ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚುನಾವಣಾ (Karnataka Election) ಭರಾಟೆ ಜೋರಾಗಿದೆ. ಸಾಮಾನ್ಯವಾಗಿ ಮತದಾರರನ್ನು ಸೆಳೆಯಲು ಸೀರೆ, ಕುಕ್ಕರ್ ಕೊಡುವುದು ಮಾತ್ರವಲ್ಲದೆ ಬಾಡೂಟ ಹಾಕಿಸುತ್ತಿದ್ದವರು ಈಗ ಮತದಾರರಿಗೆ ಛತ್ರಿ ಹಿಡಿಯುತ್ತಿದ್ದಾರೆ.
ಬೇಸಿಗೆ ಕಾಲ ಶುರುವಾಗಿದ್ದು, ಇದನ್ನೂ ಕೂಡ ರಾಜಕೀಯ ಪಕ್ಷಗಳು ಪ್ರಚಾರದ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಮತದಾರರಿಗೆ ನೀಡಲಾಗುತ್ತಿದ್ದ ಕೊಡುಗೆಗಳ ಸಾಲಿಗೆ ಈಗ ಛತ್ರಿ ಕೂಡ ಸೇರಿಕೊಂಡಿದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಘುವೀರ್ಗೌಡ ಛತ್ರಿ ಪಾಲಿಟಿಕ್ಸ್‌ಗೆ ಮುಂದಾಗಿದ್ದಾರೆ. ಗುರುವಾರ ರಾಜಾಜಿನಗರ ಕ್ಷೇತ್ರದ ಬೀದಿಬದಿ ವ್ಯಾಪಾರಿಗಳಿಗೆ ರಘುವೀರ್ ಚಾರಿಟಬಲ್ ಟ್ರಸ್ಟ್ನಿಂದ ಛತ್ರಿ ಹಂಚುವ ಮೂಲಕ ಮತದಾರರ ಮನಸೆಳೆಯಲು ಯತ್ನಿಸಲಾಗಿದೆ.
ಇದನ್ನೂ ಓದಿ: Karnataka Election 2023: ಚುನಾವಣೆ ಪೂರ್ವ ತಯಾರಿ ಶೀಘ್ರ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಸೂಚನೆ
ಶಿವನಗರದ ಸಿದ್ದಗಂಗಾ ಮಠ ಆವರಣದಲ್ಲಿ ಛತ್ರಿ ವಿತರಿಸಿದ ರಘುವೀರ್, ಮತದಾರರ ಮತಕ್ಕೆ ಗಾಳ ಹಾಕಲು ಯತ್ನಿಸಿದ್ದಾರೆ. ಸದ್ಯ ಛತ್ರಿ ಪಡೆದ ಜನರು ಕೂಡ ಫುಲ್ ಖುಷ್ ಆಗಿದ್ದು, ಇತ್ತ ಬೀದಿಬದಿ ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆ ಸಿಗಲಿ ಎಂದು ಛತ್ರಿ ನೀಡಿರುವುದಾಗಿ ರಘುವೀರ್ಗೌಡ ಹೇಳಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