ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಯ್ತು ಮುಂಗಾರು ಮಳೆಯಾಟ
ರಾಜ್ಯದಲ್ಲಿ ಮುಂಗಾರು (Southwest Monsoon) ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಜೂನ್ ಕಳೆದು ಜುಲೈ ತಿಂಗಳು ಬಂದರೂ ಮುಂಗಾರು ಮಾತ್ರ ಕೆಲವು ಕಡೆ ಬಲವಾಗಿದ್ದರೆ, ಒಳನಾಡಿನ ಕಡೆ ದುರ್ಬಲವಾಗಿದೆ. ಕರಾವಳಿಯಲ್ಲಿ ಮಳೆಯಾರ್ಭಟ (Rain News) ಇದ್ದರೆ ಒಳನಾಡಿನಲ್ಲಿ (Weather report) ಸಾಧಾರಣವಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಧಾರವಾಡ, ಶಿವಮೊಗ್ಗದ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ (Rain New) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಈ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 40ಕಿ.ಮೀ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
Weather report : ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಯ್ತು ಮುಂಗಾರು ಮಳೆಯಾಟ!
ಮಗನನ್ನು ಹುಡುಕಿಕೊಟ್ಟವರಿಗೆ 3 ಲಕ್ಷ ರೂ. ಬಹುಮಾನ
ಗದಗ ನಗರದ ಹೊಂಬಳ ನಾಕಾ ಬಳಿಯ ಜನತಾ ಕಾಲೋನಿಯಲ್ಲಿ 9 ವರ್ಷದ ಬಾಲಕನೊಬ್ಬ ಕಾಣೆಯಾಗಿದ್ದು, ಅವನ ಪಾಲಕರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಬಾಲಕನ ಹೆಸರು ಅಫ್ಜಲ್ ಮೌಲಾಸಾಬ್ ದಾವಲಖಾನವರ್. ಈತನನ್ನು ಹುಡುಕಿಕೊಟ್ಟವರಿಗೆ 3 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅಪ್ಪ ಮೌಲಾಸಾಬ್ ಘೋಷಿಸಿದ್ದಾರೆ.
ಮಹಾರಾಷ್ಟ್ರ ಬಸ್ ಅಪಘಾತದಲ್ಲಿ ಕಲಬುರಗಿಯ 6 ಮಂದಿ ದುರ್ಮರಣ
ಮಹಾರಾಷ್ಟ್ರದಲ್ಲಿ ನಡೆದ ಬಸ್ ಅಪಘಾತದಲ್ಲಿ ಕಲಬುರಗಿ ಮೂಲದ 6 ಮಂದಿ ಮೃತಪಟ್ಟಿದ್ದಾರೆ. ಆಣೂರು ಗ್ರಾಮದ ನಿವಾಸಿಗಳಾದ ಲಲಿತಾಬಾಯಿ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ ಪೂಜಾರಿ (40), ಸುಂದರಾಬಾಯಿ ಭರತಸಿಂಗ ರಜಪೂತ (55), ಸಾಹಿನಾಥ ಗೋವಿಂದ ಪೂಜಾರಿ (10) ಸಂಗೀತ ಮದನ ಗಾನೆ (35) ಛಾಯಾ ಹನುಮಾನ ನನವರೆ (46) ಮೃತರಾಗಿದ್ದು ಇಂದು ಅಂತ್ಯಸಂಸ್ಕಾರ ನಡೆಯಲಿದೆ. ಪ್ರಥಮ ಏಕಾದಶಿ ನಿಮಿತ್ತ ಪಂಡರಾಪುರ ದೇವರ ದರ್ಶನ ಪಡೆದು ವಾಪಸ್ ಬರುತ್ತಿದ್ದರು.
ಸಿಎಂ ಇಬ್ರಾಹಿಂ ನಾಪತ್ತೆ!
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋತ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನಾಪತ್ತೆಯಾಗಿದ್ದಾರೆ. ಅವರು ದುಬೈನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಸಿ.ಎಂ. ಇಬ್ರಾಹಿಂರನ್ನೇ ರಾಜ್ಯಾಧ್ಯಕ್ಷರನ್ನೇ ಮುಂದುವರಿಸಿದರೂ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.