ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನದ (Mahagathbandhan) ಸಭೆಗೆ ಐಎಎಸ್ ಅಧಿಕಾರಿಗಳ (IAS Officers) ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ವಿರೋಧಿಸಿ ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಡೆಪ್ಯುಟಿ ಸ್ಪೀಕರ್ (Deputy Speaker) ಮೇಲೆ ಕಾಗದ ಎಸೆದಿದ್ದ 10 ಬಿಜೆಪಿ ಸದಸ್ಯರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಐವರು ಶಂಕಿತ ಉಗ್ರರ ಬಂಧನ
ನಗರದಲ್ಲಿ ಐವರು ಶಂಕಿತ ಉಗ್ರರನ್ನು (Suspected Terrorists) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ Suspected Terrorists Arrested). ಈ ಶಂಕಿತ ಉಗ್ರರು ಬೆಂಗಳೂರು ನಗರವನ್ನು ಟಾರ್ಗೆಟ್ ಮಾಡಿದ್ದರು. ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ಲ್ಯಾನ್ ರೂಪಿಸಿದ್ದರು. ಎಲ್ಲರೂ ಸ್ಥಳೀಯರೇ ಆಗಿದ್ದಾರೆ.
ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ; ಭಾರಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲ್ಯಾನ್!
ಎರಡೂ ಬಣದಿಂದ ಅಂತರ ಕಾಯ್ದುಕೊಂಡ ಜೆಡಿಎಸ್
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಚನೆಗೊಂಡಿರುವ INDIA ಮೈತ್ರಿ ಒಕ್ಕೂಟದಿಂದ ದೂರವೇ ಉಳಿದಿರುವ ಜೆಡಿಎಸ್, ಇತ್ತ ಎನ್ಡಿಎ ಒಕ್ಕೂಟಕ್ಕೂ ಇನ್ನೂ ಮಣೆ ಹಾಕಿಲ್ಲ. ಮುಂದಿನ ವಾರ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ದೆಹಲಿ ಪ್ರವಾಸ ಮಾಡಲಿದ್ದು, ಇದೇ ವೇಳೆ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.