Site icon Vistara News

Karnataka Election: ಫುಟ್ಬಾಲ್‌ ಗುರುತಿಗೆ ಮತ ನೀಡಿ, ಸಾವಿರಾರು ಕೋಟಿ ರೂ. ಅನುದಾನ ತರುತ್ತೇನೆ: ಎಚ್‌. ಮಹೇಶ್‌

ಕೆಆರ್‌ಪಿಪಿ ಅಭ್ಯರ್ಥಿ ಎಚ್‌.ಮಹೇಶ್‌ ಚುನಾವಣಾ ಪ್ರಚಾರ.

ಹಿರಿಯೂರು: “ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡಿ ಕ್ಷೇತ್ರವನ್ನು ಕೊಂಡುಕೊಳ್ಳಬೇಕು ಎಂದು ಕೆಲವರು ಶಿರಾ, ಚಳ್ಳಕೆರೆ ಮತ್ತು ಬೆಂಗಳೂರಿನಿಂದ ಬಂದಿದ್ದಾರೆ. ಆದರೆ, ನೀವು ಉತ್ತಮ ಆಯ್ಕೆಯಾಗಿ ಪುಟ್ಬಾಲ್ ಗುರುತಿಗೆ ಮತ ನೀಡಿ” ಎಂದು ಕೆಆರ್‌ಪಿಪಿ ಸ್ಥಳೀಯ ಅಭ್ಯರ್ಥಿ (Karnataka Election) ಗನ್ನಾಯಕನಹಳ್ಳಿ ಎಚ್.ಮಹೇಶ್ ಹೇಳಿದರು.

ತಾಲೂಕಿನ ಪಾಲವ್ವನಹಳ್ಳಿ, ಗೂಳ್ಯ, ಸೂಗೂರು ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಮತಪ್ರಚಾರ ನೆಡೆಸಿ ಮಾತನಾಡಿದ ಅವರು, “ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಿ. ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ. ಈ ಕ್ಷೇತ್ರದ ಘನತೆ ಮತ್ತು ಗೌರವ ಕಾಪಾಡಿ. ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ಕಳಿಸಿದರೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka election 2023: ಮೂಲ ಸೌಕರ್ಯ, ಸುಂದರ, ಸ್ವಚ್ಛ ನಗರ ನನ್ನ ಗುರಿ: ನಾರಾ ಭರ‌ತ್‌ ರೆಡ್ಡಿ

ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡುತ್ತೇನೆ. ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗುವುದು. ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ನೀಡುತ್ತೇವೆ. ಬಡ್ಡಿ ರಹಿತ ಸಾಲವನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಜತೆಗೆ ರೈತರ ನೀರಾವರಿಗೆ ಸಂಬಂಧಿಸಿದಂತೆ ಬೀಜ, ರಸಗೊಬ್ಬರ ಕಡಿಮೆ ದರದಲ್ಲಿ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸ್ಥಳೀಯ ಅಭ್ಯರ್ಥಿಗೆ ಒಮ್ಮೆ ಅವಕಾಶ ನೀಡಿ” ಎಂದು ಮನವಿ ಮಾಡಿದರು.

Exit mobile version