Site icon Vistara News

Karnataka live news: Assembly Session : 10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್‌

Basanagowda Patil Yatnal collapses in assembly

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನದ (Mahagathbandhan) ಸಭೆಗೆ ಐಎಎಸ್ ಅಧಿಕಾರಿಗಳ (IAS Officers) ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ವಿರೋಧಿಸಿ ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಡೆಪ್ಯುಟಿ ಸ್ಪೀಕರ್ (Deputy Speaker) ಮೇಲೆ ಕಾಗದ ಎಸೆದಿದ್ದ 10 ಬಿಜೆಪಿ ಸದಸ್ಯರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ.

Prabhakar R

ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಬಳ್ಳಾರಿಯ ಗುಗ್ಗರಹಟ್ಟಿಯ ನಡುರಸ್ತೆಯಲ್ಲಿ ಮಚ್ಚು ಸೇರಿ ವಿವಿಧ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಗುಗ್ಗರಹಟ್ಟಿಯ ಕಾರ್ಪೆಂಟರ್ ಬಾಷಾ (40) ಮೃತರು. ರಿಯಲ್ ಎಸ್ಟೇಟ್ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Murder Case: ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
Prabhakar R

ಚಳ್ಳಕೆರೆಯಲ್ಲಿ ಆಟೋ ಪಲ್ಟಿಯಾಗಿ 6 ವಿದ್ಯಾರ್ಥಿಗಳಿಗೆ ಗಾಯ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಬಳಿ ಆಟೋ ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಆದರ್ಶ ವಿದ್ಯಾಲಯದಿಂದ ಚಳ್ಳಕೆರೆಗೆ ಬರುವಾರ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿದೆ. ವಿದ್ಯಾರ್ಥಿ ವೆಂಕಟೇಶ್, ಶ್ರೀಧರ್ ಕೈ, ಕಾಲಿಗೆ ಗಂಭೀರ ಗಾಯಗಳಾಗಿದ್ದು, ಯುವರಾಜ್, ಮಧುಸೂಧನ್, ರೋಹಿತ್, ಕೀರ್ತಿ ಗೌಡಗೆ ಸಣ್ಣಪುಟ್ಟ ಗಾಯಗಳಾಗಿವೆ.

Auto Rickshaw Accident: ಚಳ್ಳಕೆರೆಯಲ್ಲಿ ಆಟೋ ಪಲ್ಟಿಯಾಗಿ 6 ವಿದ್ಯಾರ್ಥಿಗಳಿಗೆ ಗಾಯ
Prabhakar R

ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಚಿಂತಾಮಣಿ ತಾಲೂಕಿನ ಗಡಿಗವಾರ್ಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಕೋಡಿಗಲ್ ಗ್ರಾಮದ ನೈದಮ್ಮ, ನರಸಿಂಹಪ್ಪ ದಂಪತಿ ಪುತ್ರಿ ತನುಶ್ರೀ (14) ಮೃತ ಬಾಲಕಿ. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿ ಬುಧವಾರ ಬೆಳಗ್ಗೆ ಎಂದಾಗ ತನುಶ್ರೀ ಅಸ್ವಸ್ಥಗೊಂಡಿದ್ದಳು. ಆದರೆ, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

Chikkaballapur News: ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
Krishna Bhat

Assembly Session : 10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್‌
Krishna Bhat

Dr D Veerendra Heggade : ಸೌಜನ್ಯ ಪ್ರಕರಣದಲ್ಲಿ ಮೌನ ಮುರಿದ ಡಾ. ಹೆಗ್ಗಡೆ; ವೈಯಕ್ತಿಕ ನಿಂದನೆ ನಿಲ್ಲಿಸಿ ಎಂದು ಎಚ್ಚರಿಕೆ
Exit mobile version