Site icon Vistara News

Karnataka Election Results : ಯಾದಗಿರಿಯ 3 ಕ್ಷೇತ್ರಗಳಲ್ಲಿ ಕೈ ಹಿಡಿದ ಮತದಾರ, ಜೆಡಿಎಸ್‌ಗೆ ಒಂದು ಸ್ಥಾನ

Yadgiri district winning candidates

ಯಾದಗಿರಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election Results) ಹೊರಬಿದ್ದಿದ್ದು, ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಬಾರಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಒಂದು ಸ್ಥಾನ ಜೆಡಿಎಸ್ ಪಕ್ಷ ಗೆದ್ದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಿಎಂ ಮೋದಿ, ಅಮೀತ್ ಶಾ ಅವರ ಹವಾ ನಡೆದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮಿಂಚಿನ ಪ್ರಚಾರ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರ ಪ್ರಚಾರ ಹಾಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್, ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದಿದೆ.

ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಸುರಪುರ, ಯಾದಗಿರಿ ಏರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಶಹಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿತ್ತು.

ಇದನ್ನೂ ಓದಿ: Alternative Of Mosquito Repellents: ಸೊಳ್ಳೆ‌ ಕಾಟದಿಂದ ಪಾರುಮಾಡುತ್ತವೆ ಈ ರಾಸಾಯನಿಕ ರಹಿತ ತೈಲಗಳು!

ಆದರೆ 2023ರ ಸಾರ್ವತ್ರಿಕ ವಿಧಾನಸಭೆ ಫಲಿತಾಂಶದಲ್ಲಿ ಮೂರು ಸ್ಥಾನ ಪಡೆದು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಒಂದು ಸ್ಥಾನ ಜೆಡಿಎಸ್ ಗೆದ್ದಿದೆ. ಸುರಪುರನ ಕಾಂಗ್ರೆಸ್ ಅಭ್ಯರ್ಥಿ ರಾಜಾವೆಂಕಟಪ್ಪ ನಾಯಕ , ಶಹಾಪುರನ ಕಾಂಗ್ರೆಸ್ ಅಭ್ಯರ್ಥಿ ಶರಣಬಸ್ಸಪ್ಪಗೌಡ ದರ್ಶನಾಪುರ, ಯಾದಗಿರಿಯ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು, ಗುರುಮಠಕಲ್ ನ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಗೆಲುವು ಸಾಧಿಸಿದ್ದಾರೆ. ಈ ಬಾರಿ ಬಿಜೆಪಿ ಪಕ್ಷವು ಎರಡು ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು

ಯಾದಗಿರಿ ಕ್ಷೇತ್ರವು ಬಿಜೆಪಿ ಹೀಡಿತದಲ್ಲಿತ್ತು. 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಯಾದಗಿರಿ ಕ್ಷೇತ್ರದಲ್ಲಿ ಒಟ್ಟು 155002 ಮತದಾನವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು 53802 ಮತಗಳನ್ನು ಪಡೆದಿದ್ದು,ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ 50129 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 3673 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಗೆಲುವು ಸಾಧಿಸಿದ್ದಾರೆ.

