Site icon Vistara News

Karnataka Election | ಕಾಂಗ್ರೆಸ್‌ ಪಕ್ಷ ಸೇರಲಾ? ಮಧ್ಯರಾತ್ರಿ ತೋಟದ ಮನೆಯಲ್ಲಿ ಸಭೆ ನಡೆಸಿದ ಶಿವಲಿಂಗೇಗೌಡ

Shivalingeowda

ಹಾಸನ: ಜೆಡಿಎಸ್‌ನಿಂದ ಬಹುತೇಕ ಎರಡೂ ಕಾಲುಗಳನ್ನು ಹೊರಗಿಟ್ಟಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಅವರು ಮುಂದೇನು ಮಾಡುವುದು (Karnataka Election) ಎನ್ನುವ ಬಗ್ಗೆ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಜತೆ ಮಧ್ಯರಾತ್ರಿ ಮೀಟಿಂಗ್‌ ನಡೆಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ತೋಟದ ಮನೆಯಲ್ಲಿ ಶುಕ್ರವಾರ ರಾತ್ರಿ ದಿಢೀರ್ ಸಭೆ ನಡೆಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕಾಂಗ್ರೆಸ್‌ಗೆ ಹೋಗುವ ವಿಚಾರದಲ್ಲಿ ಅಭಿಪ್ರಾಯವೇನು ಎಂಬ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ತಡರಾತ್ರಿವರೆಗೂ ಬೆಂಬಲಿಗರ ಜೊತೆ ಚರ್ಚೆ ನಡೆದಿತ್ತು. ಶಾಸಕರ ಏನೇ ತೀರ್ಮಾನ ತೆಗೆದುಕೊಂಡರು ನಮ್ಮ ಬೆಂಬಲವಿದೆ ಎಂದ ಅಭಿಮಾನಿಗಳು ತಿಳಿಸಿದ್ದಾರೆನ್ನಲಾಗಿದೆ.

ಹಲವು ತಿಂಗಳುಗಳಿಂದ ಜೆಡಿಎಸ್‌ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಕೆ.ಎಂ.ಶಿವಲಿಂಗೇಗೌಡ ಅವರು, ಕಾಂಗ್ರೆಸ್ ಪಕ್ಷ ಸೇರಲು ಒಲವು ತೋರಿಸಿದ್ದಾರೆ. ಆದರೆ, ಶಿವಲಿಂಗೇಗೌಡ ಅವರ ಕಾಂಗ್ರೆಸ್‌ ಸೇರ್ಪಡೆಗೆ ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆ.ಎಂ.ಶಿವಲಿಂಗೇಗೌಡರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಗ್ರಾಮ್ಯ ಮಾತು ಮತ್ತು ನೇರ ನುಡಿಯ ಮೂಲಕ ವಿಧಾನಸಭೆಯಲ್ಲಿ ಗಮನ ಸೆಳೆಯುವ ಶಿವಲಿಂಗೇ ಗೌಡರು ಜೆಡಿಎಸ್‌ ಮೇಲೆ ಮುನಿಸಿಕೊಂಡಿದ್ದು ಕಾಂಗ್ರೆಸ್‌ಗೆ ಹೆಚ್ಚು ಹತ್ತಿರವಾಗಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಕೂಡಾ ಮಾಡಿದ್ದರು. ಈಗ ಕಾಂಗ್ರೆಸ್‌ ಸೇರುವ ಕಾಲ ಸನ್ನಿಹಿತವಾಗಿದ್ದು, ಒಂದು ಗಟ್ಟಿ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಅವರು ಸಭೆಯನ್ನು ಕರೆದಿದ್ದರು.

ಇದನ್ನೂ ಓದಿ | Mood Of Karnataka : ಕಾಂಗ್ರೆಸ್‌ 114, ಬಿಜೆಪಿ 76, ಜೆಡಿಎಸ್‌ 30 : ಹೈದರಾಬಾದ್‌ ಮೂಲದ ಸಂಸ್ಥೆಯ ಸಮೀಕ್ಷಾ ವರದಿ !

Exit mobile version