ಪಾವಗಡ: ರಾಜ್ಯದೆಲ್ಲೆಡೆ ಬಿಜೆಪಿ ಪರ ಚುನಾವಣಾ (Karnataka Election) ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ತುಮಕೂರಿನ ಪಾವಗಡದಲ್ಲಿ ಪ್ರಚಾರ ನಡೆಸಿದ್ದಾರೆ. ಅಲ್ಲಿ ಅವರು ಜನರಿಗೆ “ರಾಜ್ಯದಲ್ಲಿ ಮುಂದಿನ 5 ವರ್ಷಕ್ಕೆ ಮುಖ್ಯಮಂತ್ರಿಯನ್ನಾಗಿ ಆಶೀರ್ವಾದ ಮಾಡಿ, ನಿಮ್ಮ ಋಣವನ್ನು ತೀರಿಸುತ್ತೇನೆ” ಎಂದು ಹೇಳಿದ್ದಾರೆ.
ಪಾವಗಡ ಪಟ್ಟಣದ ಗುರುಭವನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸಮಾವೇಶದಲ್ಲಿ ಕೆ.ಎಂ. ತಿಮ್ಮಾರಾಯಪ್ಪ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, “ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ನಿಮ್ಮ ಮನೆ ಮಗನಾಗಿ ಋಣ ತೀರಿಸುವೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election: ಹಾಸನ ಜಿಲ್ಲೆಯಲ್ಲಿ ತಂದೆ-ಮಗನ ಅಬ್ಬರ; ವಿವಿಧೆಡೆ ಯಡಿಯೂರಪ್ಪ, ವಿಜಯೇಂದ್ರ ರೋಡ್ ಶೋ
“ನಾನು ಪಾವಗಡಕ್ಕೆ ಬಂದಂತಹ ಎಲ್ಲ ಸಂದರ್ಭದಲ್ಲಿ ಮನೆ ಮಗನಂತೆ ಕಂಡಿದ್ದೀರಾ? ಹಾಗೆಯೇ ಪ್ರೀತಿ ತೋರಿದ್ದೀರಾ? ಇಂದು ಜನಸಾಗರದ ಸುನಾಮಿಯನ್ನು ಇಲ್ಲಿ ಕಂಡಿದ್ದೇನೆ. ಈಗಾಗಲೇ ಪಾವಗಡ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಹಳ್ಳಿಹಳ್ಳಿಗಳಿಗೂ ಬಂದಿದ್ದೇನೆ. ನೀವುಗಳು ತೋರಿದ ಪ್ರೀತಿಯನ್ನು ನನ್ನ ಈ ದೇಹ ಮಣ್ಣಿಗೆ ಹೋಗುವವರೆಗೂ ಮರೆಯುವುದಿಲ್ಲ. ನಿಮ್ಮ ಋಣ ತೀರಿಸುವೆ” ಎಂದು ಹೇಳಿದ್ದಾರೆ.
“ನಿಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ತಿಮ್ಮರಾಯಪ್ಪರನ್ನು ಅತ್ಯಂತ ಬಹುಮತಗಳಿಂದ ಗೆಲ್ಲಿಸಿದಲ್ಲಿ ಸಚಿವರನ್ನಾಗಿ ಮಾಡಿ ನಿಮ್ಮ ಋಣ ತೀರಿಸುತ್ತೇನೆ” ಎಂದು ಸಾವಿರಾರು ಕಾರ್ಯಕರ್ತರಲ್ಲಿ ಎಚ್.ಡಿ. ಕುಮಾರಸ್ವಾಮಿ ಕೈಮುಗಿದಿದ್ದು, ಮತಯಾಚಿಸಿದರು.
ಇದನ್ನೂ ಓದಿ: Karnataka Election 2023: ಮೋದಿ ರೋಡ್ ಶೋಗೆ ಆಂಬ್ಯುಲೆನ್ಸ್ ಅಡ್ಡ ತರುವ ನೀಚ ಕೆಲಸವನ್ನು ನಾವು ಮಾಡಲ್ಲ: ಡಿ.ಕೆ. ಶಿವಕುಮಾರ್
ಈ ವೇಳೆ ಚನ್ನಮಲ್ಲಪ್ಪ, ಸೊಗಡು ವೆಂಕಟೇಶ್, ಅಂಜನ್ ಕುಮಾರ್, ನಂಜುಂಡಸ್ವಾಮಿ, ವಳ್ಳೂರು ಹನಮಂತರೆಡ್ಡಿ, ರೋಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ ಮತ್ತು ಇತರೆ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರ ಭಾಗಿಯಾಗಿದ್ದರು.