ಯಾದಗಿರಿ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು

ಚನ್ನಾರೆಡ್ಡಿ ಪಾಟೀಲ ತುನ್ನೂರು, (ಕಾಂಗ್ರೆಸ್) 53802 ಮತಗಳು, ವೆಂಕಟರೆಡ್ಡಿ ಮುದ್ನಾಳ (ಬಿಜೆಪಿ) 50129 ಮತಗಳು, ಹಣಮೇಗೌಡ ಬೀರನಕಲ್ (ಪಕ್ಷೇತರ) 36838 ಮತಗಳು, ಡಾ.ಎ.ಬಿ.ಮಾಲಕರೆಡ್ಡಿ (ಜೆಡಿಎಸ್) 7420 ಮತಗಳು, ಬಸವರಾಜ ರಾಮಸಮುದ್ರ (ಬಿಎಸ್ಪಿ) 694 ಮತಗಳು, ಮಾರುತಿರಾವ್ ಜಂಬಗಾ (ಡಾ.ಅಂಬೇಡ್ಕರ್ ಪಿಪುಲ್ಸ್ ಪಾರ್ಟಿ) 502 ಮತಗಳು, ರಂಜಾನ್ ಬೀ ಸೋಫಿಸಾಬ್ (ಆಲ್ ಇಂಡಿಯಾ ಉಲಮಾ ಕಾಂಗ್ರೆಸ್) 564 ಮತಗಳು, ಶರಣಬಸ್ಸಪ್ಪ ಕಮಲಪುರ, (ಕೆಆರ್ ಎಸ್) 199 ಮತಗಳು, ಕೆ.ಸೋಮಶೇಖರ್ (ಎಸ್‌ಯುಸಿಐ) 466 ಮತಗಳು, ನಜೀರಿನ್ ಕೌಸರ್ (ಪಕ್ಷೇತರ) 226 ಮತಗಳು, ಭೀಮಣ್ಣ (ಪಕ್ಷೇತರ) 252 ಮತಗಳು, ಮರಗಪ್ಪ ಸಾಲಿಕೇರಿ (ಪಕ್ಷೇತರ) 245 ಮತಗಳು, ಮಹಾಂತೇಶ (ಪಕ್ಷೇತರ) 336 ಮತಗಳು, ಯೆಂಕಪ್ಪ ಬಂಗ್ಲಿ (ಪಕ್ಷೇತರ) 853 ಮತಗಳು, ವೆಂಕಟರೆಡ್ಡಿ (ಪಕ್ಷೇತರ) 867 ಮತಗಳು, ನೋಟಾಕ್ಕೆ ಬಿದ್ದ ಮತಗಳು 1609.

ಇದನ್ನೂ ಓದಿ: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮನೆ ಬಳಿ ಜಮಾಯಿಸುತ್ತಿರುವ ಬೆಂಬಲಿಗರು; ಪೊಲೀಸ್​ ಭದ್ರತೆ

ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು

ಸುರಪುರ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜು ಗೌಡ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಆದರೆ 2023ರ ಚುನಾವಣೆಯ ಫಲಿತಾಂಶದಲ್ಲಿ ರಾಜು ಗೌಡ ಹೀನಾಯವಾಗಿ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸಿದ್ದಾರೆ. ರಾಜಾವೆಂಕಟಪ್ಪ ನಾಯಕ 113559 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಬಿಜೆಪಿ ರಾಜುಗೌಡ 88336 ಮತಗಳನ್ನು ಪಡೆದಿದ್ದು, ರಾಜುಗೌಡ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರಾಜಾವೆಂಕಟಪ್ಪ ನಾಯಕ 25223 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಭ್ಯರ್ಥಿಗಳು ಪಡೆದ ಮತಗಳ ವಿವರ

ರಾಜಾವೆಂಕಟಪ್ಪ ನಾಯಕ (ಕಾಂಗ್ರೆಸ್) 113559 ಮತಗಳು, ರಾಜುಗೌಡ ( ಬಿಜೆಪಿ ಅಭ್ಯರ್ಥಿ) 88336 ಮತಗಳು, ಮಂಜುನಾಥ ನಾಯಕ (ಆಮ್ ಆದ್ಮಿ) 1348 ಮತಗಳು, ಶ್ರವಣಕುಮಾರ ನಾಯಕ (ಜೆಡಿಎಸ್ ) 1544 ಮತಗಳು, ಅಶೋಕ್ ಲಕ್ಷ್ಮಣ್ಣ (ಪಕ್ಷೇತರ) 349 ಮತಗಳು, ವೆಂಕಟಪ್ಪ ನಾಯಕ ( ಪಕ್ಷೇತರ) 765 ಮತಗಳು, ಶಶಿಕುಮಾರ್ (ಪಕ್ಷೇತರ) 370 ಮತಗಳು, ಒಟ್ಟು 206271 ಮತಗಳು ಚಲಾವಣೆಯಾಗಿವೆ‌. ನೋಟಾಕ್ಕೆ ಬಿದ್ದ ಮತಗಳು 1259, ತಿರಸ್ಕೃತಗೊಂಡ ಮತಗಳು 236.

