ಚಿತ್ರದುರ್ಗ: ರಾಜ್ಯ ವಿಧಾನಸಭೆ ಚುನಾವಣೆ (Karnataka election) ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕೆಂದು ಅಭ್ಯರ್ಥಿಗಳು ಸರ್ಕಸ್ ಮಾಡುತ್ತಿದ್ದಾರೆ. ಮತದಾನ ದಿನದ ಕೊನೇ ಕ್ಷಣದಲ್ಲಿ ಮತದಾರರಿಗೆ ಬಗೆಬಗೆಯ ಆಮಿಷವೊಡ್ಡಲಾಗುತ್ತಿದೆ. ಕುಕ್ಕರ್, ದಿನಸಿ ಸಾಮಾನು, ಸೀರೆ ಹಂಚಿಕೆ ಬಳಿಕ ಇದೀಗ ಕೋಳಿ ಹಂಚಿಕೆ ಆರೋಪವೊಂದು ಕೇಳಿ ಬಂದಿದೆ.
ಇಲ್ಲಿನ ಹೊಸದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಿಂದ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ. ಗೋವಿಂದಪ್ಪ ಬೆಂಬಲಿಗರು ತಡ ರಾತ್ರಿ 2:30ರ ಸುಮಾರಿಗೆ ಮನೆ ಮನೆಗೆ ಕೋಳಿಯನ್ನು ಹಂಚುತ್ತಿದ್ದರು ಎನ್ನಲಾಗಿದೆ.
ಹೊಸದುರ್ಗ ತಾಲೂಕಿನ ಗರಗ್ ಗ್ರಾಮದಲ್ಲಿ 15 ಜನರ ಗುಂಪೊಂದು ಮತದಾರರ ಮನೆಗೆ ತೆರಳಿ ಮತ ಹಾಕುವಂತೆ ಹೇಳಿ ಕೋಳಿ ಹಂಚಿ ಆಮಿಷವೊಡ್ಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಪಾಂಡುರಂಗ ಗರಗ್ ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ
ಪಾಂಡುರಂಗ ಗರಗ್ ಸ್ವಗ್ರಾಮದಲ್ಲೇ ಕೋಳಿ ಹಂಚಲು ತಂದ ಟಾಟಾ ಎಸಿ ವಾಹನವನ್ನು ತಡೆದು ಕಿಡಿಕಾರಿದ್ದಾರೆ. ಕೋಳಿ ಹಂಚಿಕೆ ಮಾಡುತ್ತಿರುವ ವಿಡಿಯೊವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.