ಬೆಂಗಳೂರು: ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ರಾಜ್ಯಪಾಲ (Karnataka Governor) ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಬುಧವಾರ ಭೇಟಿ (Bengaluru News) ಮಾಡಿದರು.
ಮಧ್ಯಪ್ರದೇಶದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಮುಂಬೈ ಮತ್ತು ಕೊಯಮತ್ತೂರಿನಲ್ಲಿ ನಡೆದ ಯಶಸ್ವಿ ಹೂಡಿಕೆ ಅವಧಿಯ ನಂತರ, ಮೂರನೇ ಸಂವಾದಾತ್ಮಕ ಸಭೆಯು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ರಾಜಭವನಕ್ಕೆ ಭೇಟಿ ನೀಡಿ, ರಾಜ್ಯಪಾಲರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.
ಇದನ್ನೂ ಓದಿ: Utthana Essay Competition 2024: ಉತ್ಥಾನ ಪ್ರಬಂಧ ಸ್ಪರ್ಧೆಗೆ ಬರಹ ಕಳುಹಿಸಿ; 10,000 ರೂ. ಬಹುಮಾನ ಪಡೆಯಿರಿ!
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಮಧ್ಯಪ್ರದೇಶದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರದ ದೃಷ್ಟಿಕೋನ ಮತ್ತು ನಾವೀನ್ಯತೆಗಳನ್ನು ಎತ್ತಿ ತೋರಿಸುವ ಕೈಗಾರಿಕೋದ್ಯಮಿಗಳನ್ನು ಅವರು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಕೈಗಾರಿಕೋದ್ಯಮಿಗಳೊಂದಿಗೆ ವಿವಿಧ ವಲಯಗಳಲ್ಲಿ ತಿಳಿವಳಿಕೆ ಒಪ್ಪಂದಗಳು ಸಹ ಇರುತ್ತವೆ.