Site icon Vistara News

Karnataka Live News: ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ

Karnataka Live News Updates
Ramaswamy Hulakodu

IBPS Clerk Recruitment 2023 : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ4,045 ಕ್ಲರ್ಕ್‌ ಹುದ್ದೆ; ಪದವೀದರರಿಂದ ಅರ್ಜಿ ಆಹ್ವಾನ

ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಈಗಾಲೇ ಪ್ರಕಟಿಸಿದಂತೆ 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ (IBPS Clerk Recruitment 2023) ನೇಮಕಕ್ಕಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಕ್ಕಾಗಿ ನಡೆಸಲಾಗುವ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಈ ಬಾರಿ ಒಟ್ಟು 4,045 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ.

Deepa S

ನೀನು ನನಗೆ ಬೇಕೆಬೇಕು ಎಂದು ಮಂಚಕ್ಕೆ ಕರೆದ ಆಡಳಿತಾಧಿಕಾರಿ

ಅಭಿಯೋಜನಾ ಇಲಾಖೆಯ ಆಡಳಿತಾಧಿಕಾರಿಯೊಬ್ಬ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಲೈಂಗಿಕ ಕಿರುಕುಳ ನೀಡುತ್ತಿರುವ ನಾರಾಯಣಸ್ವಾಮಿ ಎಂಬಾತ ಮೇಲೆ ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಐಪಿಸಿ 354(A) ಹಾಗೂ 506 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆ ಹಾಕಿರುವ ಅಭಿಯೋಜನಾ ಇಲಾಖೆಯ ಆಡಳಿತಾಧಿಕಾರಿ ನಾರಾಯಸ್ವಾಮಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Molestation Case : ನೀನು ನನಗೆ ಬೇಕೆಬೇಕು ಎಂದು ಮಂಚಕ್ಕೆ ಕರೆದ ಆಡಳಿತಾಧಿಕಾರಿ!
Adarsha Anche

Gruha Jyothi Scheme : ಫ್ರೀ ಕರೆಂಟ್‌ಗೆ ಅರ್ಜಿ ಸಲ್ಲಿಸಲು 3 ತಿಂಗಳು ಮಾತ್ರ ಅವಕಾಶ, ಆಮೇಲೆ ಸ್ಟಾಪ್; ಜಾರ್ಜ್‌

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಈಗಾಗಲೇ 87 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರತಿಕ್ರಿಯೆ ನೀಡಿ, ಮುಂದಿನ ಮೂರು ತಿಂಗಳು ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡುತ್ತೇವೆ. ಆಗಲೂ ಸಲ್ಲಿಸದಿದ್ದರೆ ಅಂಥವರಿಗೆ ಯೋಜನೆಯನ್ನು ಸ್ಟಾಪ್‌ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Gruha Jyothi Scheme : ಫ್ರೀ ಕರೆಂಟ್‌ಗೆ ಅರ್ಜಿ ಸಲ್ಲಿಸಲು 3 ತಿಂಗಳು ಮಾತ್ರ ಅವಕಾಶ, ಆಮೇಲೆ ಸ್ಟಾಪ್: ಜಾರ್ಜ್‌
Deepa S

ಗ್ಯಾಸ್‌ ಸಿಲಿಂಡರ್‌ ಸೋರಿಕೆ, ನಾಲ್ವರಿಗೆ ಗಾಯ

ಗ್ಯಾಸ್‌ ಸಿಲಿಂಡರ್‌ ಸೋರಿಕೆ (Gas cylinder leak) ಆಗಿದ್ದನ್ನು ಗಮನಿಸದೆ ಲೈಟರ್‌ ಆನ್‌ ಮಾಡಿದ ಪರಿಣಾಮ ನಾಲ್ವರಿಗೆ ಬೆಂಕಿ ತಗುಲಿದೆ. ಬೆಳಗಾವಿಯ ಸುಭಾಷ್ ಗಲ್ಲಿಯಲ್ಲಿ ಶನಿವಾರ (ಜು.1) ಬೆಳಗಿನ ಜಾವ ಘಟನೆ ನಡೆದಿದೆ. ಸಾರಿಗೆ ನೌಕರ ಮಂಜುನಾಥ ಅಥಣಿ, ಪತ್ನಿ ಲಕ್ಷ್ಮೀಗೆ ಗಂಭೀರ ಗಾಯವಾಗಿದ್ದು, ಮಕ್ಕಳಾದ ವೈಷ್ಣವಿ (13), ಸಾಯಿಪ್ರಸಾದ್‌(10)ಗೆ ಸಣ್ಣಪುಟ್ಟ ಗಾಯಗಳಾಗಿವೆ.

Fire Accident: ಗ್ಯಾಸ್‌ ಸಿಲಿಂಡರ್‌ ಸೋರಿಕೆ, ನಾಲ್ವರಿಗೆ ಗಾಯ ; ಮೈಸೂರು ಹೈವೆಯಲ್ಲಿ ಹೊತ್ತಿ ಉರಿದ ಕಾರು
Deepa S

ಸ್ಮಶಾನದ ಮರದಲ್ಲಿ ನೇತಾಡುತ್ತಿತ್ತು ಕೊಳೆತ ಶವ

ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ಸ್ಮಶಾನದ ಬಳಿ ಇರುವ ಮರಕ್ಕೆ ನೇಣು ಬಿಗಿದ (Suicide Case) ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪೊಲೀಸ್ ಠಾಣೆಯಿಂದ ಈ ವ್ಯಕ್ತಿ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ. ಲಾರಿ ಚಾಲಕ ಬಸವಂತ ಕುಮಾರ್ (37) ಎಂದು ತಿಳಿದು ಬಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ. ಬೋದೂರು ತಾಂಡಾದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಠ್ಠಪ್ಪ ಗೋವಿಂದಪ್ಪ ಚವ್ಹಾಣ (56) ಮೃತ ದುರ್ದೈವಿ.

Suicide Case : ಸ್ಮಶಾನದ ಮರದಲ್ಲಿ ನೇತಾಡುತ್ತಿತ್ತು ಕೊಳೆತ ಶವ!
Exit mobile version