Site icon Vistara News

Karnataka Budget 2023: ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ‘She Toilet’ ನಿರ್ಮಾಣ; ಫೀಡಿಂಗ್ ರೂಂ ಕೂಡ ಇರಲಿದೆ

Karnataka Budget 2023 She Toilets to be Constructed in Bangalore

Karnataka Budget 2023 She Toilets to be Constructed in Bangalore

ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ಪ್ರಸಕ್ತ ಸಾಲಿನ ಬಜೆಟ್​​ನಲ್ಲಿ (Karnataka Budget 2023) 9,698 ರೂಪಾಯಿ ಅನುದಾನ ಮೀಸಲು ಇಟ್ಟಿದ್ದಾಗಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬಜೆಟ್​​ನಲ್ಲಿ ಘೋಷಿಸಿದ್ದಾರೆ. ಅದರಲ್ಲಿ ರಾಜಧಾನಿಯಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಕೆಲವು ವಿಶೇಷ ಸೌಲಭ್ಯಗಳನ್ನೂ ಪ್ರಕಟಿಸಿದ್ದಾರೆ.

ಬೆಂಗಳೂರು ಮಹಾನಗರದಲ್ಲಿರುವ ವಿವಿಧ ಮಾರುಕಟ್ಟೆಗಳು, ಬೃಹತ್​ ವಾಣಿಜ್ಯ ಮಳಿಗೆಗಳು ಮತ್ತು ಇತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಶಿ ಟಾಯ್ಲೆಟ್​ (She Toilet) ನಿರ್ಮಿಸುವುದಾಗಿ ಬಜೆಟ್​​​ನಲ್ಲಿ ಪ್ರಕಟಿಸಲಾಗಿದೆ. ನಗರಾದ್ಯಂತ ಸುಮಾರು 250 ಶಿ ಟಾಯ್ಲೆಟ್​​ಗಳ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಿ ಟಾಯ್ಲೆಟ್​​ಗಳೆಂದರೆ ಬರೀ ಶೌಚಗೃಹಗಳಷ್ಟೇ ಅಲ್ಲ, ಫೀಡಿಂಗ್​ ರೂಮುಗಳು, ಮೊಬೈಲ್​ ಚಾರ್ಜಿಂಗ್​ ವ್ಯವಸ್ಥೆ, ತುರ್ತು ಎಸ್​ಒಎಸ್​ ಸೌಲಭ್ಯಗಳನ್ನು ಈ ಸಂಕೀರ್ಣಗಳು ಒಳಗೊಂಡಿರಲಿವೆ.

ಇದನ್ನೂ ಓದಿ: Karnataka Budget 2023 : ಬಜೆಟ್‌ನಲ್ಲಿ ಪ್ರಸ್ತಾಪವಾಗದ 7ನೇ ವೇತನ ಆಯೋಗ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಇನ್ನು ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ The Safe City Project (ಸುರಕ್ಷಿತ ನಗರ ಯೋಜನೆ)ನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದರಡಿಯಲ್ಲಿ 1,640 ಸ್ಥಳಗಳಲ್ಲಿ 4,100 ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಈ ಕ್ಯಾಮರಾಗಳನ್ನು Integrated Control and Command Centre ಗೆ ಸಂಪರ್ಕ ಕಲ್ಪಿಸಿ ಭದ್ರತಾ ಕ್ರಮಗಳ ಮೇಲೆ ನಿಗಾವಹಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸುವ ಸಲುವಾಗಿ 261 ಕೋಟಿ ರೂ. ಅನುದಾನವನ್ನು ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Exit mobile version