Site icon Vistara News

Karnataka Elections : ಬಾಗೇಪಲ್ಲಿಯಲ್ಲಿ ಜೆಡಿಎಸ್‌- ಬಿಜೆಪಿ ಗಿಫ್ಟ್‌ ವಾರ್‌, ಯುಗಾದಿ ನೆಪದಲ್ಲಿ ಉಡುಗೊರೆ ಸುರಿಮಳೆ!

Bagepalli gift politics

#image_title

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ಗಿಫ್ಟ್‌ ಪಾಲಿಟಿಕ್ಸ್‌ (Gift politics) ಜೋರಾಗಿದೆ. ವಿಧಾನಸಭಾ ಚುನಾವಣೆ ಮತ್ತು ಯುಗಾದಿ ನೆಪದಲ್ಲಿ ಮನೆ ಮನೆಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ನಡುವೆ ಗಿಫ್ಟ್ ವಾರ್‌ ನಡೆಯುತ್ತಿದೆ.

ಬಾಗೇಪಲ್ಲಿ ಕ್ಷೇತ್ರದಲ್ಲಿ ಪ್ರಸಕ್ತ ಕಾಂಗ್ರೆಸ್‌ ಶಾಸಕರಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ಸುಬ್ಬಾರೆಡ್ಡಿ ಅವರು 14000ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಎರಡನೇ ಸ್ಥಾನದಲ್ಲಿದ್ದುದುದು ಸಿಪಿಎಂ ಅಭ್ಯರ್ಥಿಯಾಗಿದ್ದ ಜಿ.ವಿ. ಶ್ರೀರಾಮ ರೆಡ್ಡಿ (ಈಗ ನಿಧನರಾಗಿದ್ದಾರೆ),

ಈ ಬಾರಿ ಇಲ್ಲಿ ಕಾಂಗ್ರೆಸ್‌ ಸುಬ್ಬಾರೆಡ್ಡಿ ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಇತ್ತ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ರಾಮಲಿಂಗಪ್ಪ ಅವರು. ಅವರು ದೊಡ್ಡ ಮಟ್ಟದಲ್ಲಿ ಯುಗಾದಿ ಹಬ್ಬದ ಉಡುಗೊತೆ ಹಂಚುತ್ತಿದ್ದಾರೆ.

ಬಿಜೆಪಿಯಿಂದ ಮನೆ ಮನೆಗೆ ಗಿಫ್ಟ್‌

ರಾಮಲಿಂಗಪ್ಪ ಮತ್ತು ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮನೆಗೆ ಮನೆಗೆ ಹೋಗಿ ಪ್ರಚಾರ ಮಾಡುವುದರ ಜತೆಗೆ ಬೆಳ್ಳಿ ದೀಪ, ಪಂಚೆ, ಸೀರೆ, ತಟ್ಟೆ ಲೋಟ ಹಂಚುತ್ತಿದ್ದಾರೆ.

ಬಿಜೆಪಿ ಜಿಲ್ಲಾದ್ಯಕ್ಷರೂ ಆಗಿರುವ ರಾಮಲಿಂಗಪ್ಪ ಅವರು ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಗಿಫ್ಟ್ ಹಂಚಿದ ದೃಶ್ಯಗಳು ವೈರಲ್‌ ಆಗಿವೆ. ಪ್ರಚಾರಕ್ಕೆ ಹೋದವರು ಬೋಲೋ ಭಾರತ್‌ ಮಾತಾಕಿ ಜೈ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಜತೆಗೆ ಪ್ರಧಾನಿ ಮೋದಿ ಅವರ ಹೆಸರು ಹೇಳುತ್ತಿದ್ದಾರೆ.

