Site icon Vistara News

NEP 2020: ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸಿ: ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಒತ್ತಾಯ

NEP 2020

ಬೆಂಗಳೂರು: ಶಿಕ್ಷಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP 2020) ಅನ್ನು ರಾಜ್ಯದಲ್ಲಿ ಪರಿಣಾಮವಾಗಿ ಜಾರಿಗೊಳಿಸುವಂತೆ ನಗರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಮನವಿ ಪತ್ರ ಸಲ್ಲಿಸಿದೆ.

ನಂತರ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಜಯಶೀಲ ಶೆಟ್ಟಿ ಕುಂದಾಪುರ ಅವರು, ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು 3,6, ಮತ್ತು 9ನೇ ತರಗತಿಗಳಿಗೆ ಈಗಾಗಲೇ ಮೌಲ್ಯಮಾಪನ ಮಾಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು, ಕರ್ನಾಟಕದಲ್ಲೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಭಾರತ ಸ್ವಾತಂತ್ರಗೊಂಡ ಮೇಲೆ 4 ಪ್ರಮುಖ ಶಿಕ್ಷಣ ನೀತಿಗಳ ಆಶಯಗಳೊಂದಿಗೆ ಭಾರತದ ಶಿಕ್ಷಣ ವ್ಯವಸ್ಥೆ ಸಂಪನ್ನಗೊಳ್ಳುತ್ತಿವೆ. ಮನುಷ್ಯ ತನ್ನ ಪೂರ್ಣ ಸಾಮರ್ಥ್ಯಗಳಿಸಿಕೊಳ್ಳಲು ಸಮಾನತೆಯುಳ್ಳ ಮತ್ತು ನ್ಯಾಯಸಂಗತವಾದ ಸಮಾಜವೊಂದನ್ನು ಅಭಿವೃದ್ಧಿಪಡಿಸಲು ಹಾಗೂ ರಾಷ್ಟ್ರದ ಏಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ ಎಂಬುದನ್ನು ತಿಳಿದು, ಭಾರತ ನಿರಂತರವಾಗಿ “ಮುನ್ನಡೆಯ ಕೀಲಿಕೈ” ಆಗಬೇಕೆಂಬ ಸದುದ್ದೇಶದಿಂದ “ರಾಷ್ಟ್ರೀಯ ಶಿಕ್ಷಣ ನೀತಿ 2020” ನ್ನು ಶಾಸನಬದ್ಧವಾಗಿ ಘೋಷಿಸಲಾಗಿದೆ.

ಇದನ್ನೂ ಓದಿ | Guest Lecturers : ಅತಿಥಿ ಉಪನ್ಯಾಸಕರ ಗೌರವಧನ ಬಂಪರ್‌ ಹೆಚ್ಚಳ, ಜತೆಗೆ ಹಲವು ಹೊಸ ಸೌಲಭ್ಯ

ಈ ನೀತಿಯ ಆಶಯದಂತೆ 4 ಹಂತಗಳ ವಿನ್ಯಾಸವನ್ನು ರೂಪಿಸಿದ್ದು, 1. ಬುನಾದಿ ಸಾಮರ್ಥ್ಯ 2. ಪೂರ್ವ ಪ್ರಾಥಮಿಕ 3. ಮಾಧ್ಯಮಿಕ ಹಾಗೂ 4. ಪ್ರೌಢಶಾಲಾ ಹಂತ ಇದರ ವಿನ್ಯಾಸದಂತೆ 5+3+3+4 ರ ಮರು ಕಲ್ಪನೆಯನ್ನು ಸಮಸ್ತ ಸಾರ್ವಜನಿಕರ ಒಪ್ಪಿಗೆಯ ಮೇರೆಗೆ ಶಾಸನಬದ್ಧವಾಗಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಈ ನೀತಿಯನ್ನು ನಮ್ಮ ರಾಜ್ಯಮಟ್ಟದ ಶಿಕ್ಷಕರ ಸಂಘಟನೆ ಸಂಪೂರ್ಣವಾಗಿ ಅರಿತು ಅದರ ಮಹತ್ವವನ್ನು ಒಪ್ಪಿ, ಇಡೀ ರಾಜ್ಯದ ಎಲ್ಲಾ CBSE, ICSE ಹಾಗೂ ರಾಜ್ಯ ಪಠ್ಯ ಕ್ರಮದಲ್ಲಿ ನೀತಿಗೆ ಪೂರಕವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬ ಬದಲಾವಣೆಗೊಂಡ ಹೆಸರಿನೊಂದಿಗೆ ಅಲ್ಲದೆ, ಶಿಕ್ಷಣವನ್ನು ಸಮವರ್ತಿಪಟ್ಟಿಯಲ್ಲಿ ಇರಿಸಿಕೊಂಡಿದೆ. ಅದರಂತೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತಿರುವಂತೆ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು (DIKSHA, PARAKHA) ಕೈಗೆತ್ತಿಕೊಂಡು ರಾಜ್ಯದ ಶೈಕ್ಷಣಿಕ ಚಟುವಟಿಕೆಗಳ ಮೌಲ್ಯಮಾಪನವನ್ನು 3, 6 ಮತ್ತು 9ನೇ ತರಗತಿಗಳಿಗೆ ಈಗಾಗಲೇ ನಡೆಸಲಾಗಿದೆ.

