Site icon Vistara News

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದ ಡಾ.ಕುಮುದಾ ಹೆಗಡೆ

ಡಾ.ಕುಮುದಾ ಹೆಗಡೆಗೆ

ಶಿರಸಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಒಂಭತ್ತನೆಯ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸ್ನಾತಕೋತ್ತರ ಪದವಿಯ ಹಸ್ತಪ್ರತಿ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದ ಶಿರಸಿಯ ಗೋಳಿ ಗ್ರಾಮದ ಡಾ.ಕುಮುದಾ ಹೆಗಡೆ ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಚಿನ್ನದ ಪದಕ ಪ್ರದಾನ ಮಾಡಿದರು.

ಕುಮುದಾ ಹೆಗಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ನಲ್ಲಿ ಅಧಿಕಾರಿಯಾಗಿರುವ ಮಹೇಂದ್ರ ಎಂ. ಹೆಗಡೆ ಅವರ ಪತ್ನಿ. ಈಗಾಗಲೇ ವ್ಯಾಕರಣಶಾಸ್ತ್ರದಲ್ಲಿ ಶೃಂಗೇರಿಯ ರಾಜೀವ್ ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ ನಾಂದೆಡ (ಮಹಾರಾಷ್ಟ್ರ) ದಿಂದ ಬಿಇಡಿ ಪದವಿ ಮತ್ತು ತಿರುಪತಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.

ಗ್ರಂಥಿ, ಶಾರದಾ, ಮೈಥಿಲಿ, ಕರೋಷ್ಟ್ರ, ಪಾಲಿ ಇತ್ಯಾದಿ ಭಾರತದ ಅನೇಕ ಪ್ರಾಚೀನ ಲಿಪಿಗಳನ್ನು ಅವರು ಆಳವಾಗಿ ಅಭ್ಯಸಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಹಸ್ತಪ್ರತಿ ಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Maha politics: ಸಂಜಯ್‌ ರಾವತ್‌ ಸೋದರನೇ ಶಿಂಧೆ ಬಣಕ್ಕೆ, ಆಗಲೇ ಗುವಾಹಟಿ ತಲುಪಿದ ಶಿಕ್ಷಣ ಸಚಿವ!

Exit mobile version