ಜೆಡಿಎಸ್‌ನಿಂದಲೂ ಗಿಫ್ಟ್‌

ರಾಮಲಿಂಗಪ್ಪ ಅವರು ಉಡುಗೊರೆ ಹಂಚಿದ ಜತೆಜತೆಯಲ್ಲೇ ದೇ ಚಾಕಲವೇಲು ಗ್ರಾಮದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಿಂದ ಕೂಡಾ ಗಿಫ್ಟ್‌ ಹಂಚಿವೆ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ನಾಗರಾಜ ರೆಡ್ಡಿ ವರು, ಚಾಕಲವೇಲು ಗ್ರಾಮದ ಮನೆಮನೆಗೂ ಸೀರೆ. ಪಂಚೆ ಮತ್ತು ಕ್ಯಾಲೆಂಡರ್ ಹಂಚಿದ್ದಾರೆ. ಜತೆಗೆ ಅರಶಿನ ಕುಂಕುಮವೂ ಇದೆ.

ಜೆಡಿಎಸ್‌ ಗಿಫ್ಟ್‌

ಇಬ್ಬರೂ ಟಿಕೆಟ್‌ ಆಕಾಂಕ್ಷಿಗಳ ಗಿಫ್ಟ್‌ ಪಾಲಿಟಿಕ್ಸ್‌ನಿಂದ ಚಾಕಲವೇಲು ಗ್ರಾಮದಲ್ಲಿ ಜನರಿಗೆ ಖುಷಿಯೋ ಖುಷಿ. ಎರಡೂ ತಂಡಗಳ ಮಾತಿಗೆ ತಲೆದೂಗಿ ಗಿಫ್ಟ್‌ ಸ್ವೀಕರಿಸುತ್ತಿದ್ದಾರೆ.

ಶೃಂಗೇರಿಯಲ್ಲಿ ಗಿಫ್ಟ್‌ ಹಂಚಿಕೆ

ಶೃಂಗೇರಿ: ಶಾರದಾಂಬೆ ನೆಲೆವೀಡಾದ ಶೃಂಗೇರಿಯಲ್ಲಿ ಕಾಂಗ್ರೆಸ್‌ ಶಾಸಕರಾದ ಟಿ.ಡಿ. ರಾಜೇಗೌಡ ಅವರ ಭಾವಚಿತ್ರ ಇರುವ ಕುಕ್ಕರ್‌ ವಿತರಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ಕುಕ್ಕರ್‌ ವಿತರಿಸುತ್ತಿರುವುದು ಕಂಡುಬಂದಿದೆ.

ಕಾಂಗ್ರೆಸ್ ಮುಖಂಡ ಬೇಗಾರು ರಮೇಶ್ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮನೆ-ಮನೆಗೆ ಕುಕ್ಕರ್ ವಿತರಣೆ ನಡೆಯುತ್ತಿದೆ. ಇದರ ಜತೆಗೇ ಹಾಲಿ ಶಾಸಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶವೂ ಕಾಣಿಸಿಕೊಂಡಿದೆ.

ಶಾಸಕರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಭಿವೃದ್ಧಿ ಕೆಲಸ ಮಾಡುವ ಬದಲು ಕುಕ್ಕರ್ ಕೊಟ್ಟು ಮತ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಲಾಗುತ್ತಿದೆ.

ಶೃಂಗೇರಿ ಕ್ಷೇತ್ರದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಮಾಹಿತಿಗಳು ಸ್ಪಷ್ಟವಾಗಿಲ್ಲ.

ಬೆಳಗಾವಿ, ತುಮಕೂರು, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಲ್ಲಿ ಪಕ್ಷ ಬೇಧವಿಲ್ಲದೆ ಕುಕ್ಕರ್‌ ಹಂಚಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಚುನಾವಣೆ ಷೋಷಣೆಗೆ ಮುನ್ನ ನಾನಾ ಕಾರಣಗಳನ್ನು ಇಟ್ಟುಕೊಂಡು ಜನರ ಮತ ಸೆಳೆಯಲು ಈ ಪ್ರಯತ್ನ ನಡೆದಿದೆ.

ಇದನ್ನೂ ಓದಿ : Karnataka Election | ಲಕ್ಷ್ಮಿ ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ಬಳಿಕ ಈಗ ಆಣೆ ಪ್ರಮಾಣ ರಾಜಕೀಯ!

Exit mobile version