Site icon Vistara News

Karnataka Elections : ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನದ ಅಖಾಡವಾದ ಬಳ್ಳಾರಿ; ನಾಮಪತ್ರ ಹಾಕುವಾಗಲೇ ಜಿದ್ದಾಜಿದ್ದಿ!

Ballary politics

#image_title

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಚುನಾವಣೆಯ ಪ್ರಚಾರ ಮತ್ತು ಮತದಾನ ಪೂರ್ವದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ನಾಮಪತ್ರ‌ ಸಲ್ಲಿಸುವ ಪ್ರಕ್ರಿಯೆಯೇ ವೇದಿಕೆಯಾಗಿದೆ. ಸಾವಿರಾರು ಜನರನ್ನು ಕರೆ ತಂದು ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆಯು ಚುನಾವಣೆಯ ಆರ್ಭಟಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಅದರಲ್ಲೂ ಬಳ್ಳಾರಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರವು ಜಿದ್ದಾಜಿದ್ದಿಗೆ ನಾಮಪತ್ರ ಸಲ್ಲಿಕೆಯು ಸಾಕ್ಷಿಯಾಗಿದೆ. ಗೆಲುವಿನ ದಡ ಸೇರಲು ಏನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಮೂರು ಪಕ್ಷಗಳಿಂದಲೂ ಶಕ್ತಿ ಪ್ರದರ್ಶನ

ಹೌದು, ಇಂತಹ ವಿಚಾರಕ್ಕೆ ಯಾವುದೇ ಪಕ್ಷವು ಕಡಿಮೆ ಇಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಜನಾರ್ಧನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷ ಹೊರತಾಗಿಲ್ಲ. ಚುನಾವಣೆ ನಾಮಪತ್ರ ಸಲ್ಲಿಸಲು ಮೂರು ಪಕ್ಷಗಳು ಸಾವಿರಾರು ಜನರನ್ನು ಸೇರಿಸಿ, ಮತದಾರರನ್ನು ಸೆಳೆಯುವ ಗುಂಗಿನಲ್ಲಿದ್ದಾರೆ‌. ಇದು ಯಾವ ಪಕ್ಷಕ್ಕೂ ಸೀಮಿತವಾಗದ ಮತದಾರರ ಬೇಸರ ಮತ್ತು ಕೆಂಗಣ್ಣಿಗೆ ಸದ್ದಿಲ್ಲದ ಗುರಿಯಾಗುತ್ತಿದ್ದಾರೆ.

ಎಲ್ಲರಿಗೂ ಗೆಲುವು ಅನಿವಾರ್ಯ

ಹೇಳಿಕೇಳಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣವು ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರವಾಗಿತ್ತು. ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಘಟಾನುಘಟಿಗಳಾಗಿ ಇರುವುದು ಒಂದು ಕಡೆಯಾದರೆ ಇವರಿಗೆಲ್ಲ ಗೆಲುವು ಪ್ರತಿಷ್ಟೆಯಾಗಿದೆ. ಈ ಕಾರಣದಿಂದಾಗಿ ಚುನಾವಣೆ ಪ್ರತಿ ಹಂತದಲ್ಲೂ ಮತದಾರರನ್ನು ಸೆಳೆಯುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಅವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಶಕ್ತಿ ಪ್ರದರ್ಶನಕ್ಕೆ ಸ್ಲಂ ಮತ್ತು ಕಾರ್ಮಿಕರ ಬಳಕೆ

ಪ್ರತಿಯೊಂದು ರಾಜಕೀಯ ಪಕ್ಷಗಳ ನಾಮಪತ್ರ ಸಲ್ಲಿಕೆಯಲ್ಲಿ ಬಲ ಪ್ರದರ್ಶನಕ್ಕೆ ಸ್ಲಂ ಮತ್ತು ಕಾರ್ಮಿಕರ ಕುಟುಂಬದ ಜನರೆ ಜನರ ಬಳಕೆ! ಮೆರವಣಿಗೆ ಬಂದವರನ್ನು ಮಾಧ್ಯಮದವರು ಮಾತಿಗೆಳೆದರೆ, ಮೊನ್ನೆ ಬಂದಿದ್ವಿ, ನಿನ್ನೆ ಬಂದಿದ್ವಿ, ಇಂದು ಬಂದಿದ್ದೇವೆ, ನಾಳೆನೂ ಬರುತ್ತೇವೆ ಎನ್ನುತ್ತಾರೆ. ಬಿರು ಬೇಸಿಗೆ ಲೆಕ್ಕಿಸದೆ ಅನಿವಾರ್ಯ ಬಂದಿರುವ ಪರಿಸ್ಥಿತಿ ಎದ್ದು ಕಾಣುತ್ತಿತ್ತು.

ಇವರೇ ಘಟಾನುಘಟಿಗಳು

ಬಳ್ಳಾರಿ ನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ಸೋಮಶೇಖರ ರೆಡ್ಡಿ, ಕಾಂಗ್ರೆಸ್‌ನಿಂದ ಭರತ್ ರೆಡ್ಡಿ, ಕೆಆರ್ ಪಿಪಿಯಿಂದ
ಲಕ್ಷ್ಮಿ ಅರುಣಾ ನಾಮಪತ್ರ ಸಲ್ಲಿಸಿದ್ದಾರೆ, ಬಳ್ಳಾರಿಯ ಗ್ರಾಮೀಣದಿಂದ ಬಿಜೆಪಿಯಿಂದ ಸಚಿವ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಿದ್ದಾರೆ, ಏ.19ರಂದು ಬಳ್ಳಾರಿ ಗ್ರಾಮೀಣಕ್ಕೆ ಕಾಂಗ್ರೆಸ್ ನಿಂದ ಬಿ‌.ನಾಗೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ.

ಮತದಾನಕ್ಕೆ ಇನ್ನು 22 ದಿನಗಳು ಬಾಕಿ ಇವೆ, ಮತದಾರನ್ನು ಸೆಳೆಯಲು ಮೂರು ಪಕ್ಷಗಳು ಕಸರತ್ತು ನಡೆಸಿ ಗೆಲುವಿನ ದಡ ಸೇರಲು ಹವಣಿಸುತ್ತಿವೆ. ನಾಮಪತ್ರಕ್ಕೆ ಜನರನ್ನು‌ ಸೇರಿಸುವ ಮೂಲಕ ಜನಬಲದ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : Karnataka Elections : ಜನಾರ್ದನ ರೆಡ್ಡಿಗಿಂತಲೂ ಪತ್ನಿ ಅರುಣಲಕ್ಷ್ಮಿಯೇ ಶ್ರೀಮಂತೆ; ಸಂಪತ್ತು ಎಷ್ಟಿದ್ದರೇನೂ ಅವರ ಬಳಿ ವಾಹನಗಳೇ ಇಲ್ಲ!

Exit mobile version