ಅಲ್ಲದೆ ಕರ್ನಾಟಕ ರಾಜ್ಯದಿಂದ ಮೇಲೆ ಕಾಣಿಸಿದ ಮೂರು ವಿಭಾಗಗಳಿಗೆ 36 ತಿಂಗಳು ತುಂಬಿದ ಸುಮಾರು 16 ಲಕ್ಷ ಮಕ್ಕಳು ವಿದ್ಯಾರ್ಜನೆಗೆ ಒಳಪಡುತ್ತಿದ್ದು, ಬುನಾದಿ ಸಾಮರ್ಥ್ಯವನ್ನು ಮಗು ತನ್ನ ಮಾತೃಭಾಷೆಯೊಂದಿಗೆ ಆಯಾಯ
ರಾಜ್ಯದ ಭಾಷೆಯ ಮೂಲಕವೇ 5ನೇ ತರಗತಿಯವರೆಗೆ ಪಡೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದೆ. ಆ ಹಂತದಲ್ಲಿ ವಿಶ್ವ ಅಧ್ಯಯನದ ವರದಿಯ ಆಧಾರದಂತೆ ಮಗುವೊಂದು ಶೇ. 85 ರಷ್ಟು ತನ್ನ ಮೆದುಳಿನ ಸಾಮರ್ಥ್ಯದೊಂದಿಗೆ ಸಂಪೂರ್ಣವಾಗಿ ತನ್ನ ಮಾತೃಭಾಷೆಯಲ್ಲಿಯೇ ಆ ಭಾಷೆಯ ಸಾಹಿತ್ಯದವರೆಗೆ ಅರ್ಜಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಂತರ ಅರ್ಜಿಸಿದ ವಿಷಯವನ್ನು ವಿಶ್ವದ ಯಾವುದೇ ಭಾಷೆಗೆ ಸಂವಹನ ಭಾಷೆಯಾಗಿ ಬಳಸಿಕೊಳ್ಳಲು ಮಗು ಸಮರ್ಥವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ ಎಂದು ಹೇಳಿದರು.

ಆ ಕಾರಣದಿಂದ ಕೇಂದ್ರ ಸರ್ಕಾರದ ಹಿಡಿತದಲ್ಲಿರುವ CBSE, ICSE ಗಳನ್ನು ಕೂಡ ಇಂಗ್ಲಿಷ್‌ ಮಾಧ್ಯಮವಾಗಿ ಬಳಸಿಕೊಂಡಿದ್ದರೂ ಆ ಸಂಸ್ಥೆಗೆ ಸೇರ್ಪಡೆಗೊಳ್ಳುವಾಗ ಮಾತೃ ಭಾಷೆ mother tongue ಕಾಲಂನಲ್ಲಿ ನಮೂದಿಸಿದ ಭಾಷೆಯನ್ನೇ ಮಾತೃ ಭಾಷೆಯೆಂದು ಪರಿಗಣಿಸಿದ್ದರಿಂದ ಅದರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಸ್ವತಃ ಕೇಂದ್ರ ಸರ್ಕಾರವೇ ಒಂದು (Task force) “ಜಂಟಿ ಕಾರ್ಯಾಚರಣಾ ತಂಡ ರಚಿಸುವ ನಿರ್ಣಯವನ್ನು “ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದು ಇನ್ನೆನು ತನ್ನ ಕಾರ್ಯಾಚರಣೆಯನ್ನು ನಡೆಸಲು ಪ್ರಾರಂಭಿಸಲಿದೆ.

