ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರ (Jayanagar Election Results)ದಲ್ಲಿ ಮತ ಎಣಿಕೆ ಗೊಂದಲ ಏರ್ಪಟ್ಟಿದೆ. ಇಲ್ಲಿ ಸೌಮ್ಯಾ ರೆಡ್ಡಿಯವರ ಗೆಲುವು ಘೋಷಣೆ ಆಗಿತ್ತು. ಆದರೆ ಆ ಫಲಿತಾಂಶ ಅಂತಿಮವಲ್ಲ ಎಂದು ಗೊತ್ತಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ದಾಂಧಲೆ ಎಬ್ಬಿಸಿದ್ದಾರೆ. ಅಲ್ಲಿ ಸೌಮ್ಯಾ ರೆಡ್ಡಿಗೆ ಕೂಡ ಈಗಾಗಲೇ ಟೆನ್ಷನ್ ಶುರುವಾಗಿದೆ. ಬಿಜೆಪಿ ನಾಯಕರಾದ ಆರ್.ಅಶೋಕ್, ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಅವರೆಲ್ಲ ಅಲ್ಲಿಯೇ ಬೀಡು ಬಿಟ್ಟವರು, ಈಗ ಅಲ್ಲಿಗೆ ಡಿ.ಕೆ.ಶಿವಕುಮಾರ್ ಬರುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ಅಲ್ಲಿಂದ ಹೊರಟಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಆಗಮಿಸಿ, ಮತ ಎಣಿಕೆ ಕೇಂದ್ರದ ಬಳಿಯೇ ಕುಳಿತಿದ್ದಾರೆ.
ಜಯನಗರ ಮತ ಎಣಿಕೆ ಕೇಂದ್ರದ ಬಳಿ ಗೊಂದಲ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ , ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಾಂಧಲೆ ಹೆಚ್ಚಾದ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದ ಬಾಗಿಲನ್ನು ಕ್ಲೋಸ್ ಮಾಡಿದ್ದಾರೆ. ಹಾಗಿದ್ದಾಗ್ಯೂ ಕೈ ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಆ ಕೇಂದ್ರದ ಗೇಟ್ ಮುರಿದು ಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಕೂಡಲೇ ಫಲಿತಾಂಶ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರೂ ಗಲಾಟೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Jayanagar Election Results : ಜಯನಗರ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಸೌಮ್ಯ ರೆಡ್ಡಿ
ಸೌಮ್ಯ ರೆಡ್ಡಿ ಅವರು ಇಲ್ಲಿ ಕೇವಲ 160 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಆದರೆ ಮತ ಎಣಿಕೆ ಕಾರ್ಯದ ಮೇಲೆ ಸಂಶಯ ವ್ಯಕ್ತಪಡಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮೂರ್ತಿ ಕಡೆಯಿಂದ ಮನವಿ ಮಾಡಿ, ಮರು ಎಣಿಕೆಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಮತ್ತೆ ಅಂಚೆ ಮತಗಳನ್ನು ಕೌಂಟ್ ಮಾಡಿದಾಗ ಆಗ ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮೂರ್ತಿ 17 ಮತಗಳ ಮುನ್ನಡೆ ಸಾಧಿಸಿದ್ರು. ಇದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಆಕ್ರೋಶಕ್ಕೆ ಕಾರಣ ಆಗಿದೆ. ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳ ಮೇಲೆ ಗರಂ ಆಗಿರುವ ರಾಮಲಿಂಗಾ ರೆಡ್ಡಿ ಹಾಗೂ ಸೌಮ್ಯ ರೆಡ್ಡಿ ತಮ್ಮದೇ ಗೆಲುವು ಎಂದು ಘೋಷಿಸಬೇಕು ಅಂತ ಪಟ್ಟು ಹಿಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಸಿಟ್ಟಾಗಿದ್ದಾರೆ. ತೇಜಸ್ವಿ ವಿರುದ್ಧ ಕಿಡಿಕಾರುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎನ್ನುತ್ತಿದ್ದಾರೆ.