Site icon Vistara News

Karnataka Live News: ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ

Karnataka Live News Updates
Adarsha Anche

cow slaughter : ಹಿಂದುಗಳು ಪುಕ್ಕಲರಲ್ಲ! ಗೋ ಹತ್ಯೆ ತಡೆದು ಮುಸ್ಲಿಂರಿಗೆ ಆವಾಜ್ ಹಾಕಿದ ಬಸವಕಲ್ಯಾಣ ಶಾಸಕ

ಬಸವಕಲ್ಯಾಣ ನಗರದಲ್ಲಿ ಮುಸ್ಲಿಂವೊಬ್ಬರ ಮನೆಯಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಾಸಕ ಶರಣು ಸಲಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುಗಳು ಏನೆಂಬುದನ್ನು ಇನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.

cow slaughter : ಹಿಂದುಗಳು ಪುಕ್ಕಲರಲ್ಲ! ಗೋ ಹತ್ಯೆ ತಡೆದು ಮುಸ್ಲಿಂರಿಗೆ ಆವಾಜ್ ಹಾಕಿದ ಬಸವಕಲ್ಯಾಣ ಶಾಸಕ
Adarsha Anche

Smart City : ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಹಾರಗಳ ತನಿಖೆ: ಸತೀಶ್‌ ಜಾರಕಿಹೊಳಿ

ಸ್ಮಾರ್ಟ್‌ ಸಿಟಿ ಕಾಮಗಾರಿಗಳಲ್ಲಿ ಎಸ್ಟಿಮೇಟ್‌ ಹೆಚ್ಚಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಅಲ್ಲದೆ, ಇವುಗಳ ತನಿಖೆಯೂ ಆಗಬೇಕಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

Smart City : ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಹಾರಗಳ ತನಿಖೆ: ಸತೀಶ್‌ ಜಾರಕಿಹೊಳಿ
Deepa S

ಕಾರು- ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸಾವು

ಮೈಸೂರಿನ ಬಿಳಿಕೆರೆ ಬಳಿಯ ರಂಗನಕೊಪ್ಪಲು ಗೇಟ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ಕೊಡಗಿನ ದಂಪತಿ ಮೃತಪಟ್ಟಿದ್ದಾರೆ. ಕಾರು ಮತ್ತು ಕೆ‌ಎಸ್‌ಆರ್‌ಟಿಸಿ ಬಸ್ (Car-bus Accident) ಮುಖಾಮುಖಿ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ದಂಪತಿ ಜೀವ ಬಿಟ್ಟಿದ್ದಾರೆ. ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ನಿವೃತ್ತ ಪ್ರಾಂಶುಪಾಲರಾದ ಎಚ್.ಬಿ.ಬೆಳ್ಳಿಯಪ್ಪ (66) ಹಾಗೂ ಪತ್ನಿ ವೀಣಾ ಆಸುನೀಗಿದ್ದಾರೆ.

Road Accident : ಕಾರು- ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿ; ಜೀವ ಬಿಟ್ಟ ದಂಪತಿ

Deepa S

16 ಜಿಲ್ಲೆಗಳಲ್ಲಿ ಬರಗಾಲ, ಈ 10 ಜಿಲ್ಲೆಗಷ್ಟೇ ನಾಳೆ ಮಳೆಗಾಲ

ಕರ್ನಾಟಕದಲ್ಲಿ ನೈರುತ್ಯ ಮುಂಗಾರು (southwest Monsoon) ಪೂರ್ತಿ ಆವರಿಸಿತು ಎನ್ನುವಾಗಲೇ ಇದೀಗ ನಿರಾಸೆ ಮೂಡಿಸಿದೆ. ವಾಡಿಕೆಯ ಮಳೆಯಾಗುತ್ತದೆ ಎಂದು ಈ ಹಿಂದೆ ತಜ್ಞರು ಅಂದಾಜಿಸಿದ್ದರೂ, ಆದರೆ ಮಳೆಗಾಲದ ಮೊದಲ ತಿಂಗಳು ಜೂನ್‌ನಲ್ಲಿ ವಾಡಿಕೆಯ ಮಳೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮುಂಗಾರು ಮಂಕಾಗಿದ್ದು, ಜು. 2ರಂದು ಹತ್ತು ಜಿಲ್ಲೆಗಳಿಗೆ ಮಾತ್ರ ಮಳೆ ಅಲರ್ಟ್‌ (Weather report) ನೀಡಲಾಗಿದೆ.

Weather report: ಕೈ ಕೊಟ್ಟ ಮುಂಗಾರು,16 ಜಿಲ್ಲೆಗಳಲ್ಲಿ ಬರಗಾಲ; ಈ 10 ಜಿಲ್ಲೆಗಷ್ಟೇ ನಾಳೆ ಮಳೆಗಾಲ
Adarsha Anche

kodi mutt swamiji : ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ

ಈ ಬಾರಿಯ ವಿಜಯದಶಮಿಯಿಂದ ಮುಂದಿನ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ಹಲವು ಅನಾಹುತಗಳು ಸಂಭವಿಸಲಿದೆ. ಅಲ್ಲದೆ, ದೇಶದಲ್ಲಿನ ನಾಯಕತ್ವವು ಅಪಾಯವನ್ನು ಅರಿತರೆ ತಡೆಯಬಹುದು ಎಂದು ಕೋಡಿಹಳ್ಳಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

kodi mutt swamiji : ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ
Exit mobile version