ಶಿವಮೊಗ್ಗ: ʻಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಸಾಮಾನ್ಯ ಜನರ ಕಿವಿಗೆ ಹೂವು ಇಟ್ಟಿದ್ದಾರೆʼ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ (HS Sundaresh) ಕಿವಿಗೆ ಹೂ ಇಟ್ಟುಕೊಂಡೇ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ʻಈ ಬಾರಿಯ ಬಜೆಟ್ ಬೋಗಸ್ ಬಜೆಟ್ ಆಗಿದೆ. ದುರ್ಬಲ ಮತ್ತು ಸುಳ್ಳಿನ ಬಜೆಟ್. ಬಜೆಟ್ ನಲ್ಲಿ ಯಾವ ತೂಕವೂ ಇಲ್ಲ. ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದ ಮತ್ತು ಅನುಷ್ಠಾನಕ್ಕೆ ಜಾರಿಗೆ ತರದ ಅಂಶಗಳನ್ನೇ ಈ ಬಜೆಟ್ ನಲ್ಲೂ ಮುಂದುವರಿಸಲಾಗಿದೆʼ ಎಂದು ದೂರಿದ್ದಾರೆ.
ಇದನ್ನೂ ಓದಿ: Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ
ʻಚುನಾವಣೆಯ ಹಿನ್ನೆಲೆಯಲ್ಲಿ ಈ ಬಜೆಟ್ ಮೂಡಿ ಬಂದಿದ್ದು, ಮತದಾರನ ಕಿವಿಗೆ ಹೂ ಇಟ್ಟಿದ್ದಾರೆ. ರಾಜ್ಯ ಸರ್ಕಾರವು ಕಳೆದ ಬಾರಿ ಸುಮಾರು 600 ಭರವಸೆಗಳನ್ನು ನೀಡಿತ್ತು. ಈ ಪೈಕಿ 50 ಮಾತ್ರ ಜಾರಿಗೆ ಬಂದಿದ್ದು, ಇನ್ನೂ 550 ಭರವಸೆಗಳು ಹಾಗೆಯೇ ಉಳಿದುಕೊಂಡಿವೆ. ರೈತರಿಗೆ ಈ ಬಜೆಟ್ ನಿಂದ ಯಾವ ಲಾಭವೂ ಇಲ್ಲ. ಶಿವಮೊಗ್ಗ ಜಿಲ್ಲೆಗೆ ಯಾವ ಕೊಡುಗೆಯೂ ಇಲ್ಲ. ಭದ್ರಾವತಿ ಕಾರ್ಖಾನೆಗಳ ಪುನಶ್ಚೇತನದ ಭರವಸೆಯೂ ಇಲ್ಲ. ಮಠಗಳಿಗೆ ಆದ್ಯತೆ ನೀಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ನಡೆದಿದೆ. ಎಲ್ಲಾ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆʼ ಎಂದು ದೂರಿದ್ದಾರೆ.
ಇದನ್ನೂ ಓದಿ: INDvsAUS : ಕುಟುಂಬದೊಂದಿಗೆ ಡೆಲ್ಲಿ ಸುತ್ತಿದ ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್
“ವಿಮಾನ ನಿಲ್ದಾಣದ ಸಂತ್ರಸ್ತರ ಸಮಸ್ಯೆಯನ್ನು ಈಡೇರಿಸಿಲ್ಲ. ಕೋಟ್ಯಂತರ ರೂ. ಕಾಮಗಾರಿಗಳನ್ನು ಪ್ರಧಾನಿ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಆ ಮೂಲಕ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಶೇ. 40 ರಷ್ಟು ಕಮಿಷನ್ ಕೂಡ ಉದ್ಘಾಟನೆ ಮಾಡಿದಂತಾಗುತ್ತದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರ, ಅವ್ಯವಹಾರ ತುಂಬಿ ತುಳುಕುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ” ಎಂದು ಸುಂದರೇಶ್ ಟೀಕಿಸಿದ್ದಾರೆ.
ಇದನ್ನೂ ಓದಿ: ಗೋಧ್ರಾ ರೈಲು ಹತ್ಯಾಕಾಂಡ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿ: ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ ಮನವಿ