Site icon Vistara News

Karnataka Live News: ಇಂದು ಮಧ್ಯ ರಾತ್ರಿಯಿಂದಲೇ ಫ್ರೀ ವಿದ್ಯುತ್‌; ನೀವು ಅರ್ಜಿ ಸಲ್ಲಿಸಿದ್ರಾ?

Karnataka Live News
Ramesha Doddapura

ರಾಜ್ಯ ಬಿಜೆಪಿಯಲ್ಲಿ (BJP Karnataka) ದಿನೇದಿನೆ ಹೆಚ್ಚಾಗುತ್ತಿರುವ ಬಂಡಾಯ, ವಿರೋಧಿ ಹೇಳಿಕೆಗಳು ನವದೆಹಲಿಯಲ್ಲಿರುವ ನಾಯಕರ ಕಿವಿ ತಲುಪಿದೆ. ಬಿಜೆಪಿ ಎರಡು ಬಣಗಳಾಗಿ ಪರಸ್ಪರರ ವಿರುದ್ಧ ವಾಗ್ದಾಲಿ ನಡೆಸುತತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಯಕರು ಇದೀಗ ಪರಿಹಾರಕ್ಕೆ ಮುಂದಾಗಿದ್ದಾರೆ.

BJP Karnataka: ದೆಹಲಿ ವರಿಷ್ಠರ ಕಿವಿಗೆ ಬಿದ್ದ ಕರ್ನಾಟಕ ಬಂಡಾಯ: ಯತ್ನಾಳ್‌ ಮುಂತಾದವರನ್ನು ಕರೆಸಿ ಪ್ರತ್ಯೇಕ ವಿಚಾರಣೆ
Deepa S

ಟೀಚರ್‌ ಮಗನ ಲವ್‌ ಟಾರ್ಚರ್‌ಗೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಶಾಲಾ ಶಿಕ್ಷಕ ಹಾಗೂ ಮಗನ ಕಿರುಕುಳಕ್ಕೆ (Torture) ವಿದ್ಯಾರ್ಥಿನಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾರಾ (16) ಎಂಬಾಕೆ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟಿದ್ದಾಳೆ.

Love Case: ಟೀಚರ್‌ ಮಗನ ಲವ್‌ ಟಾರ್ಚರ್‌ಗೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!
Krishna Bhat

ಸಾರ್ವತ್ರಿಕ ವರ್ಗಾವಣೆ ಇನ್ನೂ ಮೂರು ದಿನ ವಿಸ್ತರಣೆ

ಬೆಂಗಳೂರು: ಜೂನ್‌ 30ಕ್ಕೆ ಅಂತ್ಯಗೊಳ್ಳಬೇಕಾಗಿದ್ದ ಸಾರ್ವತ್ರಿಕ ವರ್ಗಾವಣೆ ಅವಕಾಶವನ್ನು ಇನ್ನೂ ಮೂರು ದಿನ ವಿಸ್ತರಿಸಲಾಗಿದೆ. ಜುಲೈ 3ನೇ ತಾರೀಕಿನ ತನಕ ವರ್ಗಾವಣೆಗೆ ಅವಕಾಶ ಒದಗಿಸಲಾಗಿದೆ. ಸಾಮಾನ್ಯವಾಗಿ ಮೇ 15ಕ್ಕೆ ವರ್ಗಾವಣೆಗಳು ಅಂತ್ಯಗೊಳ್ಳಬೇಕು. ಈ ಬಾರಿ ಅದನ್ನು 15 ದಿನ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಇನ್ನೂ ಮೂರು ಹೆಚ್ಚುವರಿ ನೀಡಲಾಗಿದೆ.

ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ವಿಪಕ್ಷಗಳು ಆರೋಪ ಮಾಡುತ್ತಿದ್ದರೂ ಅದನ್ನು ಲೆಕ್ಕಿಸದೆ ಅವಕಾಶ ವಿಸ್ತರಣೆ ಮಾಡಲಾಗಿದೆ.

Govt Employees News : ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ 3 ದಿನ ವಿಸ್ತರಣೆ
Deepa S

ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ

ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) 4 ತಿಂಗಳ ಮಗು ಬಲಿಯಾಗಿದೆ ಎಂದು ಹೆತ್ತವರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಆಯಷ್ ಮೃತಪಟ್ಟ ಮಗು. ಕೆಂಕೆರೆ ಗ್ರಾಮದ ದಿವಾಕರ್ ಮತ್ತು ಅರುಣಾ ದಂಪತಿಯ ಮಗುವಿಗೆ ಉಸಿರಾಟಕ್ಕೆ ಕೊಂಚ ಸಮಸ್ಯೆಯಾಗುತ್ತಿತ್ತು. ಹೀಗಾಗಿ ತುಮಕೂರಿನ ಕುಣಿಗಲ್ ಪಟ್ಟಣದ ಸಪ್ತಗಿರಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಆಕ್ಸಿಜನ್‌ ನೀಡಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಮಗು ಉಸಿರು ಚೆಲ್ಲಿದೆ.

Medical Negligence : ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ? ಆಕ್ಸಿಜನ್‌ ಹಾಕಿದ 10 ನಿಮಿಷಕ್ಕೆ ಮೃತ್ಯು!
Deepa S

ಲೈನ್‌ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ಮ್ಯಾನ್‌ ಸಾವು

ಕಲಬುರಗಿಯ ಅಫಜಲಪುರ ತಾಲೂಕಿನ‌ ಬೆಟಗೇರಿ ಗ್ರಾಮದಲ್ಲಿ ಲೈನ್‌ಮ್ಯಾನ್‌ಗೆ ವಿದ್ಯುತ್‌ ಪ್ರವಹಿಸಿ (Electric Shock) ಮೃತಪಟ್ಟಿದ್ದಾರೆ. ಸಂತೋಷ್ (28) ಮೃತ ದುರ್ದೈವಿ. ಜೇವರ್ಗಿ ತಾಲೂಕಿನ ಹುಲ್ಲುರು ಗ್ರಾಮದ ನಿವಾಸಿಯಾದ‌ ಸಂತೋಷ್ ದೇವಲಗಾಣಗಾಪುರದಲ್ಲಿ ಐಟಿ ಸೆಟ್ ಲೈನ್ ಸರಿಪಡಿಸಲು ಹೋಗಿದ್ದರು. ಸಂತೋಷ್‌ ಐಟಿ ಸೆಟ್ ಪರಿಶೀಲನೆ ಮಾಡಲು ವಿದ್ಯುತ್‌ ಕಂಬ ಎರಿದ್ದರು. ಎಲ್‌ಸಿ ಆಫ್ ಮಾಡಿದ್ದರೂ ವಿದ್ಯುತ್ ಸರಬರಾಜು ಆಗಿ ಸಂತೋಷ್‌ ಮೃತಪಟ್ಟಿದ್ದಾರೆ.

Electric Shock : ಲೈನ್‌ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ಮ್ಯಾನ್‌ ಸಾವು
Exit mobile version