Site icon Vistara News

Karnataka live news: ರಾಜ್ಯದ ಪ್ರಮುಖ ಬೆಳವಣಿಗೆಗಳ ಮಾಹಿತಿ; ಇಂದಿನಿಂದ ವಿಪಕ್ಷಗಳ ಒಕ್ಕೂಟದ ಸಭೆ

Karnataka Live News
Deepa S

ಶಿವಮೊಗ್ಗದಲ್ಲಿ ಹಾಡಹಗಲೇ ಯುವತಿ ಅಪಹರಣ!

ಶಿವಮೊಗ್ಗದಲ್ಲಿ (Shivamogga News) ಹಾಡಹಗಲೇ ಯುವತಿಯೊಬ್ಬಳ (Kidnap Case) ಅಪಹರಣವಾಗಿದೆ. ಇನ್ನೋವಾ ಕಾರಿನಲ್ಲಿ (Innova car) ಬಂದ ದುಷ್ಕರ್ಮಿಗಳು ಯುವತಿಯನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ನಗರದ ಬಸ್‌ ಸ್ಟ್ಯಾಂಡ್‌ ಹತ್ತಿರದ ಅಶೋಕ ಹೋಟೆಲ್‌ (Ashoka Hotel) ಬಳಿ ಯುವತಿಯನ್ನು ಎಳೆದು ಹೋಗಿರುವ ಘಟನೆ ಇಂದು (ಜು.17) ಬೆಳಗ್ಗೆ ನಡೆದಿದೆ.

Kidnap Case : ಶಿವಮೊಗ್ಗದಲ್ಲಿ ಹಾಡಹಗಲೇ ಯುವತಿ ಅಪಹರಣ!
Ramesha Doddapura

ಅಣಬೆಗಳು, ದರೋಡೆಕೋರರು, ಒಡೆದ ಮಡಕೆ, ಎತ್ತು-ಕೋಣ: ಪ್ರತಿಪಕ್ಷ ಸಭೆ ಬಗ್ಗೆ ಬಿಜೆಪಿ ನಾಯಕರ ನುಡಿಮುತ್ತುಗಳಿವು

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲೇಬೇಕೆಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನದ ಮಹಾಘಟಬಂಧನ ಸಭೆ (Opposition Meet) ಕುರಿತು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ದರೋಡೆಕೋರರು, ಒಡೆದ ಮಡಕೆ, ಅಣಬೆಗಳೂ ಎನ್ನುವ ನುಡಿಮುತ್ತುಗಳ ಮೂಲಕ ಈ ಸಭೆಯು ವ್ಯರ್ಥ ಪ್ರಯತ್ನ ಎಂದಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ನರೇಂದ್ರ ಮೋದಿಯವರನ್ನು ಸೋಲಿಸುವುದು ಅಸಾಧ್ಯ ಎಂದಿದ್ದಾರೆ.

Opposition Meet: ಅಣಬೆಗಳು, ದರೋಡೆಕೋರರು, ಒಡೆದ ಮಡಕೆ, ಎತ್ತು-ಕೋಣ: ಪ್ರತಿಪಕ್ಷ ಸಭೆ ಬಗ್ಗೆ ಬಿಜೆಪಿ ನಾಯಕರ ನುಡಿಮುತ್ತುಗಳಿವು
Deepa S

ಬಂಧಿಸಲು ಹೋದಾಗ ಪಿಎಸ್‌ಐ ರಿವಾಲ್ವರ್ ಕಸಿದ; ಓಡಲು ಆಗದೆ ಮರವೇರಿದ ಕಳ್ಳ

ಪಿಎಸ್‌ಐ ಸರ್ವಿಸ್ ರಿವಾಲ್ವರ್‌ ಕಸಿದುಕೊಂಡು ಕುಖ್ಯಾತ ಕಳ್ಳನೊಬ್ಬ (Theft Case) ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಅಫಜಲಪುರದ ಪಿಎಸ್‌ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್‌ ಕಿತ್ತುಕೊಂಡು (Snatch the revolver) ಖಾಜಾ ಗಾಯಕವಾಡ ಎಂಬಾತ ಓಡಿಹೋಗಿದ್ದಾನೆ.

Kalaburagi News : ಬಂಧಿಸಲು ಹೋದಾಗ ಪಿಎಸ್‌ಐ ರಿವಾಲ್ವರ್ ಕಸಿದ; ಓಡಲು ಆಗದೆ ಮರವೇರಿದ ಕಳ್ಳ!
Deepa S

ಇಸ್ಲಾಂ ಹೆಸರಲ್ಲಿ ವಿವಾದಿತ ಪೋಸ್ಟ್‌, ಎರಡು ಕೋಮಿನ ನಡುವೆ ಗಲಾಟೆ

ಮುಸ್ಲಿಂ ಯುವಕನೊಬ್ಬ ಹಿಂದು ದೇಗುಲದ ಪ್ರಾಂಗಣದಲ್ಲಿ ಮಲಗಿ ಹೈಡ್ರಾಮಾ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಯುವಕನ ಜುಟ್ಟು ಹಿಡಿದು ಹೊರಗೆ ಹಾಕಿದ್ದಾರೆ. ರಾಯಚೂರಿನ (Raichur News) ಸಿಂಧನೂರು ತಾಲೂಕಿನ ಬಂಗಾಳಿ ಕ್ಯಾಂಪ್‌ 2ರಲ್ಲಿ ಉದ್ವಿಗ್ನ ಪರಿಸ್ಥಿತಿ (Assault case) ನಿರ್ಮಾಣವಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ (Instagram post‌) ಯುವತಿ ಹೆಸರಿನ ಖಾತೆ ಮೂಲಕ ಅಲ್ಲಾ ಹಾಗೂ ಇಸ್ಲಾಂ ಬಗ್ಗೆ ವಿವಾದಾತ್ಮಕ ಪೋಸ್ಟ್‌ವೊಂದು ಹಾಕಿದ್ದಾಗಿ ಆರೋಪವೊಂದು ಕೇಳಿ ಬಂದಿದೆ.

Assault Case : ಇಸ್ಲಾಂ ಹೆಸರಲ್ಲಿ ವಿವಾದಿತ ಪೋಸ್ಟ್‌; ರಾಯಚೂರಲ್ಲಿ ಎರಡು ಕೋಮಿನ ನಡುವೆ ಗಲಾಟೆ
Deepa S

ಕರಾವಳಿ, ಮಲೆನಾಡು ಭಾಗದಲ್ಲಿಂದು ಭಾರಿ ಮಳೆ

ರಾಜ್ಯಾದ್ಯಂತ ಮಳೆ ಅಬ್ಬರ ತಗ್ಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ. ಜು.17ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Weather report) ಸಾಧ್ಯತೆಯಿದೆ.

Weather Report : ಮಲೆನಾಡು ಆಗಲಿದೆ ಮಳೆನಾಡು; ಕರಾವಳಿಯಲ್ಲೂ ಮಳೆಯಾಟ ಬಲು ಜೋರು
Exit mobile version