Site icon Vistara News

Karnataka Election: ಮದುವೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಇದು ನೀತಿ ಸಂಹಿತೆ ಎಫೆಕ್ಟ್‌

Mallikarjuna Stadalabagi Theerthahalli

#image_title

ತೀರ್ಥಹಳ್ಳಿ: “ಚುನಾವಣಾ ಮಾದರಿ ನೀತಿ ಸಂಹಿತೆ (Karnataka Election) ಜಾರಿಯಲ್ಲಿ ಇರುವುದರಿಂದ ತಾಲೂಕಿನಲ್ಲಿ ನಡೆಯುವ ಮದುವೆ, ಇನ್ನಿತರ ಸಮಾರಂಭಗಳಿಗೆ ಅನುಮತಿ ಕಡ್ಡಾಯ. ಮತದಾರರಿಗೆ ಭರವಸೆ, ಆಮಿಷ ಒಡ್ಡುವ ಕುರಿತು ದೂರು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ” ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ (ಮಾ.30) ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ದೂರು ಸ್ವೀಕರಿಸಲು ತಾಲೂಕು ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ. ಮೊಬೈಲ್‌ ಸಂಖ್ಯೆ – 7676050767, ದೂರವಾಣಿ ಸಂಖ್ಯೆ 08181-1200925 ನಂಬರ್‌ ಸಂಪರ್ಕಿಸಬಹುದು” ಎಂದು ತಿಳಿಸಿದರು.

ಇದನ್ನೂ ಓದಿ: Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

“ಕ್ಷೇತ್ರದಲ್ಲಿ ಒಟ್ಟು 258 ಮತಗಟ್ಟೆಗಳಿದ್ದು ಅತಿ ಸೂಕ್ಷ-7, ಸೂಕ್ಷ್ಮ-56, ದುರ್ಬಲ-11, ಸಾಮಾನ್ಯ-154 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,86,566 ಮತದಾರರಿದ್ದು, ಈ ಪೈಕಿ ಪುರುಷ – 92,131, ಮಹಿಳೆ – 94,435 ಮತದಾರರಿದ್ದಾರೆ. ವಿಶೇಷ ಚೇತನ ವರ್ಗಕ್ಕೆ ಸೇರಿದ್ದ – 989 ಮತದಾರರಿದ್ದು ಹಿರಿಯ ನಾಗರಿಕರು 3,763 ಮತದಾರರಿದ್ದಾರೆ” ಎಂದರು.

“ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ ಗಡಿಕಲ್ಲು, ಮುಡುಬ, ಉಂಬಳೇಬೈಲು, ಆಗುಂಬೆ, ಬಿದರಗೋಡು, ಮಾಸ್ತಿಕಟ್ಟೆಯಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ನೀತಿ ಸಂಹಿತೆ, ಚುನಾವಣಾ ಅಕ್ರಮಗಳನ್ನು ತಡೆಯಲು 26 ಸೆಕ್ಟರ್‌ ಅಧಿಕಾರಿಗಳನ್ನು, ಎಫ್‌ಎಸ್‌ಟಿ, ಎಸ್‌ಎಸ್‌ಟಿ, ವಿಎಸ್‌ಟಿ, ವಿವಿಟಿ ಹಾಗೂ ಅಕೌಂಟಿಂಗ್‌ ತಂಡಗಳನ್ನು ನೇಮಕಾತಿ ಮಾಡಲಾಗಿದೆ. ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Supreme Court: ದ್ವೇಷ ಭಾಷಣ ತಡೆಗೆ ಸರ್ಕಾರಕ್ಕೆ ಶಕ್ತಿ ಇಲ್ಲವೇ?: ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಗರಂ

“ಖಚಿತ ದಾಖಲೆಗಳಿಲ್ಲದ 50,000 ರೂಪಾಯಿ ಮೇಲಿನ ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೋಸ್ಕರ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯಗಳು ಕಂಡುಬಂದಲ್ಲಿ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ದಾಖಲಿಸಲಾಗುತ್ತದೆ” ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ದಲ್ಜಿತ್ ಕುಮಾರ್‌, ಸಹಾಯಕ ಚುನಾವಣಾಧಿಕಾರಿ ಅಮೃತ್‌ ಅತ್ರೇಶ್‌ ಇದ್ದರು.

ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!

Exit mobile version