಲಿರುವ ‘ಚುನಾವಣಾ ವರ್ಷದ ಬಜೆಟ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.
ಬಜೆಟ್ ಗಾತ್ರ 3,07,000 ರೂ.
ಪ್ರಸಕ್ತ ಬಾರಿ ಬಸವರಾಜ ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಬಜೆಟ್ನ ಗಾತ್ರ 3,09,181 ಕೋಟಿ ರೂಪಾಯಿ
ಬಜೆಟ್ ಮಂಡನೆ ಪ್ರಾರಂಭ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಪ್ರಾರಂಭವಾಗಿ ಕೆಲವೇ ಹೊತ್ತಲ್ಲಿ, ವಿಧಾನಸಭೆಯಲ್ಲಿ ಗದ್ದಲ ಶುರುವಾಯಿತು.
ಜನಸ್ನೇಹಿ ಬಜೆಟ್
ಈ ಬಾರಿ ಬಜೆಟ್ ಜನಸ್ನೇಹಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾಗೇ, ಬಜೆಟ್ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ವಿಧಾನಸೌಧಕ್ಕೆ ತೆರಳಿದ ಸಿಎಂ
ಬಸವರಾಜ್ ಬೊಮ್ಮಾಯಿ ಅವರು ರೇಸ್ಕೋರ್ಸ್ನಲ್ಲಿರುವ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ತೆರಳಿದರು. ಬಸ್ನಲ್ಲಿ ಹೋಗುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ಆ ಪ್ಲ್ಯಾನ್ ಕ್ಯಾನ್ಸಲ್ ಆಗಿ, ಕಾರಿನಲ್ಲೇ ತೆರಳಿದ್ದಾರೆ. ಸಚಿವರಾದ ಬಸವರಾಜ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಮುನಿರತ್ನ ಇತರರು ಇದ್ದರು.
ರಾಜ್ಯದ ಜನರ ಹೆಸರಲ್ಲಿ ಅರ್ಚನೆ
ಎರಡೂ ದೇವಸ್ಥಾನಗಳಲ್ಲಿ ಪೂಜೆ ಮಾಡಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ‘ರಾಜ್ಯದ ಜನರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದೇನೆ. ಇಡೀ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಹಾಗೇ, ಏನಾದರೂ ಮಹತ್ವದ ಘೋಷಣೆಗಳು ಇವೆಯಾ ಎಂದು ಕೇಳಿದ್ದಕ್ಕೆ, ಇನ್ನೊಂದು ಘಂಟೆ ಕಾಯಿರಿ ಎಂದಷ್ಟೇ ಉತ್ತರಿಸಿದರು.