ಬೆಂಗಳೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳಿಗೆ ಹೊಸದಾಗಿ 38 ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇವರು ಪೊಲೀಸ್ ಅಕಾಡೆಮಿಯಲ್ಲಿ (Karnataka Police) ತರಬೇತಿಯನ್ನು ಮುಕ್ತಾಯಗೊಳಿಸಿದ್ದಾರೆ.
ನೂತನ ಮೋಟಾರು ವಾಹನ ನಿರೀಕ್ಷಕರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೇಶ್ ಇಲಾಖೆಗೆ ಬರ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2008ರಲ್ಲಿ ಪರೀಕ್ಷೆ ಬರೆದ ಹಾಗೂ ಕ್ಲರಿಕಲ್ ಹುದ್ದೆಯಿಂದ ಬಡ್ತಿ ಪಡೆದಿದ್ದ 38 ಮಂದಿಯನ್ನು ಇನ್‌ಸ್ಪೆಕ್ಟರ್‌ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಇವರು ಅಕಾಡೆಮಿಯಲ್ಲಿ 3 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಮಂಗಳವಾರ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಯುಕ್ತ ಎ.ಎಂ. ಯೋಗೇಶ್ ಭಾಗಿಯಾಗಿದ್ದರು. ಅವರು ಎಲ್ಲ ನೂತನ ಇನ್‌ಸ್ಪೆಕ್ಟರ್‌ಗಳಿಗೆ ಶುಭಾಶಯ ಕೋರಿದರು.
ಇದನ್ನೂ ಓದಿ: Kiccha Sudeep : ನನ್ನ ಒಳ್ಳೆಯತನ ದುರುಪಯೋಗದ ಟೂಲ್ ಅಲ್ಲ! ಖಡಕ್ ಸಂದೇಶ ಕೊಟ್ಟ ಕಿಚ್ಚ ಸುದೀಪ್
ಅಕಾಡೆಮಿ ಪ್ರಭಾರ ನಿರ್ದೇಶಕ ಡಾ. ಎಂ.ಬಿ. ಬೋರಲಿಂಗಯ್ಯ, ಉಪ ನಿರ್ದೇಶಕ ಎನ್. ನಿರಂಜನ್ ರಾಜ್ ಅರಸ್, ಸಾರಿಗೆ ಹೆಚ್ಚುವರಿ ಆಯುಕ್ತ ಉಮಾಶಂಕರ್, ನಿವೃತ್ತ ಆರ್‌ಟಿಒ ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.