1,000 ರೂ. ಶುಲ್ಕ ಕಟ್ಟಿಯೂ ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೆ ಮುಂದೇನು: ಸಿಬಿಡಿಟಿ ಸ್ಪಷ್ಟನೆ
ಆದಾಯ ತೆರಿಗೆ ಇಲಾಖೆಯು ತನ್ನ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ರಾತ್ರಿ ಪೋಸ್ಟ್ ಮಾಡಿರುವ ಸ್ಪಷ್ಟನೆಯೊಂದರಲ್ಲಿ, ಪ್ಯಾನ್ – ಆಧಾರ್ ಲಿಂಕ್ ಮಾಡುವಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ವಿವರಿಸಿದೆ. ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಗಡುವು ಮುಕ್ತಾಯವಾಗಲು ಕೆಲ ಗಂಟೆಗಳಿರುವಾಗ ಈ ಸ್ಪಷ್ಟನೆ ನೀಡಿದೆ.
ಇಂದು ಮಧ್ಯ ರಾತ್ರಿಯಿಂದಲೇ ಫ್ರೀ ವಿದ್ಯುತ್; ನೀವು ಅರ್ಜಿ ಸಲ್ಲಿಸಿದ್ರಾ?
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ (Congress Government) ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಪೈಕಿ ಒಂದಾದ ಗೃಹ ಜ್ಯೋತಿ ಯೋಜನೆ (Gruhajyoti scheme) ಜುಲೈ ಒಂದರಿಂದಲೇ ಜಾರಿಗೆ ಬರಲಿದೆ. ಅಂದರೆ ಜೂನ್ 30ರ ಮಧ್ಯರಾತ್ರಿಯಿಂದಲೇ ಉಚಿತ ವಿದ್ಯುತ್ (Free Electricity) ಲೆಕ್ಕಾಚಾರ ಶುರುವಾಗಲಿದೆ.
ಬಾಲಕಿ ಮೇಲೆ ಕಳಚಿ ಬಿತ್ತು ಕಾಂಕ್ರಿಟ್ ಬಾಗಿಲು
ಕಾಂಕ್ರಿಟ್ ಬಾಗಿಲು (Door Fall) ಬಿದ್ದು ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿರುವ ಘಟನೆ ಗದಗದ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೂಮಿಕಾ ವೆಂಕಟೇಶ ದಾಸರ (4) ಗಂಭೀರ ಗಾಯಗೊಂಡವಳು. ಅಂಗನವಾಡಿ ಆವರಣದಲ್ಲಿ ಪಕ್ಕದಲ್ಲಿದ್ದ ಮನೆಯವರು ಬಾಗಿಲ ಚೌಕಟ್ಟನ್ನು ಇಟ್ಟಿದ್ದರು. ಈ ವೇಳೆ ಭೂಮಿಕಾ ಆಟುವಾಡುತ್ತಾ ಬಾಗಿಲ ಚೌಕಟ್ಟಿನ ಬಳಿ ಹೋಗಿದ್ದಾಳೆ. ಈ ವೇಳೆ ಈಕೆಯ ತಲೆ ಮೇಲೆ ಏಕಾಏಕಿ ಬಾಗಿಲು ಬಿದ್ದಿದೆ. ಇದರಿಂದಾಗಿ ಬಾಲಕಿ ತಲೆಗೆ ಗಂಭೀರ ಗಾಯವಾಗಿದೆ.
ಅಂಗನವಾಡಿಯಲ್ಲಿ ಆಡುತ್ತಿದ್ದ 4 ವರ್ಷದ ಬಾಲಕಿ ಮೇಲೆ ಕಳಚಿ ಬಿತ್ತು ಕಾಂಕ್ರಿಟ್ ಬಾಗಿಲು
SSC MTS 2023 : ಎಸ್‌ಎಸ್‌ಎಲ್‌ಸಿ ಆದವರಿಗೆ ಕೇಂದ್ರ ಸರ್ಕಾರದ 1,558 ಹುದ್ದೆ; ಎಂಟಿಎಸ್ ನೇಮಕಕ್ಕೆ ಅಧಿಸೂಚನೆ ಪ್ರಕಟ
ನವ ದೆಹಲಿ: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ ʼಸಿʼಯ 'ಮಲ್ಟಿ ಟಾಸ್ಕಿಂಗ್ ಸ್ಟಾಫ್' (ಎಂಟಿಎಸ್) (SSC MTS 2023) ಮತ್ತು ಹವಾಲ್ದಾರ್ ಹುದ್ದೆಗಳ (CBIC & CBN) ನೇಮಕಕ್ಕೆ (NON-TECHNICAL) ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
ವಾರಾಂತ್ಯದಲ್ಲಿ ಬಿಡದೆ ಬಿರುಸಾಗಿ ಸುರಿಯಲಿದ್ಯಾ ಮಳೆ?
ಕರಾವಳಿ ಭಾಗದಲ್ಲಿ ಬಲವಾಗಿರುವ ಮುಂಗಾರು ಉಳಿದ ಜಿಲ್ಲೆಗಳಲ್ಲಿ ದುರ್ಬಲಗೊಂಡಂತೆ ಕಾಣುತ್ತಿದೆ. ಮಳೆಗಾಗಿ (Rain news) ಹಲವು ಜಿಲ್ಲೆಗಳಲ್ಲಿ ಪ್ರಾರ್ಥನೆಗಳು ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಹವಾಮಾನ ಇಲಾಖೆ (Weather report) ಹಲವು ಜಿಲ್ಲೆಗಳಿಗೆ ಮಳೆ ಅಲರ್ಟ್ (rain alert) ನೀಡಿದೆ. ಜುಲೈ 1 ರಿಂದ 5ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕೆಲವೊಮ್ಮೆ ಗಾಳಿಯ ವೇಗವೂ ಹೆಚ್ಚಿರಲಿದೆ.
Weather Report : ವಾರಾಂತ್ಯದಲ್ಲಿ ಬಿಡದೆ ಬಿರುಸಾಗಿ ಸುರಿಯಲಿದ್ಯಾ ಮಳೆ?