Site icon Vistara News

Karnataka Politics : ಈಶ್ವರಪ್ಪರನ್ನು ಮಹಿಷಾಸುರನಿಗೆ ಹೋಲಿಸಿದ ಕಾಂಗ್ರೆಸ್‌ ನಾಯಕ ಬೇಳೂರು ಗೋಪಾಲಕೃಷ್ಣ

Beluru gopalakrishna KS Eshwarappa

#image_title

ಶಿವಮೊಗ್ಗ: ಕಾಂಗ್ರೆಸ್‌ ನಾಯಕ, ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಮಹಿಷಾಸುರನಿಗೆ ಹೋಲಿಕೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಯಡಿಯೂರಪ್ಪ ವಿದಾಯ, ಈಶ್ವರಪ್ಪ ಅವರೂ ಸೇರಿದಂತೆ ಹಲವು ವಿಚಾರಗಳ (Karnataka Politics) ಬಗ್ಗೆ ತಮ್ಮ ಅನಿಸಿಕೆ ಹೇಳಿದರು.

ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿದ್ದು ಸರಿಯಲ್ಲ

ʻʻಬಿಎಸ್‌ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ದೂರ ಇರುವುದಾಗಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಅವರು ವಿದಾಯದ ಮಾತುಗಳನ್ನು ಆಡಿದ್ದಾರೆ. ಬಿಜೆಪಿಯವರು ಅವರನ್ನೇ ಸಿಎಂ ಆಗಿ ಮುಂದುವರಿಸಬೇಕಿತ್ತು. ಆದರೆ, ಬೊಮ್ಮಾಯಿಯವರನ್ನು ಮಾಡಲಾಯಿತು. ಬಿಜೆಪಿಯ ದುಷ್ಟಕೂಟ ಅವರನ್ನು ಸಿಎಂ ಆಗಿ ಮುಂದುವರಿಸಲು ಬಿಡಲಿಲ್ಲ. ಸಿ.ಟಿ ರವಿ, ಈಶ್ವರಪ್ಪ, ಸಂತೋಷ್ ಜಿ, ಪ್ರಹ್ಲಾದ ಜೋಶಿ ಎಲ್ಲರೂ ಸೇರಿ ಕೆಳಗಿಳಿಸಿದರುʼʼ ಎಂದು ಹೇಳಿದರು ಬೇಳೂರು ಗೋಪಾಲಕೃಷ್ಣ.

ʻʻಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವ ಇಲ್ಲದೆ ಬಿಜೆಪಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಯಡಿಯೂರಪ್ಪರಂಥ ನಾಯಕರಿಗೆ ಕಣ್ಣೀರು ಹಾಕಿಸಿ, ರಾಜಕೀಯ ಅಂತ್ಯ ಮಾಡಿದ್ದು ಸರಿಯಲ್ಲ. ಅದೇ ಸ್ಥಿತಿ ಬಿಜೆಪಿ ಸರ್ಕಾರಕ್ಕೂ ಬರಲಿದೆʼʼ ಎಂದರು ಬೇಳೂರು ಗೋಪಾಲಕೃಷ್ಣ.

ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ

ʻʻಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿರುವುದು ಸಂತೋಷದ ವಿಷಯ. ಇದಕ್ಕೆ ಕಾರಣರಾದ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಆಗಮಿಸುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿರುವುದು, ಅವರನ್ನು ಬರಲೇಬೇಕು ಎಂದು ಒತ್ತಡ ಹೇರುತ್ತಿರುವುದು ಬೇಸರ ತರಿಸಿದೆ. ಕೊರೊನಾ ನಂತರದಲ್ಲಿ ವಿದ್ಯಾರ್ಥಿಗಳು ಇದೀಗ ತಾನೇ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿರುವ ಹೊತ್ತಿನಲ್ಲಿ ಅವರ ದಿಕ್ಕು ತಪ್ಪಿಸುವುದು ಸರಿಯಲ್ಲʼʼ ಎಂದು ಹೇಳಿದರು ಬೇಳೂರು ಗೋಪಾಲಕೃಷ್ಣ ಭಟ್‌.

ಮಹಿಷಾಸುರನಿಗೆ ಹೋಲಿಕೆ

ಗೃಹ ಸಚಿವ ಅಮಿತ್‌ ಶಾ ಅವರನ್ನು ಈಶ್ವರಪ್ಪ ಅವರು ವಲ್ಲಭ ಭಾಯಿ ಪಟೇಲ್‌ ಅವರಿಗೆ ಹೋಲಿಸಿದ್ದರ ಬಗ್ಗೆ ಪ್ರಸ್ತಾಪಿಸಿದ ಬೇಳೂರು ಗೋಪಾಲಕೃಷ್ಣ ಅವರು, ಅಮಿತ್ ಶಾ ಜೈಲಿಗೆ ಹೋಗಿ ಬಂದವರು, ಅವರೇನೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರೇʼ ಎಂದು ಪ್ರಶ್ನಿಸಿದರು. ಈ ಹೋಲಿಕೆಯನ್ನು ಖಂಡಿಸಿದ ಬೇಳೂರು ಅವರು, ಕೆ.ಎಸ್‌. ಈಶ್ವರಪ್ಪ ಅವರನ್ನು ಮಹಿಷಾಸುರನಿಗೆ ಹೋಲಿಸಿದರು.

Exit mobile version