ಶಹಾಪುರದಲ್ಲಿ ದರ್ಶನಾಪುರ ಭರ್ಜರಿ ಗೆಲುವು

ಶಹಾಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಶರಣಬಸ್ಸಪ್ಪಗೌಡ ದರ್ಶನಾಪುರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 166714 ಮತಗಳು ಚಲಾವಣೆಯಾಗಿವೆ.ಕಾಂಗ್ರೆಸ್ ಅಭ್ಯರ್ಥಿ ಶರಣಬಸ್ಸಪ್ಪಗೌಡ ದರ್ಶನಾಪುರ 78353 ಮತಗಳು ಪಡೆದಿದ್ದು, ಎದುರಾಳಿ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ 52326 ಮತಗಳನ್ನು ಪಡೆದಿದ್ದು, ಶರಣಬಸ್ಸಪ್ಪಗೌಡ ದರ್ಶನಾಪುರ 26027 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Parineeti Chopra: ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಒತ್ತಿದ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ; ಸುಂದರ ಜೋಡಿ ಎಂದ ಸಿಎಂ ಕೇಜ್ರಿವಾಲ್​

ಅಭ್ಯರ್ಥಿಗಳು ಪಡೆದ ಮತಗಳು

ಶರಣಬಸ್ಸಪ್ಪಗೌಡ ದರ್ಶನಾಪುರ ( ಕಾಂಗ್ರೆಸ್) 78353 ಮತಗಳು, ಅಮೀನರೆಡ್ಡಿ ಯಾಳಗಿ ( ಬಿಜೆಪಿ) 52326 ಮತಗಳು, ಗುರು ಪಾಟೀಲ ( ಜೆಡಿಎಸ್) 30396 ಮತಗಳು, ಚಂದ್ರಶೇಖರಯ್ಯ ಸಾಬಯ್ಯ ( ಆಮ್ ಆದ್ಯ ) 1320 ಮತಗಳು, ಪ್ರಕಾಶ್ ಕುಲಕರ್ಣಿ (ಪಕ್ಷೇತರ) 888 ಮತಗಳು, ವಿಶ್ವರಾಧ್ಯ ಮೂಡಬೂಳ (ಸ್ವಯಂ ಕೃಷಿ ಪಾರ್ಟಿ) 740 ಮತಗಳು, ಮಮ್ಮದ್ ಜಿಲಾನಿ (ಪಕ್ಷೇತರ) 473 ಮತಗಳು, ಹಾಜಿ ಹುಷೇನ್ (ಪಕ್ಷೇತರ) 312 ಮತಗಳು, ಹೊನ್ನಯ್ಯ (ಪಕ್ಷೇತರ) 654 ಮತಗಳು,

