ರಾಯಚೂರು: ಕಳಂಕವಿರುವ ಮುಖ್ಯಮಂತ್ರಿ (CM) ಈ ರಾಜ್ಯಕ್ಕೆ ಬೇಡ, ಬಹುಮತ ಹೊಂದಿದ ಕಾಂಗ್ರೆಸ್ ಪಕ್ಷಕ್ಕೆ, (Congress party) ಈ ಸಂದರ್ಭದಲ್ಲಿ ರಾಜ್ಯದ ಘನತೆ ಮೇಲೆತ್ತುವ ಮುಖ್ಯಮಂತ್ರಿ ಬೇಕು ಎಂದು ಕಲ್ಬುರ್ಗಿ ವಿಭಾಗದ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ತಿಂಥಣಿ ಹಾಲುಮತ ಶಕ್ತಿ ಕೇಂದ್ರದಲ್ಲಿ ಮಾತನಾಡಿದ ಶ್ರೀಗಳು, ಬೆಂಗಳೂರಿನಲ್ಲಿ ಕೆಲ ಸ್ವಾಮೀಜಿಗಳು ತಮ್ಮ ಜಾತಿಯವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಒತ್ತಡ ಹಾಕುತ್ತಿದ್ದಾರೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಧಾರ್ಮಿಕ ವ್ಯವಸ್ಥೆಗೆ ಕಳಂಕ ತಂದಂತೆ ಆಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಕೋಮುವಾದಿ ಸರ್ಕಾರ ಬೇಡ ಎಂದು ಜನರು ತಿರ್ಮಾನ ಮಾಡಿದ್ದಾರೆ. ಈ ಕಾರಣಕ್ಕಾಗಿ ಬಹುಮತ ಹೊಂದಿದ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್ ಕದ್ದದ್ದು ಹೀಗೆ! ಭಾಗ- 2
ಈ ನಿಟ್ಟಿನಲ್ಲಿ ರಾಜ್ಯದ ಘನತೆ ಮೇಲೆತ್ತುವ ಮುಖ್ಯಮಂತ್ರಿ ಅವಶ್ಯಕತೆ ಇದೆ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪರೋಕ್ಷವಾಗಿ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇನ್ನೂ ಯಾವುದೋ ಕಳಂಕವಿರುವ ಮುಖ್ಯಮಂತ್ರಿ ರಾಜ್ಯಕ್ಕೆ ಬೇಡ. ಇದನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ವಿಚಾರ ಮಾಡಲಿ ಎಂದಿದ್ದಾರೆ.
ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಕುರ್ಚಿಗಾಗಿ ಗುದ್ದಾಟ ನಡೆದಿದ್ದು, ಈ ಮಧ್ಯೆ ಹಾಲುಮತ ಸಮಾಜದ ಶ್ರೀಗಳ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಸೃಷ್ಟಿಸಿದೆ.