ಹೊನ್ನಾಳಿ: ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಚುನಾವಣೆಯ ಅಖಾಡ ರಂಗೇರಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಅದೇ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಹಾಗೂ ಪಕ್ಷದ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಪ್ರಚಾರ ನಡೆಸಿದ್ದಾರೆ.
ಬೈಕ್ ರ‍್ಯಾಲಿಗೂ ಮೊದಲು ರೇಣುಕಾಚಾರ್ಯ ಅವರು ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. “ಅವರು ಇದು ನನ್ನ ಕೊನೇ ಚುನಾವಣೆ ಎಂದು ಮತ ಕೇಳುತ್ತಿದ್ದಾರೆ. ಅಭಿವೃದ್ಧಿ ಮಾಡುವಲ್ಲಿ ಹಿಂದೆ ಇದ್ದು, ಈಗ ನನ್ನ ಕೊನೇ ಚುನಾವಣೆ ಎಂದು ಮತದಾರರ ಹತ್ತಿರ ಅತ್ತೂ ಕರೆದೂ ಮತ ಗಿಟ್ಟಿಸಿಕೊಳ್ಳುತ್ತಿದ್ದಾರೆ” ಎಂದು ದೂರಿದ್ದಾರೆ.
ಇದನ್ನೂ ಓದಿ: Karnataka election 2023: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೌಲ್‌ಬಜಾರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ ಪ್ರಚಾರ
“ನಾನೇನು ಅವರ ಮನೆಯ ಮೇಲೆ ರೈಡ್ ಮಾಡಿಸಿಲ್ಲ. ಅಂತಹ ಗತಿ ನನಗೆ ಬಂದಿಲ್ಲ. ನಾನು ನಿಷ್ಠಾವಂತ ರಾಜಕಾರಣಿ. ಇನ್ನೊಬ್ಬರಿಗೆ ಕೇಡನ್ನು ಬಯಸುವುದಿಲ್ಲ. ನಾನು ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಕೆಲಸ ಮಾಡಿದ್ದೇನೆ. ಶಾಸಕರಿದ್ದಾಗ ಮರಳನ್ನು ಲೂಟಿ ಮಾಡಿ ಜನಗಳ ಹತ್ತಿರ ವಸೂಲಿ ಮಾಡಿದವರು ನೀವು ಎಂಬುದು ನೆನಪಿರಲಿ. ನಾನು ಬಡವರಿಗೆ ಮನೆ ಕಟ್ಟಲು ಉಚಿತವಾಗಿ ಮರಳು ಕೊಡಲು ಸಿದ್ಧನಿದ್ದೇನೆ. ಯಾವುದೇ ಕಾಸಿಲ್ಲದೆ, ಹಣ ತೆಗೆದುಕೊಳ್ಳದೆ ದೇವಸ್ಥಾನಗಳಿಗೆ ಮರಳನ್ನು ಕೊಡುತ್ತೇನೆ. ನಾನು ನಾಯಕನಲ್ಲ, ಸೇವಕ ಎಂದು ಪದೇಪದೇ ಹೇಳುತ್ತಿದ್ದೇನೆ. ನನ್ನ ಗೆಲುವಲ್ಲ ಇದು ಜನರ ಗೆಲುವು” ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಹಾಗೂ ಕುಬೇರಪ್ಪ ಕೆಪಿ, ತಾಲೂಕು ಅಧ್ಯಕ್ಷ ಜಿ ಕೆ ಸುರೇಶ್, ಪುರಸಭೆ ಸದಸ್ಯ ಹೊಸಕೆರೆ ಸುರೇಶ್, ಪುರಸಭೆ ಅಧ್ಯಕ್ಷ ಸುಮಾ ಮಂಜುನಾಥ್, ಮಾಜಿ ಅಧ್ಯಕ್ಷ ರಂಗನಾಥ್ ಎ, ಬಾಬು ಓಬಳಕರ್, ಸರಳಿ ಮನೆ ಮಂಜಪ್ಪ, ಮಾಜಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ, ಬಿಂಬ ಮಂಜಣ್ಣ ಹಾಗೂ ಬಿಜೆಪಿ ಕಾರ್ಯಕರ್ತರು ಇನ್ನು ಮುಂತಾದವರು ಭಾಗವಹಿಸಿ ಮಾಡಿಕೊಟ್ಟರು.