ಖರ್ಗೆ ಕೋಟೆಯಲ್ಲಿ ಜೆಡಿಎಸ್ ಗೆಲುವು

ಗುರುಮಠಕಲ್ ಕ್ಷೇತ್ರವು ಎಐಸಿಸಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ನೆಚ್ಚಿನ ಕ್ಷೇತ್ರವಾಗಿತ್ತು. ಖರ್ಗೆ ಅವರಿಗೆ ಸತತ 8 ಬಾರಿ ವಿಧಾನಸಭೆಗೆ ಆಯ್ಕೆ ಮಾಡಿ ,ರಾಜಕೀಯ ನೆಲಕೊಟ್ಟ ಕ್ಷೇತ್ರವಾಗಿತ್ತು. ಈ ಬಾರಿ ಕಾಂಗ್ರೆಸ್‌ನಿಂದ ಬಾಬುರಾವ್ ಚಿಂಚನಸೂರ ಸ್ಪರ್ಧೆ ಮಾಡಿದ್ದರು. ಆದರೆ ಎಪ್ರಿಲ್ 6 ರಂದು ಬಾಬುರಾವ್ ಚಿಂಚನಸೂರ ಅವರಿಗೆ ರಸ್ತೆ ಅಪಘಾತವಾಗಿತ್ತು. ರಸ್ತೆ ಅಪಘಾತ ಘಟನೆ ಜರುಗುವ ಮುನ್ನ ಗುರುಮಠಕಲ್ ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರ ಮಾಡಿದ್ದರು. ರಸ್ತೆ ಅಪಘಾತ ಘಟನೆ ನಂತರ ಕೇವಲ ಒಂದು ಬಾರಿ ಅಂಬುಲೆನ್ಸ್‌ನಲ್ಲಿ ಆಗಮಿಸಿ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು, ಚಿಂಚನಸೂರ ಅವರನ್ನು ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ, ನಾನು ಕ್ಷೇತ್ರದ ಮಗನಾಗಿದ್ದೆನೆಂದು ಪ್ರಚಾರ ಮಾಡಿದ್ದರು. ಅದೇ ರೀತಿ ಚಿಂಚನಸೂರ ಅವರ ಪತ್ನಿ ಅಮರೇಶ್ವರಿ ಚಿಂಚನಸೂರ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಣ್ಣೀರು ಹಾಕಿ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರು. ಆದರೆ ಕಾಂಗ್ರೆಸ್ ನವರ ಅನುಕಂಪದ ಅಲೆ ವರ್ಕೌಟ್ ಆಗಲಿಲ್ಲ. ಖರ್ಗೆ ಅವರ ಹವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು ತಂದುಕೊಡಲಿಲ್ಲ. ಶರಣಗೌಡ ಕಂದಕೂರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಮೊದಲಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ.

ಶರಣಗೌಡ ಕಂದಕೂರು 72297 ಮತಗಳನ್ನು ಪಡೆದು , ಪ್ರತಿಸ್ಪರ್ಧಿ ಬಾಬುರಾವ್ ಚಿಂಚನಸೂರ 69718 ಮತಗಳನ್ನು ಪಡೆದಿದ್ದು, ಶರಣಗೌಡ ಕಂದಕೂರು 2579 ಮತಗಳ ಅಂತರದಿಂದ ಶರಣಗೌಡ ಕಂದಕೂರು ಗೆಲುವು ಸಾಧಿಸಿದ್ದಾರೆ. ಒಟ್ಟು 160914 ಮತಗಳು ಚಲಾವಣೆ ಆಗಿವೆ. 1416 ನೋಟಾಕ್ಕೆ ಮತ ಹಾಕಲಾಗಿದೆ. 105 ಮತಗಳು ತಿರಸ್ಕೃತ ಗೊಂಡಿವೆ.

ಇದನ್ನೂ ಓದಿ: KL Rahul: ಶಸ್ತ್ರಚಿಕಿತ್ಸೆ ಬಳಿಕ ಊರುಗೋಲಿನ ಸಹಾಯದಿಂದ ನಡೆದಾಡಲು ಆರಂಭಿಸಿದ ರಾಹುಲ್​

ಅಭ್ಯರ್ಥಿಗಳು ಪಡೆದ ಮತಗಳು

ಶರಣಗೌಡ ಕಂದಕೂರು (ಜೆಡಿಎಸ್) 72297 ಮತಗಳು, ಬಾಬುರಾವ್ ಚಿಂಚನಸೂರ (ಕಾಂಗ್ರೆಸ್) 69718 ಮತಗಳು, ಲಲಿತಾ ಅನಪುರ (ಬಿಜೆಪಿ) 14571 ಮತಗಳು, ಕೆ.ಬಿ.ವಾಸು (ಬಿಎಸ್ಪಿ) 2590 ಮತಗಳು, ನಿಜಲಿಂಗಪ್ಪ (ಕೆಆರ್‌ಎಸ್‌) 1070 ಮತಗಳು, ಮಲ್ಲಿಕಾರ್ಜುನ (ಉತ್ತಮ ಪ್ರಜಾಕೀಯ) 668 ಮತಗಳು.

Exit mobile version