ಈ ಕಾರಣದಿಂದ ನಮ್ಮ ದೇಶದಲ್ಲಿ ಶಿಕ್ಷಣವು ಸಮವರ್ತಿಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ಈ ಹಿಂದಿನ ಎಲ್ಲಾ ನೀತಿಗಳನ್ನು ಕೇಂದ್ರ ಸರ್ಕಾರವೇ ರೂಪಿಸಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು NCERT ಮತ್ತು DSERT ಯ ಮೂಲಕ ನಡೆಯುವುತ್ತಿದ್ದು, ಪ್ರಸ್ತುತ್ತವು ಕೂಡ ನಮ್ಮ ಸಂಘಟನೆಗೆ ತಿಳಿದಂತೆ ರಾಜ್ಯದಲ್ಲಿ NEP 2020 ಇದರ ಆಶಯಗಳು ಸಂಪನ್ನಗೊಳ್ಳುತ್ತಿದೆ.

ಇದನ್ನೂ ಓದಿ | Ragi Malt: ಮುಂದಿನ ತಿಂಗಳಿಂದ ವಿದ್ಯಾರ್ಥಿಗಳಿಗೆ ‘ರಾಗಿ ಮಾಲ್ಟ್’; ಸಚಿವ ಮಧು ಬಂಗಾರಪ್ಪ

ಅಲ್ಲದೇ ಅತ್ಯಂತ ಸಮಪರ್ಕವಾದ ಆಶಯಗಳನ್ನು ಮರುವಿನ್ಯಾಸದೊಂದಿಗೆ ರೂಪುಗೊಂಡಿದ್ದು, ಭಾವಿ ಭಾರತದ ಮಾನವ ಸಂಪತ್ತನ್ನು ಸಮೃದ್ಧವಾಗಿ ಬಳಸಿಕೊಳ್ಳುವ ತನ್ಮೂಲಕ ಶಿಕ್ಷಣದ ಮೂಲಕವೇ ಉದ್ಯೋಗಧಾತನಾಗಿ ಹೊರತರುವ ಎಲ್ಲಾ ಭರವಸೆಗಳನ್ನು ಮೂಡಿಸುವ ಈ ವ್ಯವಸ್ಥೆಯನ್ನು ಮಾನ್ಯ ಘನ ರಾಜ್ಯ ಸರ್ಕಾರವು, ನೀತಿ ಆಶಯದಂತೆ ತನ್ನ ವ್ಯಾಪ್ತಿಯಲ್ಲಿ ಬದಲಾಯಿಸುವ ಅವಕಾಶಗಳನ್ನು ಇಟ್ಟುಕೊಂಡು, ಇನ್ನು ಉಳಿದಂತೆ ಯಥಾವತ್ತಾಗಿ ನೀತಿ ಆಶಯಕ್ಕೆ ಪೂರಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಜೊತೆಗೆ ದೇಶದಲ್ಲೇ ಪ್ರಥಮವಾಗಿ ಈ ನೀತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿದವರಿಗೆ ಕನ್ನಡಿಗರಾದ ನಮ್ಮ ಹೆಮ್ಮೆಯ ಕೊಡುಗೆಯನ್ನು ದೇಶಕ್ಕೆ ನೀಡುವಂತೆ ತಾವು ಪಾತ್ರರಾಗಬೇಕು ಎಂದು ಜಯಶೀಲ ಶೆಟ್ಟಿ ಕುಂದಾಪುರ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಉದಯಕುಮಾರ್, ರಮೇಶ್, ಗುಣಚಂದ್ರ ಹೆಗಡೆ ಉಪಸ್ಥಿತರಿದ್ದರು.

Exit mobile version