Site icon Vistara News

Karnataka Election 2023: ಎಲೆಕ್ಷನ್‌, ಐಪಿಎಲ್‌ ಎಫೆಕ್ಟ್‌; ಪ್ರೇಕ್ಷಕರಿಲ್ಲದೆ ಚಿತ್ರಮಂದಿರಗಳು ಭಣಭಣ

ಸಂತೋಷ್‌ film theatre

#image_title

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ (Assembly election 2023) ಕಾವು ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಈ ಚುನಾವಣಾ ಸಮಯವು ಕೆಲ ಉದ್ಯಮಗಳಿಗೆ ವರವಾದರೆ, ಕೆಲ ಉದ್ಯಮಗಳಿಗೆ ಹೊಡೆತ ಬೀಳುತ್ತಿದೆ. ಅದರಲ್ಲೂ ಕನ್ನಡ ಚಿತ್ರೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಎಲೆಕ್ಷನ್​ ಮತ್ತು ಐಪಿಎಲ್​ ಸೀಸನ್​ ಹಿನ್ನೆಲೆಯಲ್ಲಿ ಚಿತ್ರಮಂದಿರಗಳತ್ತ ಪ್ರೇಕ್ಷಕರ ಸುಳಿವೇ (no audience) ಇಲ್ಲದಂತಾಗಿದೆ.

ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಎರಡು ದಿನವಷ್ಟೇ ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳ ಎಲ್ಲ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಎಲ್ಲರೂ ಕೊನೇ ಹಂತದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಐಪಿಎಲ್​ ಸೀಸನ್‌ ಇರುವುದರಿಂದ ಟಿವಿ ಹಾಗೂ ಮೊಬೈಲ್‌ನಲ್ಲಿ ಬಂಧಿಯಾಗಿದ್ದಾರೆ. ಹೀಗಾಗಿ ಚಿತ್ರಮಂದಿರಗಳತ್ತ ಭೇಟಿ ನೀಡುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ನಿರ್ಮಾಪಕ ಲಹರಿ ವೇಲು ತಿಳಿಸಿದ್ದಾರೆ.

ಹೊಸ ಚಿತ್ರ ಬಿಡುಗಡೆ ಸದ್ಯಕ್ಕಿಲ್ಲ

ಕಳೆದ ಮಾಸಾಂತ್ಯದಲ್ಲಿ ಮಾತ್ರ ಎರಡು ಚಿತ್ರಗಳು ಬಿಡುಗಡೆ ಆಗಿದ್ದವು. ನಟ ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್ ಹಾಗೂ ನಟ ವಿಜಯ್ ರಾಘವೇಂದ್ರ ಅವರ ಪ್ರಯೋಗಾತ್ಮಕ ಚಿತ್ರ ರಾಘು ಬಿಡುಗಡೆ ಆಗಿದೆ. ಈ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ಥಿಯೇಟರ್‌ ಬಳಿ ಬರಲು ಯಾರೂ ಕೂಡ ಮನಸ್ಸು ಮಾಡುತ್ತಿಲ್ಲ.

ಇದನ್ನೂ ಓದಿ: Karnataka Election 2023: ಅಸೆಂಬ್ಲಿ ಎಲೆಕ್ಷನ್‌ ಎಫೆಕ್ಟ್‌; ಬೆಂಗಳೂರಲ್ಲಿ ಓಲಾ, ಉಬರ್‌ಗಳಿಗೆ ಹೆಚ್ಚಿದ ಡಿಮ್ಯಾಂಡ್‌

ಕಳೆದ ಶುಕ್ರವಾರ ಯಾವ ಕನ್ನಡ ಚಿತ್ರ ಕೂಡ ಬಿಡುಗಡೆ ಕಂಡಿಲ್ಲ. ಅಲ್ಲದೆ, ಮೇ 13ಕ್ಕೆ ಚುನಾವಣಾ ಫಲಿತಾಂಶದ ನಂತರವಷ್ಟೇ ಚಿತ್ರಗಳನ್ನು ಬಿಡುಗಡೆ ಮಾಡಲು ಕೆಲ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತ ಥಿಯೇಟರ್ ಆಡಿಯನ್ಸ್​​​ಗಳನ್ನೇ ನಂಬಿಕೊಂಡಿದ್ದ ಹಲವು ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರತಿ ವಾರ ಗಾಂಧಿನಗರದಲ್ಲಿ ಹೊಸ ಚಿತ್ರಗಳ ಬಿಡುಗಡೆ ಸದ್ದು ಮಾಡುತ್ತಿತ್ತು. ಆದರೆ ಪ್ರೇಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಚಿತ್ರಮಂದಿರಗಳತ್ತ ಮುಖ ಮಾಡದ ಹಿನ್ನೆಲೆಯಲ್ಲಿ ಥಿಯೇಟರ್ ಮಾಲೀಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version